Darshan: ಜೈಲಿನಲ್ಲಿ ಭಜನೆ ಮಾಡುತ್ತಾ ಕಾಲ ಕಳೆಯುತ್ತಿರುವ ನಟ ದರ್ಶನ್!
Actor Darshan in Jail: ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಸದ್ಯ ಜೈಲಿನಲ್ಲಿ ಸಮಯ ಕಳೆಯಲು ಹನುಮಾನ ಚಾಲೀಸ, ಭಜನೆ ಮಾಡಿ ಕಾಲ ಕಳೆಯುತ್ತಿದ್ದಾರೆ..
Actor Darshan: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಹೀರೋ ದರ್ಶನ್ ಅವರು ತಮ್ಮ ಗೆಳತಿ ಪವಿತ್ರಾ ಗೌಡಗೆ Instagram ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಪ್ಪತ್ತು ದಿನಗಳಿಂದ ಜೈಲು ಜೀವನಕ್ಕೆ ಒಗ್ಗಿಕೊಂಡಿರುವ ಹೀರೋ ದರ್ಶನ್ ಕ್ಷಣ ಕಳೆಯೋದಕ್ಕೂ ಪರದಾಡುತ್ತಿದ್ದಾರೆ.
ಶೂಟಿಂಗ್ ಬ್ರೇಕ್ ಎಂಜಾಯ್ ಮಾಡಿದ್ದ ಹೀರೋ ದರ್ಶನ್ ಈಗ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಜೈಲಿನಲ್ಲಿ ಒಂದು ಕ್ಷಣವೂ ಕಳೆಯಲಾಗದೆ ಹೀರೋ ದರ್ಶನ್ ಸಂಕಷ್ಟಕ್ಕೆ ಸಿಲುಕಿರುವುದು ಬಹಿರಂಗವಾಗಿದೆ. ಪಾರ್ಟಿ, ಸಿನಿಮಾ ಶೂಟಿಂಗ್ ಅಂತ ಮೋಜು ಮಸ್ತಿ ಮಾಡ್ತಿದ್ದ ಹೀರೋ ದರ್ಶನ್ ಈಗ ಹಠಾತ್ತನೆ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ-ಮದುವೆಗೆ ಅನಂತ್ ಅಂಬಾನಿ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತಾ..? ರೇಟ್ ಕೇಳಿ ಖಂಡಿತಾ ಶಾಕ್ ಆಗ್ತೀರಾ...
ಪ್ರತಿ ಕ್ಷಣ ದರ್ಶನ್ ಅವರಿಗೆ ಒಂದು ವರ್ಷದಂತೆ ಭಾಸವಾಗುತ್ತದೆ ಎನ್ನುತ್ತಾರೆ ಜೈಲು ಸಿಬ್ಬಂದಿ. ಜೈಲು ಎಂದರೆ ದೊಡ್ಡ ಶಿಕ್ಷೆ ಎಂದು ಹೇಳಬೇಕಾಗಿಲ್ಲ. ದಿನನಿತ್ಯ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಿನ್ನುತ್ತಿದ್ದ ದರ್ಶನ್ ದೇಹ ಈಗ ರಾಗಿ ಮುದ್ದೆ, ಸಾರು, ಚಪಾತಿ, ಅನ್ನ, ಸಾಂಬಾರ್ ಸಹಿಸುತ್ತಾ? ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ...
ಜೈಲು ಜೀವನಕ್ಕೆ ಒಗ್ಗಿಕೊಳ್ಳಲಾಗದೆ, ತಿಂದ ಜೈಲಿನ ಆಹಾರ ಅರಗಿಸಿಕೊಳ್ಳಲಾಗದೆ ಫುಡ್ ಪಾಯ್ಸನ್ ನಿಂದ ಬಳಲುತ್ತಿದ್ದು, ವಾಂತಿ-ಭೇದಿಯಿಂದ ತೂಕ ಇಳಿಕೆಯಂತಹ ಆರೋಗ್ಯ ಸಮಸ್ಯೆಗಳಿವೆ ಎಂದು ಹೀರೋ ದರ್ಶನ್ ಪರ ವಕೀಲರು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ-ಅಂಬಾನಿ ಮದುವೆಯಲ್ಲಿ ಅಮಿತಾಬ್ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ