ವಂಶಿಧರ್ ಭೋಗರಾಜು ನಿರ್ದೇಶನದ ಒನ್ ಕಟ್ ಟು ಕಟ್ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ತಲ್ವಾರ್ ನಿರ್ಮಿಸಿದ್ದಾರೆ ಮತ್ತು ಡ್ಯಾನಿಶ್ ಸೇಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರೈಮ್‌ ಸದಸ್ಯರು 3 ಫೆಬ್ರವರಿ 2022 ರಂದು ಒನ್ ಕಟ್ ಟು ಕಟ್ ಸ್ಟ್ರೀಮ್ ಮಾಡಬಹುದು. ಅಮೆಜಾನ್ ಪ್ರೈಮ್ ಇತ್ತೀಚಿನ ಮತ್ತು ವಿಶೇಷ ಚಲನಚಿತ್ರಗಳು, ಟಿವಿ ಶೋಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ಸ್ ಅನಿಯಮಿತ ಸ್ಟ್ರೀಮಿಂಗ್, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು-ಮುಕ್ತ ಸಂಗೀತ ಆಲಿಸುವಿಕೆ, ಭಾರತದ ಅತಿದೊಡ್ಡ ಉತ್ಪನ್ನಗಳ ಉಚಿತ ವೇಗದ ಡೆಲಿವರಿ, ಅಗ್ರ ಡೀಲ್‌ಗಳಿಗೆ ಮೊದಲೇ ಪ್ರವೇಶಾವಕಾಶ, ಪ್ರೈಮ್ ರೀಡಿಂಗ್‌ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್‌ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್‌ ಒದಗಿಸುತ್ತದೆ. ಇವೆಲ್ಲವೂ ರೂ. 1499 ಗಳ ವಾರ್ಷಿಕ ಸದಸ್ಯತ್ವಕ್ಕೆ ಲಭ್ಯವಿದೆ. ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಚಂದಾದಾರರಾಗುವ ಮೂಲಕ ಗ್ರಾಹಕರು ಒನ್ ಕಟ್ ಟು ಕಟ್ ಅನ್ನು ವೀಕ್ಷಿಸಬಹುದು.ಪ್ರೈಮ್‌ ವೀಡಿಯೊ ಮೊಬೈಲ್ ಆವೃತ್ತಿಯು ಏಕ-ಬಳಕೆದಾರ, ಮೊಬೈಲ್-ಮಾತ್ರ ಯೋಜನೆಯಾಗಿದ್ದು, ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿದೆ.


ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!


ಮುಂಬೈ, ಭಾರತ - 27, ಜನವರಿ, 2022 - ಅಮೆಜಾನ್ ಪ್ರೈಮ್ ವಿಡಿಯೋ ಇಂದು ಮುಂಬರುವ ಕನ್ನಡ ಹಾಸ್ಯ ಡ್ರಾಮಾ ಒನ್ ಕಟ್ ಟು ಕಟ್‌ನ ಟ್ರೈಲರ್ ಅನ್ನು ಅನಾವರಣಗೊಳಿಸಿದೆ.ಡ್ಯಾನಿಶ್ ಸೇಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಕಾಮಿಡಿ ಅಡ್ವೆಂಚರ್‌ ಫೆಬ್ರವರಿ 03, 2022 ರಂದು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸ್ಟ್ರೀಮ್ ಆಗಲಿದೆ. ಕಲೆ ಮತ್ತು ಕರಕುಶಲ ಶಿಕ್ಷಕ ಗೋಪಿಯ ಸುತ್ತ ಕಥೆ ಸುತ್ತುತ್ತದೆ. ಗೋಪಿ ಪಾತ್ರದಲ್ಲಿ ಡ್ಯಾನಿಶ್ ಸೇಟ್ ಇದ್ದಾರೆ.ನಾಲ್ಕು ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಒತ್ತೆಯಾಳಾಗಿರಿಸಿಕೊಂಡಿರುವ ಶಾಲೆಯನ್ನು ಉಳಿಸುವ ಕಾರ್ಯ ಇವರದ್ದು. ವಂಶಿಧರ್ ಭೋಗರಾಜು ನಿರ್ದೇಶನದ ಮತ್ತು ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ತಲ್ವಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರ್ನಾಡ್, ವಿನೀತ್ ‘ಬೀಪ್’  ಕುಮಾರ್ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


"ನಾವು ಪಿಆರ್‌ಕೆ ಪ್ರೊಡಕ್ಷನ್ಸ್‌ ಜೊತೆಗೆ ದೀರ್ಘಕಾಲದ ಒಡನಾಟವನ್ನು ಹೊಂದಿದ್ದೇವೆ ಮತ್ತು ದಿವಂಗತ ಪುನೀತ್ ರಾಜ್ ಕುಮಾರ್ ಅವರ ಪ್ರತಿಭೆಯನ್ನು ಗೌರವಿಸಲು, ನಾವು ಇತ್ತೀಚೆಗೆ ಮೂರು ಚಲನಚಿತ್ರಗಳನ್ನು ಘೋಷಿಸಿದ್ದೇವೆ. ಅದರಲ್ಲಿ ಒನ್ ಕಟ್ ಟು ಕಟ್ ಪ್ರಥಮ ಚಿತ್ರವಾಗಿದೆ. ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಒನ್ ಕಟ್ ಟು ಕಟ್ ಅನ್ನು ಒದಗಿಸಲು ನಾವು ಉತ್ಸಾಹ ಹೊಂದಿದ್ದೇವೆ. ಏಕೆಂದರೆ ಈ ಚಿತ್ರವು ವಿಶೇಷವಾಗಿದೆ ಎಂದು ನಾವು ನಂಬುತ್ತೇವೆ. ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾದ ಕಂಟೆಂಟ್ ಲೈಸೆನ್ಸಿಂಗ್ ಮುಖ್ಯಸ್ಥ ಮನೀಶ್ ಮೆಂಘಾನಿ ಹೇಳುವಂತೆ " ಒನ್ ಕಟ್ ಟು ಕಟ್ ವಿಶಿಷ್ಟ ಕಥೆ ಹೊಂದಿದೆ. ಅದು ಎಲ್ಲ ಭಾಗದ ಪ್ರೇಕ್ಷಕರಿಗೂ ಹೊಂದುವಂತಿದೆ. ಹೊಸ ಪ್ರತಿಭೆಗಳಿಗೆ ತಮ್ಮ ಕಥೆಗಳನ್ನು ಹೇಳಲು ಮತ್ತು ಭಾರತೀಯರನ್ನು ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರನ್ನೂ ರಂಜಿಸಲು ನಾವು ಅವಕಾಶವನ್ನು ಒದಗಿಸುತ್ತೇವೆ ಎಂಬುದಕ್ಕೆ ನಾವು ಸಂತೋಷಪಡುತ್ತೇವೆ.ಒನ್ ಕಟ್ ಟು ಕಟ್ ಅಷ್ಟೇನೂ ಪರಿಚಿತವಲ್ಲದ ಹಾಸ್ಯ ಸಾಹಸ/ಹಾಸ್ಯದ ಥ್ರಿಲ್ಲರ್, ಪ್ರಕಾರವನ್ನು ಅನ್ವೇಷಿಸುವ ನಮ್ಮ ಪ್ರಯತ್ನವಾಗಿದೆ” ಎಂದು ವಂಶಿಧರ್ ಭೋಗರಾಜು ಹೇಳಿದ್ದಾರೆ.


ಇದನ್ನೂ ಓದಿ: Budget 2022 : ಜನವರಿ 31 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ!


"ಈ ಚಿತ್ರಕ್ಕಾಗಿ ಪಿಆರ್‌ಕೆ ಪ್ರೊಡಕ್ಷನ್ಸ್‌ನೊಂದಿಗೆ ಸಹಕರಿಸಲು ಡ್ಯಾನಿಶ್ ಮತ್ತು ನನಗೆ ಖುಷಿ ಇದೆ.ಏಕೆಂದರೆ ಇದು ಯಾವಾಗಲೂ ಪ್ರೇಕ್ಷಕರಿಗೆ ತಾಜಾ ಮತ್ತು ವಿಶಿಷ್ಟವಾದದ್ದನ್ನು ತರುತ್ತದೆ. ಗೋಪಿಯಾಗಿ ಡ್ಯಾನಿಶ್‌ನ ಚೇಷ್ಟೆಗಳು ಮತ್ತು ಕಥಾಹಂದರವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಜಾಗತಿಕ ಪ್ರೇಕ್ಷಕರಿಗಾಗಿ ಈ ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಒದಗಿಸಲು ನಾನು ಉತ್ಸುಕನಾಗಿದ್ದೇನೆ,ಈ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಅಪ್ಪು ಸರ್ ಮತ್ತು ಅಶ್ವಿನಿ ಮೇಡಮ್ ಅವರಿಗೆ ನಾನು ಚಿರಋಣಿಯಾಗಿದ್ದೇನೆ. 


"ಫ್ರೆಂಚ್ ಬಿರಿಯಾನಿ ಮತ್ತು ಹಂಬಲ್ ಪೊಲಿಟಿಷಿಯನ್ ನೋಗರಾಜ್ ನಂತರ, ಇದು ಅಮೆಜಾನ್ ಪ್ರೈಮ್ ವೀಡಿಯೊದೊಂದಿಗೆ ನನ್ನ ಮೂರನೇ ಸಹಯೋಗವಾಗಿದೆ ಮತ್ತು ನನ್ನ ಪಾತ್ರ ಗೋಪಿಯನ್ನು ಪೂರ್ಣ ಪ್ರಮಾಣದ ಚಿತ್ರಕ್ಕೆ ವಿಸ್ತರಿಸುವುದರಲ್ಲಿ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ" ಎಂದು ಡ್ಯಾನಿಶ್ ಸೇಟ್ ಹೇಳಿದ್ದಾರೆ. ಈ ಚಿತ್ರವು ಪಿಆರ್‌ಕೆ ಪ್ರೊಡಕ್ಷನ್ಸ್‌ನೊಂದಿಗೆ ನನ್ನ ಎರಡನೇ ಸಹಯೋಗವಾಗಿದೆ ಮತ್ತು ನಾನು ಈ ಹಿಂದೆ ವಂಶಿಧರ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದ್ದರಿಂದ ಅವರೊಂದಿಗೆ ಮತ್ತೆ ಕೆಲಸ ಮಾಡುವುದು ನನಗೆ ಮನೆಗೆ ಮರಳಿದ ಹಾಗಿದೆ. ಗೋಪಿ ಪಾತ್ರವಾಗಿ ಪ್ರೇಕ್ಷಕರಿಂದ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿದೆ ಮತ್ತು ಈ ಚಿತ್ರದಲ್ಲಿ ಒತ್ತೆಯಾಳಾಗುವುದು ಮತ್ತು ಸಾಮಾಜಿಕ ಮಾಧ್ಯಮದ ಕಾರ್ಯಕರ್ತರನ್ನು ಎದುರಿಸುವುದನ್ನು ವೀಕ್ಷಕರು ನೋಡಬಹುದು. ತಮ್ಮದೇ ಆದ ಚಮತ್ಕಾರಿ ಮತ್ತು ಮುಗ್ಧ ಶೈಲಿಯಲ್ಲಿ ಗೋಪಿ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಕೆಲವು ಮುಖ್ಯ ಸಮಸ್ಯೆಗಳನ್ನು ಪರಿಹರಿಸುವುದು. ಪ್ರೇಕ್ಷಕರು ಚೆನ್ನಾಗಿ ನಗುತ್ತಾರೆ ಮತ್ತು ಯೋಚಿಸಲು ಏನಾದರೂ ಸಂಗತಿಗಳು ಸಿಗುತ್ತವೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದ್ದಾರೆ.


ಸಾರಾಂಶ:


ಒನ್ ಕಟ್ ಟು ಕಟ್ ವಿಡಂಬನಾತ್ಮಕ ಒಳಾರ್ಥಗಳನ್ನು ಹೊಂದಿರುವ ಹಾಸ್ಯ ಸಿನಿಮಾ ಆಗಿದೆ. ಇದು ಕಲೆ ಮತ್ತು ಕರಕುಶಲ ಶಾಲೆಯ ಶಿಕ್ಷಕರ ಸುತ್ತ ಸುತ್ತುತ್ತದೆ. ಹೊಸ ಶಾಲೆಯಲ್ಲಿ ಶಿಕ್ಷಕರ ಮೊದಲ ದಿನ ಸ್ಮರಣೀಯವಾಗುತ್ತದೆ. ಶಾಲೆಯ ತರಗತಿಯನ್ನು ನಗರದ ಕೆಲವು ಅನನುಭವಿ ನಾಗರಿಕರು ಅಪಹರಿಸುತ್ತಾರೆ. ಅವರ ಏಕೈಕ ಉದ್ದೇಶವು ಜೀವನದಲ್ಲಿ ಅವರ ಲೌಕಿಕ ನೀರಸ ದಿನಗಳಿಗೆ ಒಂದಷ್ಟು ಹೊಸತನ ನೀಡುವುದಾಗಿರುತ್ತದೆ.


ಇದನ್ನೂ ಓದಿ: ನನಸಾಯ್ತು ಅಭಿಮಾನಿಗಳ ಕನಸು..! ʼಜೇಮ್ಸ್‌ʼ ಚಿತ್ರದಲ್ಲಿ ಅಣ್ಣಾವ್ರ ಮಕ್ಕಳ ಸಮ್ಮಿಲನ..!


ಒನ್ ಕಟ್ ಟು ಕಟ್ ಜೊತೆಗೆ ಪ್ರೈಮ್ ವಿಡಿಯೋ ಕ್ಯಾಟಲಾಗ್‌ನಲ್ಲಿ ಸಾವಿರಾರು ಬಿಂಜ್ ಯೋಗ್ಯ ಟಿವಿ ಶೋಗಳು ಮತ್ತು ಚಲನಚಿತ್ರಗಳು ಇವೆ. ಭಾರತೀಯ ಚಲನಚಿತ್ರಗಳಾದ ಶೇರ್ಷಾ, ಗುಲಾಬೋ ಸಿತಾಬೋ, ಶಕುಂತಲಾ ದೇವಿ, ಕೂಲಿ ನಂ. 1, ದುರ್ಗಮತಿ, ಛಲಾಂಗ್, ಸೂರರೈ ಪೊಟ್ರು, ವಿ, ಸಿಯು ಸೂನ್, ನಿಶಬ್ದಂ, ಹಲಾಲ್ ಲವ್ ಸ್ಟೋರಿ, ಮಿಡಲ್ ಕ್ಲಾಸ್‌ ಮೆಲೋಡೀಸ್, ಮಾರ, ಭೀಮಸೇನ ನಳಮಹರಾಜ, ಮನೆ 13, ಪೆಂಗ್ವಿನ್‌, ಲಾ, ಸೂಫಿಯುಮ್ ಸುಜಾತಾಯುಮ್, ಪೊನ್ಮಗಲ್ ವಂಧಲ್ ಮತ್ತು ಫ್ರೆಂಚ್ ಬಿರಿಯಾನಿ, ಇತರೆ. ಭಾರತದ ನಂಬರ್ ಒನ್ ಮನರಂಜನಾ ತಾಣವು ಬಂದಿಶ್ ಬ್ಯಾಂಡಿಟ್ಸ್, ಬ್ರೀಥ್: ಇನ್‌ ಟು ದಿ ಶಾಡೋಸ್, ಪಾತಾಳ್‌ ಲೋಕ್, ದಿ ಫಾರ್ಗಾಟನ್ ಆರ್ಮಿ - ಆಜಾದಿ ಕೆ ಲಿಯೆ, ಫೋರ್ ಮೋರ್ ಶಾಟ್ಸ್ ಪ್ಲೀಸ್ ಎಸ್1 ಮತ್ತು 2, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್ ಎಸ್ 1 ಮತ್ತು S2, ಇನ್ಸೈಡ್ ಎಡ್ಜ್ S1, ಮತ್ತು S2, ಮತ್ತು ಮೇಡ್ ಇನ್ ಹೆವೆನ್ ಹೊಂದಿದೆ. ಪ್ರಶಸ್ತಿ-ವಿಜೇತ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್‌ ಸರಣಿಗಳಾದ ಬೋರಾಟ್‌ ಸಬ್‌ಸೀಕ್ವೆಂಟ್‌ ಮೂವೀಫಿಲ್ಮ್, ದಿ ವೀಲ್ ಆಫ್ ಟೈಮ್, ಟಾಮ್ ಕ್ಲಾನ್ಸಿಯ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸೆಲ್ ಇದ್ದು,  ಹಲವಾರು ಆಯ್ಕೆಗಳನ್ನು ಒದಗಿಸುವಲ್ಲಿ ನಮ್ಮ ಗಮನವನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಇದೆಲ್ಲವೂ ಲಭ್ಯವಿದೆ. ಸೇವೆಯು ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಶೀರ್ಷಿಕೆಗಳನ್ನು ಒಳಗೊಂಡಿದೆ.


ಇದನ್ನೂ ಓದಿ: Suraj Nambiar ಜೊತೆ ಸಪ್ತಪದಿ ತುಳಿದ Mouni Roy, ವಿವಾಹದ ವಿಡಿಯೋ ಇಲ್ಲಿದೆ


ಪ್ರೈಮ್ ಸದಸ್ಯರು ಸ್ಮಾರ್ಟ್ ಟಿವಿಗಳು, ಮೊಬೈಲ್ ಸಾಧನಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್‌ಗಳು, ಆಪಲ್ ಟಿವಿ ಇತ್ಯಾದಿಗಳಿಗಾಗಿ ಪ್ರೈಮ್ ವೀಡಿಯೊ ಅಪ್ಲಿಕೇಶನ್‌ನಲ್ಲಿ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಒನ್ ಕಟ್ ಟು ಕಟ್ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಪ್ರೈಮ್ ವೀಡಿಯೊ ಆಪ್‌ನಲ್ಲಿ, ಪ್ರೈಮ್ ಸದಸ್ಯರು ತಮ್ಮ ಮೊಬೈಲ್ ಸಾಧನಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಸಂಚಿಕೆಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ಎಲ್ಲಿಯಾದರೂ ವೀಕ್ಷಿಸಬಹುದು. ಪ್ರೈಮ್ ವೀಡಿಯೊ ಭಾರತದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರೈಮ್ ಸದಸ್ಯತ್ವದೊಂದಿಗೆ ವಾರ್ಷಿಕವಾಗಿ ಕೇವಲ ₹1499 ಗೆ ಲಭ್ಯವಿದೆ, ಹೊಸ ಗ್ರಾಹಕರು www.amazon.in/prime ನಲ್ಲಿ ಹೆಚ್ಚಿನದನ್ನು ಕಂಡುಹಿಡಿಯಬಹುದು.


ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.