ಸಾಮಾನ್ಯ ಜನರಂತೆ ಆಟೋದಲ್ಲಿ ಪ್ರಯಾಣಿಸಿದ ಪವರ್ ಸ್ಟಾರ್ ಪುತ್ರಿ..! ತಂದೆಯಂತೆ ಮಗಳಲ್ವಾ.. ಸೂಪರ್..
Pawan Kalyan daughter : ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗ ಎಪಿ ಉಪ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ಅವರು ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ.. ಇದರ ನಡುವೆ ಅವರ ಮಗಳು ಆದ್ಯಾ ವಿಡಿಯೋ ಒಂದು ನೆಟ್ಟಿಗರ ಗಮನಸೆಳೆಯುತ್ತಿದೆ..
Aadhya Konidela : ಸ್ಟಾರ್ ನಟ, ಮೇಲಾಗಿ ಡೆಪ್ಯೂಟಿ ಸಿಎಂ.. ಹೀಗೆ ಎಂತಹುದೇ ದೊಡ್ಡ ಸ್ಥಾನದಲ್ಲಿದ್ದರೂ ಪವನ್ ಕಲ್ಯಾಣ್ ಯಾವಾಗಲೂ ಸಿಂಪಲ್ ಆಗಿ ಕಾಣುತ್ತಾರೆ. ಆಡಂಬರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲ್ಲ. ಉಪಮುಖ್ಯಮಂತ್ರಿಯಾದ ನಂತರವೂ ಅವರು ಅದೇ ವಿಧಾನವನ್ನು ಮುಂದುವರೆಸುತ್ತಿದ್ದಾರೆ. ಪವನ್ ಅವರ ಸರಳತೆಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಮಗಳು ಆದ್ಯಾ ಕೂಡ ಪವನ್ ಹಾದಿಯಲ್ಲೇ ನಡೆಯುತ್ತಿದ್ದಾರೆ. ತಂದೆಯಂತೆ ಸರಳತೆ ಪಾಲಿಸುತ್ತಿದ್ದಾರೆ.. ಇದಕ್ಕೆ ಸಾಕ್ಷಿ ಈ ವಿಡಿಯೋ. ಆದ್ಯಾ ಇತ್ತೀಚೆಗೆ ತನ್ನ ತಾಯಿ ರೇಣು ದೇಸಾಯಿ ಜೊತೆ ಕಾಶಿ ಯಾತ್ರೆಗೆ ಹೋಗಿದ್ದರು. ಅಲ್ಲಿ ಸಾಮಾನ್ಯರಂತೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ:ವಯಾಗ್ರ ಮಾತ್ರೆ ಸೇವಿಸಿ ರಾತ್ರಿಯಿಡಿ ಸಂಭೋಗ..! 14 ವರ್ಷದ ಯುವತಿ ಸಾವು..
ಐಶಾರಾಮಿ ಕಾರಿನಲ್ಲಿ Z+ ಸೆಕ್ಯೂರಿಟಿ ನಡುವೆ ಪ್ರಯಾಣಿಸುವ ಸ್ಥಿತಿಯನ್ನು ಹೊಂದಿದ್ದರೂ, ಈ ಸ್ಟಾರ್ ಕಿಡ್ ತನ್ನ ತಾಯಿಯೊಂದಿಗೆ ಆಟೋದಲ್ಲಿ ಸರಳ ಪ್ರಯಾಣ ಮಾಡಿದ್ದು ಪವರ್ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.. ಈ ವಿಡಿಯೋವನ್ನು ರೇಣು ದೇಸಾಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಆದ್ಯಾ ಅವರನ್ನು ಕೊಂಡಾಡುತ್ತಿದ್ದಾರೆ. ಸಿಂಪ್ಲಿಸಿಟಿಯಲ್ಲಿ ಅಪ್ಪನಿದ್ದಂತೆ ಎಂದು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಆದರೆ ಈಗಷ್ಟೇ ಅಲ್ಲ, ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಆದ್ಯಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.