Darshan Renukaswamy murder case : ಕೊಲೆ ಕೇಸ್ ನಲ್ಲಿ ದರ್ಶನ್ ಮತ್ತು ಗ್ಯಾಂಗ್ ನ ಬಂಧಿಸಿರೋ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸ್ತಿದ್ದಾರೆ.. ಹದಿಮೂರು ಜನ್ರನ್ನ ಬಂಧಿಸಿ ಅನ್ನಪೂರ್ಣೇಶ್ವರಿ ಠಾಣೇಲಿಟ್ಟು ವಿಚಾರಣೆ ನಡೆಸ್ತಿದ್ದಾರೆ.. ಆದ್ರೆ ತನಿಖೆ ಹೆಸ್ರಲ್ಲಿ ಪೊಲೀಸರು ಮಾಡ್ತಿರೋದೇನು ಅನ್ನೋ ಪ್ರಶ್ನೆ ಮೂಡ್ತಿದೆ.. ಠಾಣೆ ಕಂಪ್ಲೀಟ್ ಶಾಮಿಯಾನ ಹಾಕಿಸ್ತಾರೆ.. 144ಸೆಕ್ಷನ್ ಜಾರಿ ಮಾಡ್ತಾರೆ.. ರಸ್ತೆ ಬಂದ್ ಮಾಡ್ತಾರೆ.. ಇಲ್ಲಿ ತನಿಖೆ ಮಾಡೋದ್ರ ಕಡೆ ಪೊಲೀಸರ ಗಮನ ಇದ್ಯಾ ಅಥವಾ ಕೊಲೆ ಆರೋಪಿಗಳಿಗಾಗಿ ಇಷ್ಟೆಲ್ಲಾ ಮಾಡೋದ್ರ ಕಡೆ ಇದ್ಯಾ ಅನ್ನೋ ಡೌಟ್ ಮೂಡ್ತಿದೆ..  ಆದ್ರೆ ಪೊಲೀಸರು 144 ಸೆಕ್ಷನ್ ಜಾರಿ‌ ಮಾಡಿದ್ಮೇಲೆ ಅಲ್ಲಿನ ಸ್ಥಳೀಯರು ತುಂಬಾ ತೊಂದರೆ ಅನುಭವಿಸಬೇಕಾಯ್ತು..  ಕೊನೆಗೆ ಹೋಮ್ ಮಿನಿಸ್ಟರ್ ಗೆ ಪ್ರಶ್ನೆ ಮಾಡಿದ್ಮೇಲೆ ಬುದ್ದಿ ಕಲಿತ ಪೊಲೀಸರು 11ಗಂಟೆ ನಂತರ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಟ್ರು.. 


COMMERCIAL BREAK
SCROLL TO CONTINUE READING

ಅನ್ನಪೂರ್ಣೇಶ್ವರಿ ನಗರ ಠಾಣೆ ಮುಂದಿನ ರಸ್ತೆಯ ಎರಡೂ ಕಡೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದ ಪೊಲೀಸ್ರು ಯಾರನ್ನೂ ಒಳ ಬಿಡ್ತಿರ್ಲಿಲ್ಲ.. ಆ್ಯಂಬುಲೆನ್ಸ್ ಬಂದ್ರೂ ಒಳ ಬಿಡದೆ ತಡೀತಿದ್ರು.. ಮಾಧ್ಯಮಗಳು ಕ್ಯಾಮರಾ ಹಿಡಿದ್ರೆ ಬಿಡ್ತಿದ್ರು.. ಆ್ಯಂಬುಲೆನ್ಸ್ ವಿಚಾರದಲ್ಲಿಯೇ ಈತರ ಆಗ್ತಿದ್ರೆ ಇನ್ನು ಸಾರ್ವಜನಿಕರ ವಿಷ್ಯದಲ್ಲಿ ಕೇಳ್ಬೇಕಾ.. ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಿದ್ದ ಪೊಲೀಸ್ರು ಸಾರ್ವಜನಿಕರು ಎಷ್ಟೇ ರಿಕ್ವೆಷ್ಟ್ ಮಾಡಿದ್ರು ಕೇಳ್ತಿರ್ಲಿಲ್ಲ.. ಹೋಗ್ಬೇಕು ಬಿಡಿ ಅಂತಾ ಮಹಿಳೆ ಕೇಳಿಕೊಂಡ್ರೂ  ಪೊಲೀಸರು ಬಿಡದೆ ಅಮಾನವೀಯವಾಗಿ ವರ್ತಿಸಿದ್ರು..


ಇದನ್ನೂ ಓದಿ:ರೊಮ್ಯಾನ್ಸ್‌ಗೂ ವಯಸ್ಸಿಗೂ ಸಂಬಂಧವೇ ಇಲ್ಲ.. 50 ವರ್ಷದ ಸ್ಟಾರ್ ನಟಿಯ ಬೋಲ್ಡ್ ಹೇಳಿಕೆ..!
 
ಬೆಳಗ್ಗೆ 8ರಿಂದ 11ರವರೆಗೂ ಪೊಲೀಸರು ಇದೇ ರೀತಿ ಜನ್ರ ಜೊತೆ ವರ್ತನೆ  ತೋರ್ತಿದ್ರು.. ಪೊಲೀಸರ ಈ ಸರ್ವಾಧಿಕಾರ ಧೋರಣೆಗೆ ಆಕ್ರೋಶಗೊಂಡ ಸ್ಥಳೀಯರೊಬ್ರು ಥೂ ಅಂತಾ ಉಗುದ್ರು.. ಯಾರೋ ಕೊಲೆ ಮಾಡಿದೋರಿಗೋಸ್ಕರ ನಮ್ಗೆಲ್ಲಾ ಯಾಕ್ ತೊಂದರೆ ಕೊಡ್ತಾರೆ.. ಈ ರಸ್ತೆಗೆ ಹೋಗಿಲ್ಲ ಅಂದ್ರೆ ಎರಡು ಮೂರು ಕಿಲೋ ಮೀಟರ್ ಹೋಗ್ಬೇಕು.. ಯಾಕೆ ಈತರ ತೊಂದರೆ ಕೊಡ್ತಾರೆ ಅಂದ್ರು.. 


ಇಷ್ಟೆಲ್ಲಾ ಆಗ್ತಿದ್ದನ್ನ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಅಲ್ಲಿನ ಸ್ಥಳೀಯರ ಆಕ್ರೋಶ ವರದಿ ಮಾಡಿತ್ತು.. ಕೊನೆಗೆ ಹೋಮ್ ಮಿನಿಸ್ಟರ್ ಗೆ ಪ್ರಶ್ನೆ ಮಾಡಿದ್ಮೇಲೆ ಬುದ್ದಿ ಕಲಿತ ಪೊಲೀಸರು 11ಗಂಟೆ ನಂತರ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಟ್ರು.. ಒಟ್ಟಾರೆಯಾಗಿ ಈ ಕೇಸ್ ನಲ್ಲಿ ಪೊಲೀಸರು ನಡೆದುಕೊಳ್ತಿರೋದು ಮಾತ್ರ ಹಲವು ಅನುಮಾನಗಳನ್ನ ಹುಟ್ಟಿಸ್ತಿದೆ.. ಇತಿಹಾಸದಲ್ಲಿ ಈ ರೀತಿ ಆಗದ ಘಟನೆ ಕಮಿಷನರ್ ದಯಾನಂದ್ ಅವಧಿಯಲ್ಲಿ ಆಗ್ತಿರೋದು ಬೇಸರದ ಸಂಗತಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ