Tharun - Sonal monteiro wedding : ಮದುವೆ ದಿನಾಂಕ ಮತ್ತು ತಮ್ಮ ಲವ್‌ ಸ್ಟೋರಿ ಬಗ್ಗೆ ಮಾತು ಶುರುಮಾಡಿದ ತರುಣ್‌, ಫಸ್ಟ್ ಟೈಮ್ ನರ್ವಸ್ ಆಗ್ತಿದೀನಿ, ಇದು ಮೇಜರ್ ಇವೆಂಟ್ ನನಗೆ, ಇದೇ ಹತ್ತನೇ ತಾರೀಖು ಸಂಜೇ ರಿಸೆಪ್ಷನ್ ಇದೆ. 11 ಕ್ಕೆ ಬೆಳಗ್ಗೆ ಮುಹೂರ್ತ ಇರುತ್ತೆ ಅಂತ ಹೇಳಿದರು. 


COMMERCIAL BREAK
SCROLL TO CONTINUE READING

ಅಲ್ಲದೆ, ನನ್ನ ಸೋನಲ್ ಪರಿಚಯ ಆಗಿದ್ದು ರಾಬರ್ಟ್ ಮೂಲಕ, ಆಡಿಷನ್ ಕರೆದಾಗ ನಾನು ಅವ್ರನ್ನ ನೋಡಿದ್ದು, ಆದ್ರೆ ಅವಾಗ ಲವ್ ಶುರುವಾಗಿದ್ದಿಲ್ಲ. 2022 ವರೆಗು ವರ್ಷಕ್ಕೆ ಎರಡು ಮೇಸೆಜ್ ಇರ್ತಿತ್ತು ಅಷ್ಟೇ. 2023 ಇಂದ ನಮ್ಮ ಬಾಂಡಿಂಗ್ ಶುರುವಾಯ್ತು. ರಾಬರ್ಟ್ ಸೆಟ್ ಅಲ್ಲಿ ದರ್ಶನ್ ಸರ್ ಕಾಲೆಳಿತಿದ್ರು. 


ಇದನ್ನೂ ಓದಿ: ‘ಇವನೇ ನನ್ನ ಪ್ರಪಂಚ...’ ವೇದಿಕೆ ಮೇಲೆಯೇ ಗೆಳೆಯನನ್ನು ಪರಿಚಯಿಸಿದ ನಟಿ ಅನುಪಮಾ ಗೌಡ !


ನಾನು ದರ್ಶನ್, ವಿನೋದ್ ಗಿಂತ ಸೋನಾಲ್ ಗೆ ಬೇಗ ಬನ್ನಿ ಅಂತ ಹೇಳ್ತಿದ್ದೇ ಅವಾಗ ಅದಕ್ಕೆ ಅವ್ರಿಗೆ ಯಾಕೆ ಫ್ರೇಮ್ ಚನ್ನಾಗಿ ಇಡ್ತಿದ್ಯಾ ಅಂತ ನಮಗೆ ಯಾಕೆ ಇಡಲ್ಲ ಅಂತ ದರ್ಶನ್ ಸರ್ ರೇಗಿಸುತ್ತಿದ್ದರು. ನಮ್ಮ ತಾಯಿ ಬಂದ್ಹಾಗ ನೋಡು ಹುಡುಗಿ ಓಕೆನಾ ಅಂತ ಕೇಳ್ತಿದ್ರು.. 


ಸೋನಾಲ್‌ಗೆ ನಿವು ತರುಣ್ ಡೇಟ್ ಮಾಡ್ತಿದೀರ ಅಂತ ದರ್ಶನ್ ಕೇಳಿದ್ರು. ಅಷ್ಟೇ ಅಲ್ಲ, ಸುಧಾಕರ್, ಚಿಕ್ಕಣ್ಣ ಸೋನಾಲ್ ಮತ್ತು ತರುಣ್‌ ಪೇರ್ ಚನ್ನಾಗಿದೆ ಅಂತ ಹೇಳ್ತಿದ್ರು. ಅವಾಗ ನಾವಿಬ್ರು ಯೂನಿವರ್ಸ್‌ ನಮ್ಮನ್ನ ಒಂದು ಮಾಡ್ತಿದೆ ಅಂತ ತಿಳಿದುಕೊಂಡೆವು.. ಜನವರಿ ಫೆಬ್ರವರಿಯಲ್ಲಿ ಫ್ರೇಂಡ್ ಶಿಪ್ ಆಯ್ತು, ಬರ್ತಾ ಕ್ಲೋಸ್ ಆಗಿ ಮೂವ್ ಆದ್ವಿ.. ಒಬ್ರಿಗೊಬ್ರು ಅರ್ಥ ಮಾಡಿಕೊಳ್ಳೋಕೆ ಸ್ಟಾರ್ಟ್ ಮಾಡಿದ್ವಿ..


ಇದನ್ನೂ ಓದಿ: ಐಶ್ವರ್ಯ-ಅಭಿಷೇಕ್‌ ಬಚ್ಚನ್‌ ವಿಚ್ಚೇದನ ವದಂತಿ ಕಾವಿನ ಬೆನ್ನಲ್ಲೇ.. ಬಚ್ಚನ್ ಕುಟುಂಬದಲ್ಲಿ ಕಿಡಿ ಹೊತ್ತ ಮತ್ತೊಂದು ಶಾಕಿಂಗ್‌ ಸುದ್ದಿ!


ನಾವಿಬ್ರು ಅಗ್ರಿ ಆದ್ಮೆಲೆ ಕಾಟೇರ ಮುಗಿಯೋವರೆಗು ಟೈಮ್ ಕೊಡಿ ಆ ಫಿಲ್ಮ್ ನನ್ನ ಕರಿಯರ್‌ಗೆ ಮುಖ್ಯ ಅಂತ ಸಪೋರ್ಟ್ ಕೇಳಿದ್ದೇ.. ಅದಕ್ಕೆ ಸೋನಾಲ್‌ ಒಪ್ಪಿಕೊಂಡರು.. ಸಿನಿಮಾ ಸಕ್ಸಸ್ ಆದ್ಮೆಲೆ ಅವ್ರ ಮನೆಗೆ ಹೋಗಿ ಮಾತಾಡಿ ನಂತರ ನಮ್ಮ ಮನೇಲಿ ಮಾತುಡುದ್ವಿ.. ಎಲ್ರು ಒಪ್ಪಿಕೊಂಡರು ದರ್ಶನ್ ಸರ್ ಗೆ ಹೇಳಿದ್ವಿ ಅವ್ರು ಓಕೆ ಅಂದ್ರು ಅಂತ ತರುಣ್‌ ತಮ್ಮ ಲವ್‌ ಸ್ಟೋರಿ ತೆರೆದಿಟ್ಟರು..


ಇನ್ನು ದರ್ಶನ್‌ ಬಗ್ಗೆ ಮಾತನಾಡಿದ ತರುಣ್‌, ನಮ್ಮ ತಂದೆ ಹೇಗೋ ಹಾಗೇ ದರ್ಶನ್ ಸರ್ ಅಲ್ಲೇ ಇದ್ದು ಬ್ಲೇಸ್ ಮಾಡ್ತಾರೆ, ಅತ್ತಿಗೆಗೆ ಇನ್ವೀಟೇಷನ್ ಕೊಟ್ಟಿದ್ದೀನಿ ಬರ್ತಿನಿ ಅಂತ ಹೇಳಿದ್ದಾರೆ ಎಂದು ಹೇಳಿದರು. ಅಲ್ಲದೆ, ನಮ್ಮ ಮದುವೆ ಅಷ್ಟರಲ್ಲಿ ಅವರು ಬರ್ತಾರೆ ಅನಿಸುತ್ತೆ ಅಂತ ಸೋನಾಲ್‌ ಭರವಸೆ ವ್ಯಕ್ತಪಡಿಸಿದರು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.