Save Forest Save Animals - Darshan:  ಇತ್ತಿಚೀನ ದಿನಗಳಲ್ಲಿ ಕಾಲ ಕ್ರಮೇಣ ಕಾಡು, ಪ್ರಾಣಿ ಪಕ್ಷಿ ಎಲ್ಲವೂ ಅಳಿವಿನಂಚಿನಲ್ಲಿದೆ. ಇವುಗಳನ್ನು ಮುಂದಿನ ಪೀಳಿಗೆ ಕಾಪಾಡುವುದು ನಮ್ಮೆಲ್ಲರ ಹೊಳೆಯು ಹೌದು. ಪ್ರಪಂಚದಾದಂತ್ಯ  ವಿಶ್ವ ಅರಣ್ಯ ದಿನವನ್ನು  ಆಚರಿಸಲಾಯಿತು. ಈ ನಿಟ್ಟಿನಲ್ಲಿ ಕರುನಾಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ವ ಅರಣ್ಯ ದಿನಕ್ಕೆ ಶುಭ ಹಾರೈಸಿ ಕಾಡನ್ನು ಉಳಿಸುವ ಕುರಿತು ಕರೆ ಕೊಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ಕರ್ನಾಟಕದ ಅರಣ್ಯ ಇಲಾಖೆ ರಾಯಭಾರಿಯಾಗಿರುವ  ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕಾಡು-ಮೇಡು, ಪ್ರಾಣಿ-ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಎನ್ನುವುದು ಗೊತ್ತಿರುವ ಸಂಗತಿ. ಅವರು ಯಾವಗಲೂ ಕಾಡು ಉಳಿಸುವ ಸಂದೇಶ ನೀಡುತ್ತಲೇ ಇರುತ್ತಾರೆ. ಅದೇ ರೀತಿ ವಿಶ್ವ ಅರಣ್ಯ ದಿನದಂದು  ಟ್ವೀಟ್ ರ್‌ ಖಾತೆಯಲ್ಲಿ ,"ಅರಣ್ಯ ದಿನಕ್ಕೆ ಶುಭ ಹಾರೈಸಿ , ಕಾಡು ಬೆಳೆಸಿ ನಾಡು ಉಳಿಸಿ, ಹಸಿರೇ ಉಸಿರು.. ಮರ ಇದ್ದರೆ ಮಳೆ.. ಮಳೆ ಇದ್ದರೆ ಬೆಳೆ.. ಬೆಳೆ ಇದ್ದರೆ ನಮ್ಮೆಲ್ಲರ ಬದುಕು. ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂದು ಬರೆದು ಸಾಮಾಜೀಕ ಸಂದೇಶ ಸಾರಿದ್ದಾರೆ. 


ಇದನ್ನೂ ಓದಿ: Rashmika Mandanna: ಇನ್ನು ಮುಂದೆ ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಎಂದ ಕಿರಿಕ್‌ ಬೆಡಗಿ ಕಾರಣವೇನು ಗೊತ್ತಾ..? 


ಡಿ ಬಾಸ್‌ ಕಾಡು,  ಪರಿಸರದ ನಡುವೆ ಅವಿನಾಭಾವ ನಂಟನ್ನು ಹೊಂದಿರುವ ಇವರು  ಚಿತ್ರಿಕರಣದ ಬಿಡುವಿನ ವೇಳೆ ಹೆಚ್ಚಾಗಿ ಕಾಡು, ಪರಿಸರ, ಪ್ರಾಣಿ ನಡುವೆ ಕಾಲ ಕಳೆಯುತ್ತಾರೆ. ಈ ಆಧುನಿಕ ಯುಗದಲ್ಲಿ ಮಾನವ ತನ್ನ ಸ್ವಾರ್ಥಕ್ಕಾಗಿ ಅವನ ಕೆಟ್ಟ ಕಣ್ಣುಗಳನ್ನು ಕಾಡಿನ ಮೇಲೆ ಹರಿಸಿ ಅದರ ನಾಶಕ್ಕೂ ಮುಂದಾಗಿದ್ದಾನೆ. ಅರಣ್ಯ ನಶಿಸಿದರೇ ಮುಂಬರುವ ದಿನಗಳಲ್ಲಿ ಆಕ್ಸಿಜನ್ ಕೊರತೆಯನ್ನುಎದುರಿಸಬಹುದು.


Pathaan On OTT: ಶಾರುಖ್ ಖಾನ್ ನಟನೆಯ ಪಠಾಣ್ ನಾಳೆ OTT ನಲ್ಲಿ ಬಿಡುಗಡೆ


ಕಾಡು ನಾಶದಿಂದ ಕೇಲವ ಮಾನವನಿಗೆ ಅಷ್ಟೇ ತೊಂದರೆಯಾಗದೇ ಇಡೀ ಮನುಸಂಕುಲವೇ ಸಂಕಷ್ಟ ಎದುರಿಸಬೇಕಾಗುತ್ತದೆ. ಅರಣ್ಯ ರಕ್ಷಣೆಯಲ್ಲಿ ಪರಿಸರವಾದಿಗಳು ಮಾತ್ರವಲ್ಲದೇ  ಸೆಲೆಬ್ರೆಟಿಗಳ ಕೂಟವು   ಅರಣ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗುತ್ತೆ. ಹಾಗೇ ಪ್ರಕೃತಿ ಪ್ರಿಯರು, ಅರಣ್ಯ ಇಲಾಖೆಯ ರಾಯಬಾರಿಯೂ ಆಗಿರುವ ದರ್ಶನ್ ಜನತೆಗೆ ಕಾಡು ಹಾಗೂ ಪ್ರಾಣಿಗಳ ರಕ್ಷಣೆಗೆ ಕರೆ ನೀಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.