ದರ್ಶನ್ - ಸುದೀಪ್ 6 ವರ್ಷದ ಮುನಿಸು ಕೊನೆಯಾಯ್ತಾ? ಒಟ್ಟಿಗೆ ಸಿನಿಮಾ ಮಾಡ್ತಾರಾ?
Kichcha Sudeep darshan patchup : ಇಬ್ಬರು ಸ್ಟಾರ್‌ಗಳ ನಡುವಿನ ಮುನಿಸು ಯಾವಾಗಲೂ ಸುದ್ದಿಯಾಗುತ್ತಿತ್ತು. ವರ್ಷಗಳ ಕಾಲ ನಡೆದ ಈ ಮುನಿಸನ್ನು ಮರೆತು ಇಬ್ಬರೂ ಒಂದಾಗಿದ್ದಾರೆ ಎಂದು ವರದಿಯಾಗಿದೆ.
Darshan Sudeep Photos : ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ಅವರು 6 ವರ್ಷದ ಮುನಿಸಿಗೆ ಅಂತ್ಯ ಹಾಡಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಸ್ಟಾರ್‌ಗಳ ನಡುವಿನ ಮುನಿಸು ಯಾವಾಗಲೂ ಸುದ್ದಿಯಾಗುತ್ತಿತ್ತು. ವರ್ಷಗಳ ಕಾಲ ನಡೆದ ಈ ಮುನಿಸನ್ನು ಮರೆತು ಇಬ್ಬರೂ ಒಂದಾಗಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರು ಸುಮಲತಾ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಇದೀಗ ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ನಡುವಿನ ಭಿನ್ನಾಭಿಪ್ರಾಯ ಬಹುತೇಕ ಅಂತ್ಯಗೊಂಡಂತೆ ತೋರುತ್ತಿದ್ದು, ಶೀಘ್ರದಲ್ಲೇ ಇಬ್ಬರು ತಾರೆಯರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಗಾಳಿಸುದ್ದಿಯೂ ಶುರುವಾಗಿದೆ. ಆರು ವರ್ಷಗಳ ನಂತರ ಇಬ್ಬರೂ ನಟರು ಪರಸ್ಪರ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಇಬ್ಬರೂ ಒಟ್ಟಿಗೆ ನಟಿಸಲಿರುವ ಚಿತ್ರ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸುದೀಪ್ ಕಟ್ಟು ಮಸ್ತಾದ ದೇಹಕ್ಕೆ ಫಿದಾ ಆದ ಫ್ಯಾನ್ಸ್
ಸುಮಲತಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುದೀಪ್ ಮತ್ತು ದರ್ಶನ್ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಬ್ಬರು ನಟರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಇಬ್ಬರೂ ನಟರು ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ ಒಟ್ಟಾಗಿ ನಿಂತು ತೆಗೆಸಿಕೊಂಡ ಫೋಟೋ ಮಾತ್ರ ತೆಗೆಸಿಕೊಂಡಂತಿಲ್ಲ ಎಂದು ಹೇಳಲಾಗಿದೆ.
ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದವರು ಸುಮಲತಾ ಎಂಬ ವರದಿಗಳು ಕೂಡ ಹರಿದಾಡುತ್ತಿವೆ. ನಟಿ ಇಬ್ಬರೂ ಸ್ಟಾರ್‌ಗಳ ಕೋಪ ತಣಿಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಬ್ಬರೂ ನಟರು ತಮ್ಮ ಸಮನ್ವಯದ ಬಗ್ಗೆ ಇನ್ನೂ ಮಾತನಾಡಿಲ್ಲ.
ಇದನ್ನೂ ಓದಿ: ಖುಷಿ ಸಿನಿಮಾದ ಐದನೇ ಹಾಡು ರಿಲೀಸ್..! ಹೇ ಹೆಂಡತಿ.. ಎಂದು ಹೆಜ್ಜೆ ಹಾಕಿದ ವಿಜಯ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.