ಬೆಂಗಳೂರು: ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿರುವ ಚೊಚ್ಚಲ ಚಿತ್ರ 'ಅಮರ್' ಟೀಸರ್ ನಾಳೆ ಬಿಡುಗಡೆಯಾಗುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಾಶಯ ಕೋರಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, "ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್‌ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟೀ ವೆಲ್‌‌ಕಮ್. ನಾಳೆ ಅಭಿಷೇಕ್ ಹೊಸ ಸಿನಿಮಾ 'ಅಮರ್' ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ, ಹರಿಸಿ ಬೆಳೆಸಿ," ಎಂದು ಕೋರಿದ್ದಾರೆ.


ಚಿತ್ರದಲ್ಲಿ ಅಭಿಷೇಕ್ ಅಣ್ಣನಾಗಿ ದೊಡ್ಡ ಬಿಸಿನೆಸ್ ಮ್ಯಾನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಅವರನ್ನು ಅಂಬರೀಷ್ ತಮ್ಮ ದೊಡ್ಡ ಮಗ ಎಂದೇ ಕರೆಯುತ್ತಿದ್ದರು.  ದರ್ಶನ್ ಕೂಡ ಅಪ್ಪಾಜಿ ಎಂದು ಸಂಬೋಧಿಸುತ್ತಿದ್ದರು. ಹೀಗಾಗಿ ದರ್ಶನ್ ಅಂಬರೀಷ್ ಅವರ ಕುಟುಂಬದಲ್ಲಿ ಒಬ್ಬರಾಗಿದ್ದಾರೆ. ಅಮರ್ ಚಿತ್ರದ ಬಗ್ಗೆ ದರ್ಶನ್ ಮಾಡಿರುವ ಟ್ವೀಟ್ ಅನ್ನು ಸುಮಲತಾ ಅಂಬರೀಶ್ ರೀಟ್ವೀಟ್ ಸಹ ಮಾಡಿದ್ದಾರೆ. 



ಈಗಾಗಲೇ 'ಅಮರ್' ಚಿತ್ರದ ಸಿನಿಪ್ರಿಯರಲ್ಲಿ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ. ಅಂಬರೀಶ್ ನಿಧನದಿಂದ ನೊಂದಿದ್ದ ಅಭಿಮಾನಿಗಳಿಗೆ ಅವರ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ ತೆರೆಕಾಣಲು ಸಿದ್ಧವಾಗುತ್ತಿರುವುದು ಹರ್ಷ ತಂದಿದೆ.