ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜವರ್ಧನ್ ಇತ್ತೀಚೆಗೆ ದರ್ಶನ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ದರ್ಶನ್‌ ತಮ್ಮನ್ನೂ ಒಮ್ಮೆ ಫಾರ್ಮ್‌ ಹೌಸ್‌ಗೆ ಕರೆಸಿದ್ದರು ಎಂದು ರಾಜವರ್ಧನ್‌ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

"ದರ್ಶನ್‌ ಅರೆಸ್ಟ್‌ ಆದ ಸುದ್ದಿ ಕೇಳಿ ಸಿಕ್ಕಾಪಟ್ಟೆ ಶಾಕ್‌ ಆಯ್ತು. ಈಗಲೂ ಆ ಶಾಕ್‌ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ತುಂಬಾ ಸಪೋರ್ಟಿವ್ ಆಗಿರುವ ವ್ಯಕ್ತಿ. ನನಗೆ ಅವರು ಅಣ್ಣನಂತೆ. ಪ್ರತಿಯೊಂದು ವಿಚಾರಕ್ಕೆ ಬೆಂಬಲ ನೀಡುತ್ತಿದ್ದವರು. ಜೊತೆಯಲ್ಲಿ ಹುಟ್ಟದಿದ್ದರೂ ಅಣ್ಣನಂತೆ ಬಾಂಧವ್ಯ ಹಂಚಿಕೊಂಡಿದ್ದಾರೆ. ಅಣ್ಣನಿಗೆ ಈ ತರ ಆಗಿದ್ದು ನನ್ನ ಮನಸ್ಸಿಗೆ ತುಂಬಾ ಬೇಸರ ತಂದಿದೆ. ನ್ಯಾಯ ಸಿಗಬೇಕು ವಾಸಪ್ ಬರ್ತಾರೆ ಎಂಬ ನಂಬಿಕೆ ನನಗಿದೆ" ಎಂದು ರಾಜವರ್ಧನ್‌ ಹೇಳಿದ್ದಾರೆ. 


ಇದನ್ನೂ ಓದಿ: Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?


"ಇದು ಹಳೆಯ ಘಟನೆ. ನನಗೆ ಕಾಲು ಸರ್ಜರಿ ಆದಾಗ ದರ್ಶನ್‌ ಕಾಲ್‌ಮಾಡಿದರು. ಏನು ಕೆಲಸ ಮಾಡುತ್ತಿದ್ದೀಯಾ ಎಂದು ಕೇಳಿದರು. ಆಗ ನಾನು ಏನೂ ಇಲ್ಲ ಅಣ್ಣ ಕಾಲಿಗೆ ಏಟಾಗಿದೆ ಎಂದು ಹೇಳಿದೆ. ಸರಿ ಒಂದು ಕೆಲಸ ಮಾಡು ಕೆಳಗೆ ಬಾ ಎಂದರು. ಕೆಳಗಡೆ ಹೋಗಿ ನಿಂತೆ. ನಡಿ ಹೋಗೋಣ ಎಂದು ನನ್ನನ್ನು ಮೈಸೂರಿನ ತೋಟದ ಮನೆಯಲ್ಲಿ ಕರೆದುಕೊಂಡು ಹೋಗಿ ಇಟ್ಟುಕೊಂಡರು. ಆ ಸಮಯದಲ್ಲಿ ದರ್ಶನ್‌ ಕೈ ಕೂಡ ಪೆಟ್ಟಾಗಿತ್ತು. ಅವರಿಗೆ ಫಿಸಿಯೋ ಥೆರಪಿ ಮಾಡಿಸುತ್ತಿದ್ದರು. ಆಗ ನನ್ನ ಕಾಲಿಗೂ ಫಿಸಿಯೋ ಥೆರಪಿ ಮಾಡಿಸಿದ್ದರು" ಎಂದು ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.


"ಬಣ್ಣದ ಜೀವನದಲ್ಲಿ ನಾನು ತುಂಬಾ ನೋಡಿದ್ದೀನಿ. ನೀವು ನೋಡಿರುವುದು ಕೇಲವ 0.5% ಅಷ್ಟು ಮಾತ್ರ. ಕುಗ್ಗಿರುವ ಸಮಯದಲ್ಲಿ ಯಾರೋ ಬಂದು 10 ಲಕ್ಷ ಹಣ ಕೊಟ್ಟರೆ ಖುಷಿ ಕೊಡುವುದಿಲ್ಲ. ಒಂದು ಮಾರಲ್ ಸಪೋರ್ಟ್ ಇರಬೇಕು. ಸುಮಾರು 6 - 7 ತಿಂಗಳು ಅವರ ಜೊತೆಗೆ ಒಟ್ಟಿಗೆ ಇದ್ದೆ. ಸಮಯದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ. 


ಇದನ್ನೂ ಓದಿ: ಬಾಲಿವುಡ್‌ ಸ್ಟಾರ್ ಸಂಜಯ್ ದತ್ ಮೊದಲ ಪತ್ನಿ ನಟಿ ರಿಚಾ ಶರ್ಮಾ‌ ಇವರೇ ನೋಡಿ.! ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.