ಪುತ್ರಿ ಆರಾಧ್ಯಳೇ ಸ್ಫೂರ್ತಿ, ಧೈರ್ಯ: ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ವದಂತಿ ನಡುವೆ ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್
Aishwarya Rai Abhishek Bachchan: ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ ತನಗೆ ಹೇಗೆ ಸ್ಫೂರ್ತಿ ಮತ್ತು ಧೈರ್ಯ ತುಂಬಿದಳು ಎಂಬ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
Abhishek Bachchan: ಇತ್ತೀಚಿಗೆ ಸ್ಟಾರ್ ದಂಪತಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧದ ಬಗ್ಗೆ, ವಿರಸ-ವಿಚ್ಛೇದನದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅವರಿಬ್ಬರೂ ಮೌನಕ್ಕೆ ಜಾರಿದ್ದರೂ ದಿನಕ್ಕೊಂದು ಕತೆಗಳು ತೂರಿಬರುತ್ತಿವೆ. ಈ ನಡುವೆ ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ ತನಗೆ ಹೇಗೆ ಸ್ಫೂರ್ತಿ ಮತ್ತು ಧೈರ್ಯ ತುಂಬಿದಳು ಎಂಬ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಇದ್ದ ವಿರಸಕ್ಕೆ ವಿರಾಮ ಸಿಕ್ಕಿತೇನೋ ಎನ್ನುವ ಆಯಾಮ ಬಂದಿದೆ.
ಅಭಿಷೇಕ್ ಬಚ್ಚನ್ ಅವರು ತಮ್ಮ ಮುಂಬರುವ ‘ಐ ವಾಂಟು ಟು ಟಾಕ್’ (I Want To Talk) ಚಿತ್ರದಲ್ಲಿ ಅರ್ಜುನ್ ಸಿಂಗ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧೈರ್ಯ ಮತ್ತು ಸೂಕ್ಷ್ಮ ಒಳನೋಟ ಇರುವ ವ್ಯಕ್ತಿಯ ಪಾತ್ರವದು. ಸಿನಿಮಾದಲ್ಲಿ ತನ್ನ ಪಾತ್ರ ಎದುರಿಸುವ ಸವಾಲುಗಳ ಬಗ್ಗೆ ಮಾತನಾಡುತ್ತಾ ಅಭಿಷೇಕ್ ಬಚ್ಚನ್ ಅವರು ಮಗಳು ಆರಾಧ್ಯ ಬಗ್ಗೆ ಮಾತನಾಡಿದ್ದಾರೆ. ಆರಾಧ್ಯ ತನಗೆ ನಿಜ ಜೀವನದಲ್ಲಿ ಹೇಗೆ ಸ್ಫೂರ್ತಿ ಮತ್ತು ಧೈರ್ಯದ ಪಾಠ ಕಲಿಸಿದ್ದಾಳೆ ಎಂಬುದನ್ನು ವಿವರಿಸಿದ್ದಾರೆ. ಮಕ್ಕಳಿಂದ ಕಲಿಯುವುದು ತುಂಬಾ ಇರುತ್ತೆ ಎನ್ನುವುದಕ್ಕೆ ಇದೊಂದು ಉದಾಹರಣೆ ಕೂಡ.
ಅಭಿಷೇಕ್ ಬಚ್ಚನ್ ಅವರಿಗೆ ಇಂಥದೊಂದು ಅನುಭವ ಆಗಿರುವುದು ಕರೋನಾ ಸಂದರ್ಭದಲ್ಲಿ. ಆಗ ಮನೆಯಲ್ಲೇ ಇದ್ದ ಆರಾಧ್ಯ ಪುಸ್ತಕಗಳನ್ನು ಓದುತ್ತಿದ್ದಲು. ಪುಸ್ತಕವೊಂದರಲ್ಲಿ ಬರೆಯಲಾಗಿದ್ದ ‘ಪ್ರಪಂಚದ ಅತ್ಯಂತ ಧೈರ್ಯಶಾಲಿ ಪದವೆಂದರೆ ಅದು ಸಹಾಯ. ಏಕೆಂದರೆ ಸಹಾಯ ಕೇಳುವುದು ಸವಾಲುಗಳನ್ನು ಎದುರಿಸುವ ವಿಷಯಕ್ಕೆ ಸಂಬಂಧಿಸಿದ್ದು. ಸವಾಲುಗಳನ್ನು ಎದುರಿಸಲು ಸಹಾಯ ಪಡೆಯುವಿರೋ ಅಥವಾ ಸವಾಲುಗಳಿಂದ ನುಣುಚಿಕೊಳ್ಳಲು ಸಹಾಯ ಕೇಳುತ್ತಿರುವಿರೋ ಎಂಬುದು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ’ ಎಂಬ ಮಾತುಗಳನ್ನು ತನ್ನೊಂದಿಗೆ ಹಂಚಿಕೊಂಡಿದ್ದಳು. ಈ ಮಾತುಗಳು ನನಗೆ ಹೊಸ ರೀತಿಯ ಧೈರ್ಯ ಮತ್ತು ಸ್ಫೂರ್ತಿ ತಂದುಕೊಟ್ಟಿವೆ ಎಂದಿದ್ದಾರೆ ಅಭಿಷೇಕ್ ಬಚ್ಚನ್.
ಮಗಳು ಆರಾಧ್ಯ ಹೇಳಿರುವ ಮಾತುಗಳು ನನಗೆ ‘ಐ ವಾಂಟು ಟು ಟಾಕ್’ ಚಿತ್ರದಲ್ಲಿ ಅರ್ಜುನ್ ಸಿಂಗ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡುತ್ತಿವೆ. ಅರ್ಜುನ್ ಸಿಂಗ್ ಹಲವು ಹೋರಾಟಗಳ ಹೊರತಾಗಿಯೂ ಧೃಡ ನಿಶ್ಚಯದಿಂದ ಇರುತ್ತಾನೆ. ಯಾವುದನ್ನೂ ಬಿಟ್ಟುಕೊಡಲು ಅವನು ಸಿದ್ಧನಿರುವುದಿಲ್ಲ. ಸಹಾಯ ಕೇಳಲು ಹೆದರುವುದಿಲ್ಲ. ಸಾವಿನೊಂದಿಗೆ ಸೆಣೆಸಲು ಆಸ್ಪತ್ರೆಗೆ ಹೋಗುವಾಗಲೂ ಹೆದರುವುದಿಲ್ಲ. ಜೀವನದ ಸವಾಲುಗಳನ್ನು ಎದುರಿಸುವಾಗಲು ಧೈರ್ಯ-ಸ್ಥೈರ್ಯದಿಂದ ಮುನ್ನುಗ್ಗುತ್ತಾನೆ. ಇಂಥ ಪಾತ್ರ ಪೋಷಣೆಗೆ ಪ್ರೇರೇಪಣೆಯಾಗಿದ್ದು ಪುತ್ರಿಯ ಸ್ಫೂರ್ತಿ ಎಂದು ಆರಾಧ್ಯಳನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ ಅಭಿಷೇಕ್ ಬಚ್ಚನ್.
ಐಶ್ವರ್ಯ ರೈ ಜೊತೆಗೆ ಮತ್ತೆ ರಾಜಿ ಸಾಧ್ಯವೇ ಇಲ್ಲ. ಇಂದಲ್ಲ, ನಾಳೆ ವಿಚ್ಛೇದನ ಆಗೇಬಿಡುತ್ತದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ಅಭಿಷೇಕ್ ಬಚ್ಚನ್ ತಮ್ಮ ಮುಂದಿನ ಚಿತ್ರದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ಮಗಳನ್ನು ಯರ್ರಾಬ್ರಿರ್ರಿ ಹೊಗಳಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಇನ್ನೂ ಒಂದು ಬೆಳವಣಿಗೆಯಾಗಿತ್ತು. ದಾಂಪತ್ಯದಲ್ಲಿ ಬಿರುಕು ಮೊದಲು ಅಭಿಷೇಕ್ ಬಚ್ಚನ್ ಅವರೇ ಕಾರಣ. ನಟಿ ನಮೃತ್ ಕೌರ್ ಜೊತೆಗೆ ಅಭಿಷೇಕ್ ಬಚ್ಚನ್ ಅಫೇರ್ ಹೊಂದಿರುವ ಕಾರಣಕ್ಕಾಗಿಯೇ ಐಶ್ವರ್ಯ ರೈ ಮುನಿಸಿ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿತ್ತು.
ಇದನ್ನೂ ಓದಿ- 2025ರ ಅಕ್ಟೋಬರ್ 2ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ ಕಾಂತಾರ ಚಾಪ್ಟರ್ 1
ಜೊತೆಗೆ ಪ್ರತಿ ಬಾರಿ ಇವರ ವಿಚ್ಛೇದನ ಸುದ್ದಿ ಕೇಳಿಬಂದಾಗಲೂ ಅಭಿಮಾನಿಗಳ ಕಡೆಯಿಂದ ಐಶ್ವರ್ಯ ರೈ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದವು. ಅಭಿಷೇಕ್ ಅವರನ್ನು ಖಳನಾಯಕ ಎಂದು ಕರೆಯಲಾಗುತ್ತಿತ್ತು. ಈ ಕಾರಣಕ್ಕೂ ಅಭಿಷೇಕ್ ಮೆತ್ತಗಾಗಿರಬಹುದು. ಮಗಳ ಮೂಲಕ ಮತ್ತೆ ಮಡದಿಯ ಮಡಿಲು ಸೇರಲು ಪ್ರಯತ್ನಿಸುತ್ತಿರಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ, ವಿರಸ, ವಿಚ್ಛೇದನ ಎಂಬ ಚರ್ಚೆಗಳಿಗೆ ಕೊನೆ ಇಲ್ಲದಂತಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ