ಬೆಂಗಳೂರು : Darshan in Jail : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವುದು ಹಳೆಯ ವಿಚಾರ. ಹೊರಗಡೆ ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತಾರೆ ಎನ್ನುವ ಬಗ್ಗೆ ಅವರ ಅಭಿಮಾನಿಗಳು ಆಗಾಗ ಪ್ರಶ್ನೆ ಎತ್ತುತ್ತಿರುತಾರೆ. ಹಾಗಿದ್ದರೆ ಜೈಲಿನಲ್ಲಿ ದರ್ಶನ ಕಾಲ ಕಳೆಯಲು ಏನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಒಂಟಿತನಕ್ಕೆ ಜಾರಿದ್ದಾರಂತೆ.ದರ್ಶನ್ ಗೆ ಪ್ರತೀಕ್ಷಣವನ್ನೂ ಕಳೆಯುವುದು ಕಷ್ಟವಾಗುತ್ತಿದೆಯಂತೆ. ಸಮಯ ಕಳೆಯೂವುದೇ ಒಂದು ರೀತಿಯ ಚಿಂತೆಯಾಗಿದೆಯಂತೆ.ಸ್ಯಾಂಡಲ್ ವುಡ್ ಸ್ಟಾರ್ ನಟ ಸಮಯ ಕಳೆಯಲು ಜೈಲಿನಲ್ಲಿ ಟಿವಿ ಮೊರೆ ಹೋಗಿದ್ದಾರಂತೆ.ವಿಐಪಿ ಬ್ಯಾರಕ್ ನಲ್ಲಿರೋ ದರ್ಶನ್ ಸೆಲ್ ನಲ್ಲಿ ಟಿವಿ ವ್ಯವಸ್ಥೆ ಇದೆ.ಹಾಗಾಗಿ ಟಿವಿಯಲ್ಲಿ ಆಗಾಗ ಹಿಂದಿ ಫಿಲಂಗಳನ್ನ ನೋಡುತ್ತಾರೆಯಂತೆ. ನಡು ನಡುವೆ ಸ್ಪೋರ್ಟ್ಸ್ ಚಾನೆಲ್ ಗಳನ್ನ ವೀಕ್ಷಣೆ ಮಾಡ್ತಿದ್ದಾರಂತೆ. 


ಇದನ್ನೂ ಓದಿ : ಯಶ್‌ ʻಟಾಕ್ಸಿಕ್‌ʼ ಸಿನಿಮಾಗೆ ಬಾಲಿವುಡ್‌ ಕೀನ್‌ ಎಂಟ್ರಿ, ಮುಂಬೈನಿಂದ ಸಿದಾ ಬಂದೇ ಬಿಟ್ರು ʻಬದ್ಲಾಪುರ್‌ʼ ಬೆಡಗಿ..!


ಟಿವಿ ನೋಡಬೇಕು ಅಂದರೆ ಹಿಂದಿ ಫಿಲಂ ಅಥವಾ ಸ್ಪೋರ್ಟ್ಸ್ ಚಾನೆಲ್ ಆನ್ ಹೆಚ್ಚು ನೆಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಜೈಲಿನಲ್ಲಿ ಅಪ್ಪಿತಪ್ಪಿಯೂ ನ್ಯೂಸ್ ಚಾನೆಲ್ ನೋಡುತ್ತಿಲ್ಲ ಎನ್ನಲಾಗಿದೆ. ತನ್ನ ಬಗ್ಗೆ ಟಿವಿಯಲ್ಲಿ ಯಾವ ರೀತಿಯ ಸುದ್ದಿ ಬರುತ್ತಿದೆ ಎನ್ನುವ ಕುತೂಹಲಕ್ಕೂ ನ್ಯೂಸ್ ಚಾನೆಲ್ ಆನ್ ಮಾಡುತ್ತಿಲ್ಲ ಎನ್ನಲಾಗಿದೆ. 


ಇನ್ನು ಸೆಲ್ ನಲ್ಲಿ ದರ್ಶನ್ ಜೊತೆಗೆ ವಿನಯ್,ಪ್ರದೋಶ್ ಕೂಡಾ ಇದ್ದಾರೆ.ಬ್ಯಾರಕ್ ಆವರಣದಲ್ಲಿ ಆಗಾಗ ವಾಕ್ ಮಾಡುವ ದರ್ಶನ್ ಯಾರ ಜೊತೆಗೂ ಮಾತನಾಡುತ್ತಿಲ್ಲ ವಂತೆ. ಈ ಮಧ್ಯೆ, ದರ್ಶನ್ ನೋಡಲು ಜೈಲಿನಲ್ಲಿ ಕೆಲವರು ಮುಂದಾಗಿದ್ದರೆ, ಹೊರಗಡೆಯಿಂದ ಅಭಿಮಾನಿಗಳು ದರ್ಶನ್ ನೋಡಲು ದುಂಬಾಲು ಬೀಳುತ್ತಿದ್ದಾರೆ. ಆದರೆ ಯಾರ ಭೇಟಿಗೂ ದರ್ಶನ್ ಒಪ್ಪುತ್ತಿಲ್ಲ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ : ತರುಣ್ ಸುಧೀರ್ ಮತ್ತು ನಟಿ ಸೋನಲ್ ಲವ್ ಶುರು ವಾಗಲು ದರ್ಶನ್ ಕಾರಣ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.