ದರ್ಶನ್ಗೆ ಮನೆ ಊಟ ಇಲ್ಲ, ಮತ್ತೊಂದು ವಾರ ಸೆಂಟ್ರಲ್ ಜೈಲಿನ ಊಟವೇ ಫಿಕ್ಸ್!
Darshan In Central jail: ಅನಾರೋಗ್ಯದ ಕಾರಣ ದರ್ಶನ್ ಅವರಿಗೆ ಮನೆ ಊಟ ನೀಡಲು ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು..
Home meals in Central Jail: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿ ಶಿಕ್ಷೆ ಅನುಭವಿಸುತ್ತಿರುವ ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನಗೆ ಮನೆ ಊಟ ನೀಡಲು ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು... ಆದರೆ ಈ ವಿಚಾರದಲ್ಲಿ ದರ್ಶನ್ ಗೆ ಅನಿರೀಕ್ಷಿತ ಶಾಕ್ ಸಿಕ್ಕಿದೆ.
ಇದೀಗ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಗಳು ಮನೆ ಊಟದ ಬಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಜೂನ್ 26ರೊಳಗೆ ಆದೇಶ ಪಡೆಯುವಂತೆ ಸೂಚಿಸಿದ್ದರು... ಈ ಮೂಲಕ ಮನೆ ಊಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಜೈಲ್ ಫುಡ್ ತಿನ್ನಲು ಫಿಕ್ಸ್ ಆಗಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ 27 ದಿನಗಳಿಗೂ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆದರೆ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದು, ದರ್ಶನ್ ಜೈಲಿನಲ್ಲಿ ಊಟ ಮಾಡಲಾಗದೆ ನರಳುತ್ತಿದ್ದಾರೆ ಎಂದು ಮನೆ ಊಟ ಮಾಡಲು ಅನುಮತಿ ಕೇಳಿದ್ದರು.. ಆದರೆ, ವಾದ ಆಲಿಸಿದ ಹೈಕೋರ್ಟ್ ಪೀಠದ ಮುಂದೆ ಮನೆ ಊಟ ಬಡಿಸುವ ಇತರೆ ಪ್ರಕರಣಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ದರ್ಶನ್ ಪರ ವಕೀಲರು ವಿಫಲರಾದರು. ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಮನೆ ಊಟದ ಸಮಸ್ಯೆಯ ಸಂಪೂರ್ಣ ಮಾಹಿತಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿ ಅಲ್ಲಿಯೇ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು.
ಇದನ್ನೂ ಓದಿ-ನಾನು ಅಂಬಿಕಾ ಎರಡನೇ ಗಂಡ ಅಲ್ಲವೇ ಅಲ್ಲ, ಆದರೆ.. ನಾವಿಬ್ಬರೂ..! ಹಿರಿಯ ನಟಿ ಕುರಿತು ಹೊರಬಿತ್ತು ಶಾಕಿಂಗ್ ಸುದ್ದಿ
ಇನ್ನು ಮುಂದೆ ಅಲ್ಲಿ ನೀಡಿದ ತೀರ್ಪು ಎಲ್ಲ ಕೈದಿಗಳಿಗೂ ಅನ್ವಯಿಸಬಹುದು. ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತೆಗೆದುಕೊಳ್ಳಿ. ನ್ಯಾಯಾಲಯದ ತೀರ್ಪನ್ನು ವಾರದೊಳಗೆ ಪ್ರಕಟಿಸಬಹುದು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪು ಇತರ ಕೈದಿಗಳಿಗೂ ಸಂಬಂಧಿಸಿರುತ್ತದೆ... ಜೈಲು ಕೈಪಿಡಿಯ ಸೆಕ್ಷನ್ 30 ಮನೆಯ ಊಟವನ್ನು ಉಲ್ಲೇಖಿಸುತ್ತದೆ. ಇದರ ಅಡಿಯಲ್ಲಿ ವಿಚಾರಣೆಯಲ್ಲಿರುವ ಆರೋಪಿಗಳಿಗೆ ಮನೆಯ ಊಟವನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಮನೆಯಲ್ಲಿ ಬೇಯಿಸಿದ ಊಟ, ದಿನಪತ್ರಿಕೆ ಮತ್ತು ಹಾಸಿಗೆ ದಿಂಬು ಪಡೆಯುವ ಸಾಧ್ಯತೆ ಇರುತ್ತದೆ..
ಕೊಲೆ ಪ್ರಕರಣದ ಮುಖ್ಯ ಆರೋಪಿಗಳಿಗೂ ಇತರ ಆರೋಪಿಗಳಿಗೂ ಬಹಳ ವ್ಯತ್ಯಾಸವಿದೆ. ಸ್ವಲ್ಪ ಸಮಯ ನೋಡಿಕೊಂಡು ಅವಕಾಶ ನೀಡಬಹುದು ಎಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಹೇಳಿದ್ದಾರೆ.. ವಿಚಾರಣೆಯಲ್ಲಿರುವ ಆರೋಪಿಯ ಎಲ್ಲಾ ಮೂಲಭೂತ ಹಕ್ಕುಗಳನ್ನು ದರ್ಶನ್ ಹೊಂದಿದ್ದಾರೆ. ಇದು ಮೂಲಭೂತ ಹಕ್ಕಾಗಿದ್ದರೆ, ವಿವರವಾದ ವಾದವನ್ನು ಮಾಡಬೇಕು. ಸೆಕ್ಷನ್ 30 ರ ವ್ಯಾಪ್ತಿಯನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಈ ಕುರಿತಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಆ ನ್ಯಾಯಾಲಯದಲ್ಲಿ ಏನಾದರೂ ತೊಂದರೆಯಾದರೆ ಹೈಕೋರ್ಟ್‌ಗೆ ಮೊರೆ ಹೋಗುವಂತೆ ದರ್ಶನ್ ಪರ ವಕೀಲರಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.