`ಕಾಟೇರ ಚಿತ್ರದಲ್ಲಿ ಇವರೇ ಸ್ಟಾರ್. ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಬೇರೆ ಲೆವಲ್ಗೆಯಿದೆ` ಎಂದ ದರ್ಶನ್: ಹಾಗಾದ್ರೆ ಅಸಲಿ ಸ್ಟಾರ್ ಯಾರು?
Challenging Star Darshan: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಮ್ಮ ಸಿನಿಮಾದಲ್ಲಿ ಕನ್ನಡದಲ್ಲಿ ಒಬ್ಬರು ನಟರಿದ್ದಾರೆ. ಇಂತಹ ಒಬ್ಬ ನಟ ನಮ್ಮ ಸಿನಿಮಾದಲ್ಲಿದ್ದು, ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಇವರೇ ಸ್ಟಾರ್ ಎಂದು ಹೇಳದ್ದಾರೆ. ಇದರ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.
Darshan Interview in Star Sports: ಚಾಲೆಂಜಿಂಗ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇದ್ದು, ಟಾಲಿವುಡ್ ನಟರೂ ಇಲಿದ್ದಾರೆ. ಕನ್ನಡದ ನವ ನಟಿ-ಹಿರಿಯ ನಟಿ ಹೀಗೆ ದೊಡ್ಡವರು ಸಣ್ಣವರು ಅಂತ ಎಲ್ಲರೂ ಇದ್ದು, ಇವರ ಮಧ್ಯೆ ದಾಸ ದರ್ಶನ್ ಕೂಡ ಒಬ್ಬ ಕಲಾವಿದನಾಗಿಯೇ ಇದ್ದಾರೆ. ಸೂಪರ್ ಸ್ಟಾರ್ ಅನ್ನುವ ಅಹಂಕಾರ ಇಲ್ವೇದೆ, ನನ್ನ ಸೆಲೆಬ್ರಿಟಿಗಳೇ ನನ್ನ ಗೆಲ್ಲಿಸಿದ್ದಾರೆ ಅಂತಲೇ ದರ್ಶನ್ ಆಗಲೂ ಹೇಳಿದ್ದರು. ಈಗಲೂ ಹೇಳುತ್ತಾರೆ. ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಸ್ಟಾರ್ಸ್ ಸ್ಪೋಟ್ಸ್ ಗಾಗಿಯೇ ದರ್ಶನ್ ಮಾತನಾಡುವಾಗ, ಇದರ ನಡುವೆ ತಮ್ಮ ಕಾಟೇರ ಚಿತ್ರದ ಒಬ್ಬ ನಟನ ಬಗ್ಗೆ ದರ್ಶನ್ ತುಂಬಾನೆ ಮಾತನಾಡಿದ್ದಾರೆ. ಆ ಒಂದು ಮಾತನ್ನ ಕೇಳಿದ್ದಾರೆ ನಿಜಕ್ಕೂ ಹೆಮ್ಮೆ ಆಗುತ್ತದೆ.
ಹೌದು.. ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಸ್ಟಾರ್ಸ್ ಸ್ಪೋಟ್ಸ್ ಗಾಗಿಯೇ ದರ್ಶನ್‌ನ್ನ ರೂಪೇಶ್ ಶೆಟ್ಟಿ ಮಾತನಾಡಿಸಿದ್ದು, ಕ್ರಿಕೆಟ್ ಬಗ್ಗೆ ಮಾತನಾಡಿದ ದರ್ಶನ್ ಸಿನಿಮಾ ಕುರಿತು ರೂಪೇಶ್ ಕೇಳಿದ ಪ್ರಶ್ನೆಗಳಿಗೂ ಉತ್ತರ ಕೊಟ್ಟರು. ಹಾಗೆ ಕಾಟೇರ ಚಿತ್ರದ ತಾರಾ ಬಳಗದ ಕುರಿತು ದರ್ಶನ್ ಅದ್ಭುತವಾಗಿಯೇ ಹೇಳಿಕೆ ಕೊಡುವಾಗ, "ನಮ್ಮ ಸಿನಿಮಾದಲ್ಲಿ ಮಾಲಾಶ್ರೀಯವರ ಮಗಳಿದ್ದಾಳೆ, ಈ ಮೂಲಕ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರ, ಶೃತಿ ಚಿತ್ರದಲ್ಲಿ ನಟಿಸಿದ್ದಾರೆ, ಜಗಪತಿಬಾಬು ಕೂಡ ಇಲ್ಲಿಅಭಿನಯಿಸಿದ್ದಾರೆ. ಆದರೆ ಕನ್ನಡದಲ್ಲಿ ಒಬ್ಬರು ನಟರಿದ್ದಾರೆ. ಅವರನ್ನ ನೀವು ನೋಡಿದ್ದೀರಾ? ಅವರ ಹೆಸರು ಕೇಳಿದ್ದೀರಾ? ಅವರ ಹೆಸರು ಬಿರಾದಾರ್ ಅಂತಲೇ ಇದೆ" ಎಂದು ಹೇಳಿದರು.
ನಟ ದರ್ಶನ್ "ಇಂತಹ ಒಬ್ಬ ನಟ ನಮ್ಮ ಸಿನಿಮಾದಲ್ಲಿದ್ದು, ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಇವರೇ ಸ್ಟಾರ್. ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಬೇರೆ ಲೆವಲ್‌ಗೆ ಇದ್ದು, ಇದನ್ನ ನೀವು ನೋಡಬೇಕು ಅಂತಲೇ ದರ್ಶನ್ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಒಂದು ಚಿತ್ರ ಬಂದಿತ್ತು. ಇದು ರಾಷ್ಟ್ರೀಯಮಟ್ಟದಲ್ಲೂ ಹೆಸರು ಮಾಡಿತ್ತು. ಗಿರೀಶ್ ಕಾಸರವಳ್ಳಿ ಅವರ ಈ ಒಂದು ಚಿತ್ರ ಕನ್ನಡದ ನಟನನ್ನ ರಾಷ್ಟ್ರೀಯಮಟ್ಟಕ್ಕೂ ಕರೆದುಕೊಂಡು ಹೋಗಿತ್ತು. ನಿಜ, ಆ ನಟ ಬೇರೆ ಯಾರೋ ಅಲ್ಲ, ಕನ್ನಡದ ವೈಜನಾಥ್ ಬಿರಾದಾರ್ ಅಂತಲೇ ಹೇಳಬಹುದು" ಎಂದು ಮಾತನಾಡುತ್ತಾ ಹೀಗೆ ಕನ್ನಡದ ಒಬ್ಬ ಅದ್ಭುತ ನಟನಿಗೆ ದಾಸ ದರ್ಶನ್ ಗೌರವ ಕೊಟ್ಟಿದ್ದಾರೆ.
ವೈಜನಾಥ್ ಬಿರಾದಾರ್ ಕನ್ನಡದ ಅತ್ಯದ್ಭುತ ನಾಯಕ ನಟ ಆಗಿದ್ದರು, ಆದರೆ ಈ ನಟನಿಗೆ ಕನ್ನಡದವರೇ ಭಿಕ್ಷುಕನ ಪಾತ್ರಕೊಟ್ಟು ಬ್ರ್ಯಾಂಡ್ ಮಾಡಿದ್ದಾರೆ. ಅದರಿಂದ ವೈಜನಾಥ್ ಹೊರಗೆ ತಂದವರು ಗಿರೀಶ್ ಕಾಸರವಳ್ಳಿಯವರೇ ಆಗಿದ್ದು, ಕನಸೆಂಬೋ ಕುದುರೆಯನೇರಿ ಅನ್ನುವ ಸಿನಿಮಾದಲ್ಲಿ ಬಿರಾದಾರ್ ಅದ್ಭುತವಾಗಿಯೇ ನಟಿಸಿದ್ದರು. ಈ ಸಿನಿಮಾ ಬಂದು 13 ವರ್ಷಗಳೇ ಕಳೆದು ಹೋಗಿದೆ, ಆದರೆ ಮೊನ್ನೆ ಮೊನ್ನೆ ಬಂದ ಟಗರು ಪಲ್ಯ ಚಿತ್ರದಲ್ಲೂ ವೈಜನಾಥ್ ಬಿರಾದಾರ್ ಅದ್ಭುತ ರೋಲ್ ಮಾಡಿದ್ದರು. ಊರಿನ ಹಿರಿಯನ ಪಾತ್ರದಲ್ಲಿಯೇ ಕಾಣಿಸಿಕೊಂಡು ವಾರೇ ವ್ಹಾ ಅಂತಲೇ ಹೇಳುವಂತೆ ನಟಿಸಿದ್ದರು. ಅದೇ ವೈಜನಾಥ್ ಬಿರಾದಾರ್ ಅವರನ್ನ ನಾಯಕ ನಟ ದಾಸ ದರ್ಶನ್ ಕೊಂಡಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.