ಅತ್ತಿಗೆ ಮೇಲೆ ಕಣ್ಣು ಹಾಕಿದ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್
Darshan case : ದರ್ಶನ್ ಆ್ಯಂಡ್ ಟೀಮ್ ನಿಂದ ಆದ ರೇಣುಕಾಸ್ವಾಮಿ ಹತ್ಯೆಯ ಕರಾಳತೆ ತನಿಖೆಯಲ್ಲಿ ಬಯಲಾಗುತ್ತಿದೆ. ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಹೇಗೆಲ್ಲಾ ಹಲ್ಲೆ ಮಾಡಿದ್ರು ಅನ್ನೋದರ ಒಂದೊಂದೆ ಸತ್ಯಗಳು ಹೊರಬೀಳುತ್ತೀವೆ. ಈ ಮಧ್ಯೆ ಜಾಮೀನಿಗಾಗಿ ನಾಳೆ ದರ್ಶನ್ ಕೋರ್ಟ್ ಮೊರೆ ಹೋಗೋ ಸಾಧ್ಯತೆ ಇದೆ.
Renukaswamy case : ರೇಣುಕಾಸ್ವಾಮಿ ಕೊಲೆಯಲ್ಲಿ ಡಿ ಗ್ಯಾಂಗ್ ನ ಒಂದೊಂದೆ ಘೋರಗಳು ಈಗ ಹೊರಬೀಳ್ತೀವೆ. ಅದರಲ್ಲೂ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಗೆ ನರಕ ದರ್ಶನವೇ ಆಗಿದೆ. ಶೆಡ್ ಒಳಗಡೆ ದರ್ಶನ್ ಬಂದ ಮೇಲೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಆತನ ಕಣ್ಣಿಗೂ ಬಲವಾದ ಪೆಟ್ಟು ಬಿದ್ದಿವೆ. ಇದಕ್ಕೆ ಕಾರಣ ಇಬ್ಬರು ದರ್ಶನ್ ಗೆ ಇಬ್ಬರು ಶಿಷ್ಯರ ಪ್ರಚೋದನೆ
ಯೆಸ್.. ಶೆಡ್ ಒಳಗಡೆ ದರ್ಶನ್ ಬರುವ ಮುನ್ನವೇ ರೇಣುಕಾಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಆದರೆ ದರ್ಶನ್ ಬಂದ ಮೇಲೂ ಆತನ ಮೇಲೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಅದರಲ್ಲೂ ಸಿನಿಮಾ ಸ್ಟೈಲ್ ನಲ್ಲಿ ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್ ಕೊಟ್ಟಿದ್ದ ವಿಚಾರ ಬಯಲಾಗಿದೆ. A4 ರಾಘವೇಂದ್ರ, A5 ನಂದೀಶ್ ಇಬ್ಬರು ರೇಣುಕಾಸ್ವಾಮಿ ಕೈ ಹಿಡಿದುಕೊಂಡು ದರ್ಶನ್ ಗೆ ಅತ್ತಿಗೆಯನ್ನ ಕೆಟ್ಟ ದೃಷ್ಟಿಯಿಂದ ನೋಡಿರೋ ಈ ಕಣ್ಣು ಇರ್ಬಾರ್ದು ಹೊಡೀರಿ ಬಾಸ್ ಅಂತಾ ಪ್ರಚೋದಿಸಿದ್ದಾರೆ. ಇದರಿಂದ ಕೆರಳಿಕೆಂಡವಾದ ದಾಸ ಅವಾಚ್ಯ ಶಬ್ದಗಳಿಂದ ಬೈಯುತ್ತಲೇ ತನ್ನ ಬಲಗೈನಿಂದ ರೇಣುಕಾಸ್ವಾಮಿ ಎಡಗಣ್ಣಿಗೆ ಪಂಚ್ ಕೊಟ್ಟಿದ್ದಾನೆ. ಇದರಿಂದ ರೇಣುಕಾಸ್ವಾಮಿ ಕಣ್ಣಿಗೆ ಮತ್ತಷ್ಟು ಹಾನಿಯಾಗಿದ್ದು, ಆರೋಪಿಗಳ ಮೊಬೈಲ್ ನಲ್ಲಿ ರಿಟ್ರೀವ್ ಆಗಿರುವ ಫೋಟೋದಲ್ಲಿ ಇದು ಬಯಲಾಗಿದೆ.
ಇದನ್ನೂ ಓದಿ:ಸೊಂಟ ಸೂಪರು.. ಆದ್ರೆ ಈಕೆ ಬಹಳ ಡೆಂಜರ್..! ಕಟಾರೆ, ಕುಂಗ್ ಫೂ ಎಲ್ಲಾ ಗೊತ್ತು ಈ ಸುಂದರಿಗೆ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿರೋ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ನಾಳೆ ಮುಕ್ತಾಯವಾಗಲಿದೆ. ಹೀಗಾಗಿ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಲ್ಲಿರುವ ಆರೋಪಿಗಳನ್ನು 24ನೇ ಎಸಿಎಂಎ ಕೋರ್ಟ್ ಗೆ ಹಾಜರುಪಡಿಸಲಾಗುತ್ತೆ. ಈ ವೇಳೆ ಆರೋಪಿಗಳ ಅವಧಿ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಿದೆ.
ಇನ್ನು ನಾಳೆ ಎಲ್ಲ 17 ಆರೋಪಿಗಳಿಗೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಚಾರ್ಜ್ ಶೀಟ್ ಸಿಗುತ್ತಿದ್ದಂತೆ ಕೆಲವು ಆರೋಪಿಳಿಂದ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಎ೨ ದರ್ಶನ್ ಸೆಷನ್ಸ್ ಕೋರ್ಟಿಗೆ ನಾಳೆಯೇ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡಿದ್ದು ಜೈಲು ಸಿಬ್ಬಂದಿಗಳೇ ಎಂದು ಆಗ್ನೇಯ ವಿಭಾಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ದರ್ಶನ್ ಗೆ ಚೇರ್, ಟೇಬಲ್, ಟೀ ಮಗ್ ಕೊಟ್ಟಿದ್ದು ಜೈಲು ಸಿಬ್ಬಂದಿಗಳೇ ಕೊಟ್ಟಿದ್ರಂತೆ. ಇದುವರೆಗೂ 15 ರಿಂದ 20 ಜನ ಸಿಬ್ಬಂದಿ ವಿಚಾರಣೆ ನಡೆಸಿರುವ ಪೊಲೀಸರು ಈ ಸಂಬಂಧ ಎಲ್ಲರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಸಿಬ್ಬಂದಿಗೆ ಈ ರೀತಿ ರಾಜಾತಿಥ್ಯ ನೀಡಿ ಅಂತ ಹುಕುಂ ಬಂದಿದ್ದು ಯಾರಿಂದ ಅನ್ನೋದ್ ಮಾತ್ರ ಹೊರಬಂದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.