ಕಾವೇರಿ ಹೋರಾಟದಲ್ಲಿ ನಾವಷ್ಟೇ ಕಾಣ್ಸೋದಾ?-ದಚ್ಚು ಹೇಳಿಕೆಗೆ ರೈತರ ಆಕ್ರೋಶ
Darshan Statement on Kaveri Dispute: ರಾಜ್ಯದಲ್ಲಿ ದಿನಿದಿಂದ ದಿನಕ್ಕೆ ಕಾವೇರಿ ಕಿಚ್ಚು ತಾರಕಕೇರುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್ ನೀಡಿರುವ ಹೇಳಿಕೆಯೊಂದು ವೈರಲ್ ಆಗಿದ್ದು, ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Kaveri Water Dispute: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ದಶಕಗಳಿಂದ ನಡೆಯುತ್ತಿರುವ ಕಾವೇರಿ ನೀರು ಹಂಚಿಕೆ ವಿವಾದ ಈಗ ಮತ್ತೆ ಉದ್ಭವವಾಗಿದೆ. ಈ ವಿಚಾರವಾಗಿ ತಮಿಳುನಾಡು ಹಠಮಾರಿ ಧೋರಣೆಯನ್ನು ತೋರುತ್ತಿದೆ.
ಸದ್ಯ ಈ ಕಾವೇರಿ ನೀರು ಹರಿಸುವ ವಿಚಾರವಾಗಿ ಸಾಕಷ್ಟು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟರು ಬೆಂಬಲ ಸೂಚಿಸಿದ್ದಾರೆ. ಕಾವೇರಿ ವಿಚಾರವಾಗಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಚಾಲೆಂಜಿಗ್ ಸ್ಟಾರ್ ದರ್ಶನ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆ ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ-ಸಿನಿರಂಗಕ್ಕೆ ಮತ್ತಿಬ್ಬರು ಸ್ಟಾರ್ ಪುತ್ರಿಯರ ಆಗಮನ..ಯಾರವರು ಅಂತೀರಾ?
ಕಾವೇರಿ ವಿವಾದದದ ವಿಚಾರವಾಗಿ ಮಾತನಾಡಿದ ದರ್ಶನ್ "ಕಾವೇರಿ ಹೋರಾಟ ಅಂದ್ರೆ ನಿಮ್ಮ ಕಣ್ಣಿಗೆ ನಾವೇನಾ ಕಾಣೋದು" ಎಂದು ಜನತೆಗೆ ಪ್ರಶ್ನಿಸಿದ್ದರು. ಇದೀಗ ಈ ಹೇಳಿಕೆ ವಿಚಾರವಾಗಿ ಕೋಪಗೊಂಡ ಪ್ರತಿಭಟನಾಕಾರರು "ದರ್ಶನ್ ಅವರು ಬಂದರೇ ನಮ್ಮ ಹೋರಾಟಕ್ಕೆ ದೊಡ್ಡ ಬಲ ಸಿಗುತ್ತೆ ಎಂದು ನಾವುಇ ಭಾವಿಸಿದ್ದೆವು...ದರ್ಶನ್ ಈ ರೀತಿ ಮಾತನಾಡಬಾರದಿತ್ತು, ನಾವು ಕಳೆದ ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ನೀವು ನಮಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದೀರಿ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಂದುವರೆದು ಮಾತನಾಡಿದ ಪ್ರತಿಭಟನಾಕಾರರು "ನಾವು ನಿಮಗೆ ಹೋರಾಟಕ್ಕೆ ಆಮಂತ್ರಣ ನೀಡಿದ್ದೇವೆ..ಆದರೆ ನೀವು ಅದನ್ನು ತಪ್ಪಾಗಿ ಭಾವಿಸಿ ಈ ಈ ರೀತಿ ಮಾತನಾಡಿದ್ದು ತಪ್ಪು. ಕಾವೇರಿ ಹರಿಯುವ ಜಿಲ್ಲೆಯವಾರದ ನೀವು ಹೋರಾಟಗಾರರ ಬಗ್ಗೆ ಹೀಗೆ ಮಾತನಾಡುವದು ತಪ್ಪು..ಈ ಕೂಡಲೇ ನೀವು ರೈತರಿಗೆ ಕ್ಷಮೆ ಕೇಳಬೇಕು. ಜೊತೆಗೆ ಒಬ್ಬ ಜವಾಬ್ದಾರಿಯುತ ನಟನಾಗಿ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿ" ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ-ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.