Darshan Case : ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಈಗಾಗಲೇ ನಟ ದರ್ಶನ, ಪವಿತ್ರ ಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಡಿಬಾಸ್‌ ಬೆದರಿಸಲು ಹೇಳಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಇದೀಗ ಪ್ರಕರಣಕ್ಕೆ ಸಂಬಂಧಿಸಿ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ..


COMMERCIAL BREAK
SCROLL TO CONTINUE READING

ಹೌದು.. ರೇಣುಕಾ ಸ್ವಾಮಿ ಕೊಲೆ ಬಳಿಕ (Renukaswamy murder case) ಶವ ಸಾಗಿಸಲು ಮತ್ತು ಪೊಲೀಸರಿಗೆ ಶರಣಾಗುವಂತೆ ಕಾರ್ತಿಕ್‌ ಅಂಡ್‌ ಟೀಮ್‌ಗೆ ಆಲ್ರೆಡಿ ಪ್ರದೋಶ್‌ ಡೀಲ್‌ ನೀಡಿದ್ದ ಎಂಬ ವಿಚಾರವನ್ನು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ. ಮೂವತ್ತು ಲಕ್ಷಕ್ಕೆ ಮಾತು ಕಥೆಯಾಗಿದ್ದಾಗಿ ತಿಳಿದು ಬಂದಿದೆ.


ಇದನ್ನೂ ಓದಿ:ದರ್ಶನ್‌ ಮತ್ತು ಪವಿತ್ರಾ ಗೌಡ ಸ್ನೇಹ ಆರಂಭವಾಗಿದ್ದು ಎಲ್ಲಿಂದ ಗೊತ್ತೇ!


ಹಣವನ್ನು ಪಡೆದುಕೊಂಡು ಹೋಗಿದ್ದ ಪ್ರದೋಶ್, ಕಾರ್ತಿಕ್‌ ಅಂಡ್‌ ಟೀಮ್‌ಗೆ ಹಣವನ್ನು ತೋರಿಸಿಯೇ ಬಾಡಿಯನ್ನು ಎಸೆದು ಸರಂಡರ್ ಆಗಲು ಒಪ್ಪಿದ್ದ. ಅಲ್ಲದೆ, ಈಗ ನೀವುಗಳು ಅರೆಸ್ಟ್ ಆಗಿ, ಕೋರ್ಟ್ ಖರ್ಚು ಬೇಲ್ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೆವೆ, ನಂತರ ಹಣವನ್ನು ನೀಡ್ತಿವಿ ಎಂದು ಪ್ರದೋಶ್ ಒಪ್ಪಿಸಿದ್ದ.


ಅದ್ರಂತೆ ಒಟ್ಟು ಮೂವತ್ತು ಲಕ್ಷ ನಗದನ್ನು ಪ್ರದೋಶ್ ತನ್ನ ಹತ್ತಿರ ಇಟ್ಟುಕೊಂಡಿದ್ದ. ಈಗ ಪ್ರದೋಶ್ ಹಣ ಇಟ್ಟಿರುವ ಸ್ಥಳವನ್ನು ಸಹ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪಂಚನಾಮೇ ಮಾಡಿ ಹಣವನ್ನು ರಿಕವರಿ ಮಾಡಿಕೊಳ್ಳಲು ಪೊಲೀಸರ ತೀರ್ಮಾನ ಮಾಡಿದ್ದಾರೆ.


ಇದನ್ನೂ ಓದಿ:ಆ ಎರಡು ಸಿನಿಮಾಗಳಿಂದಾಗಿ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರಂತೆ ಈ ನಟಿ!


ಕೊಲೆ ಮಾಡಿದ ನಂತ್ರ ಕಾರ್ತಿಕ್‌ ಮತ್ತು ತಂಡ ಬಂಧನಕೊಳ್ಳಗಾದರೆ ತಾವು ಸರಳವಾಗಿ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಆರೋಪಿಗಳು ಪ್ಲ್ಯಾನ್‌ ಮಾಡಿದ್ದರು. ಸಧ್ಯ ದರ್ಶನ್ ಹಣ ನೀಡಿದ್ದೇ ಕೇಸ್‌ನಲ್ಲಿ ಸಿಕ್ಕ ಬಿಗ್ಗೆಸ್ಟ್ ಎವಿಡೆನ್ಸ್ ಆಗಿದೆ. ಕೊಲೆ ನಡೆದ ಬಳಿಕ, ರಾಘವೇಂದ್ರ, ನಿಖಿಲ್, ಕಾರ್ತಿಕ್, ಕೇಶವಮೂರ್ತಿ ಮೊದಲು ಸರೆಂಡರ್‌ ಆಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.