Challenging Stra Darshan : ದರ್ಶನ್‌ ಎಲ್ಲರ ಡಿಬಾಸ್‌ ಅವರು ತೆರೆಮೇಲೆ ಅಬ್ಬರಿಸೋದು ಮಾತ್ರವಲ್ಲ ಅವರ ಖಾಸಗಿ ಜೀವನದ ಕೆಲವು ವಿಚಾರಗಳು ಅಭಿಮಾನಿಗಳಿಗೆ ಇಷ್ಟವಾಗುವುದರ ಜೊತೆಗೆ ಸ್ಪೂರ್ತಿದಾಯಕವಾಗಿರುತ್ತವೆ. ಇವರು ಕೇವಲ ಒಬ್ಬ ನಟ ಅಲ್ಲ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವುದು ಅವುಗಳ ರಕ್ಷಣಾ ಕೆಲಸವ್ನನು ಮಾಡುತ್ತಾರೆ. 


COMMERCIAL BREAK
SCROLL TO CONTINUE READING

ಇನ್ನು ದರ್ಶನ್‌ ತಮ್ಮ ನಟನೆಯಿಂದಷ್ಟೇ ಅಲ್ಲದೇ ತಮ್ಮ ಕಾರ್‌ ಬೈಕ್‌ನಿಂದಲೂ ಅಭಿಮಾನಿಗಳಲ್ಲಿ ಕ್ರೇಜ್‌ ಹೆಚ್ಚಿಸುತ್ತಾರೆ. ಸಿನಿಮಾಗಳಿಂದ ಕೊಂಚ ಬಿಡುವು ಸಿಕ್ಕರು ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುತ್ತಾರೆ. ಹೀಗೆ ಕೆಲ ದಿನಗಳ ಹಿಂದೆ ದರ್ಶನ್‌ ಫ್ರೆಂಡ್ಸ್‌ ಜೊತೆ ವಿರಾಜಪೇಟೆ ಪ್ರವಾಸಕ್ಕೆ ಹೋಗಿದ್ದರು. ವಿರಾಜಪೇಟೆ ಮಾರ್ಗದಲ್ಲಿ ಸಾಕಷ್ಟು ಕಡೆಗಳಲ್ಲಿ ಬೆಟ್ಟ, ಗುಡ್ಡ, ಹಳ್ಳ, ತೊರೆ, ದಿಣ್ಣೆ, ಬಂಡೆಗಳ ಮೇಲೆ ಕಾರು, ಜೀಪ್‌ ಓಡಿಸಿದ್ದಾರೆ.


ಇದನ್ನೂ ಓದಿ-ಬ್ಯಾಕ್ ಟು ಬ್ಯಾಕ್ 15 ಸಿನಿಮಾ ಫ್ಲಾಪ್.. ಆದರೂ ಇಂದಿಗೂ ಇವರೇ ಸೂಪರ್‌ಸ್ಟಾರ್


ಇನ್ನು ದರ್ಶನ್‌ ಅವರ ಬಳಿ ಸಾಕಷ್ಟು ಕಾರ್‌ಗಳಿವೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಜೀಪ್ ರಾಂಗ್ಲರ್ ಏರಿ ದರ್ಶನ್ ವಿರಾಜಪೇಟೆ ಪ್ರವಾಸ ಕೈಗೊಂಡಿದ್ದರು. ಸದ್ಯ ಅಚ್ಚರಿಯ ವಿಷಯವೆಂದರೆ ಪ್ರವಾಸದ ವೇಳೆ ದರ್ಶನ್ ಸ್ನೇಹಿತರೊಬ್ಬರ ಟಾಟಾ ನ್ಯಾನೋ ಕಾರ್ ಏರಿ ಸುತ್ತಾಡಿದ್ದಾರೆ. 


ಹೌದು ವಿರಾಜಪೇಟೆ ಪ್ರವಾಸದ 2ನೇ ವಿಡಿಯೋ ರಿಲೀಸ್ ಆಗಿದ್ದು ಅದರಲ್ಲಿ ದರ್ಶನ್ ಹಳದಿ ಬಣ್ಣದ ನ್ಯಾನೋ ಕಾರ್ ಏರಿ ಡ್ರೈವ್ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವ ನಟ ದರ್ಶನ್‌ ನ್ಯಾನೋ ಕಾರಿನಲ್ಲಿ ಅವರು ಕೂರುವುದು ಅಂದರೇ ಆಶ್ಚರ್ಯವೇ ಸರಿ. ಆದರೂ ಕಾರ್ ಏರಿ ಜಾಲಿ ರೈಡ್ ಹೋಗಿ ಬಂದ್ದಿದ್ದು, ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 


ಇನ್ನು ಈ ವಿಡಿಯೋ ನೋಡಿದ ವೀಕ್ಷಕರು ಡಿ ಬಾಸ್‌ ಸಿಂಪ್ಲಿಸಿಟಿಗೆ ಮೆಚ್ಚಿದ್ದಾರೆ. "ನೀವು ಸ್ಟಾರ್‌ ಆದರೂ ಎಲ್ಲ ರೀತಿಯ ಲೈಪ್‌ ಎಂಜಾಯ್‌ ಮಾಡುತ್ತೀರಾ..ನಿಜವಾಗಿಯೂ ನೀವು ಗ್ರೇಟ್‌" ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ. 


ಇದನ್ನೂ ಓದಿ-ಜಗತ್ತಿನಲ್ಲೇ ಮೊದಲು ಬಾರಿಗೆ ʼಗ್ಯಾರಂಟಿ ಯೋಜನೆʼ ಮೂಲಕ ಸಾವಿರಾರು ಕೋಟಿ ಬಡ ಜನರ ಕೈಗೆ ನೀಡಲಾಗುತ್ತಿದೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.