Serial Actress Deepa Katte: ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಖ್ಯಾತಿಯ ನಟಿ ದೀಪಾ ಕಟ್ಟೆ, ಸಂಧ್ಯಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಇವರು ನೆಗೆಟಿವ್ ರೋಲ್ ನಿರ್ವಹಿಸುತ್ತಿದ್ದು, ಧಾರಾವಾಹಿಯಲ್ಲಿ ತಾತ ಇವಳನ್ನು ಓಡಿ ಹೋದವಳು ಎಂದು ಕರೆಯುತ್ತಿದ್ದು, ಇದೀಗ ಅದೇ ಹೆಸರಿನಲ್ಲಿ ಫೇಮಸ್ ಆಗಿದ್ದಾರೆ. ಇನ್ನು ನಟಿ ದೀಪಾ ಉಜಿರೆಯಲ್ಲಿ ಓದಿ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನ ಎಂಎನ್‌ಸಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಆಕೆಗೆ ನಟನೆ ಮೇಲಿನ ವ್ಯಾಮೋಹ, ಕೆಲಸದಲ್ಲಿನ ಆಸಕ್ತಿಯನ್ನು ಕ್ಷಣ ಕ್ಷಣಕ್ಕೂ ಕುಗ್ಗಿಸುತ್ತಾ ಬಂದಿತ್ತು. ಇನ್ನು ಕಂಪ್ಯೂಟರ್ ಮುಂದೆ ಕುಳಿತರೆ ಆಗದು ಎಂದು ಸ್ಟೇಜ್ ಹತ್ತಲೇಬೇಕು ಎಂದು ತೀರ್ಮಾನಿಸಿ ಎರಡು ದೋಣಿಯ ಮೇಲೆ ಕಾಲಿಟ್ಟರು. 


COMMERCIAL BREAK
SCROLL TO CONTINUE READING

ನಟಿ ದೀಪಾ ಕಟ್ಟೆ ಅಭಿನಯ ತರಂಗದಲ್ಲಿ ಒಂದು ವರ್ಷಗಳ ಕಾಲ ಡಿಪ್ಲೊಮಾ ಕೋರ್ಸ್ ಮಾಡಿ, ಇವರು ರಂಗಭೂಮಿಯಲ್ಲಿ ಇದ್ದುಕೊಂಡು, ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದರು. ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟು, ಬಳಿಕ 'ಶಾಂತಂ ಪಾಪಂ'ನಲ್ಲಿ ನಟಿಸಿದರು. ನಂತರ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲು ಮುಂದಾದರೂ,  ಶೂಟಿಂಗ್ ಮುಗಿಸಿ ದೀಪಾ ಸೀದಾ ಕಂಪನಿಗೆ ಹೋಗಿ ಅಲ್ಲೂ ಕೆಲಸ ಮಾಡುತ್ತಿದ್ದರು. ಬಹಳ ಡೆಡಿಕೇಟೆಡ್ ಆಗಿ ಆಸೆಯನ್ನು ಪೂರೈಸಿಕೊಳ್ಳುವುದರ ಜೊತೆಗೆ ವೃತ್ತಿಯನ್ನು ಸಹ ಬಿಡಲಿಲ್ಲ.


ಇದನ್ನೂ ಓದಿ: ಬಿಗ್ ಬಾಸ್’ನಲ್ಲಿ ಮಹಿಳಾ ಸ್ಪರ್ಧಿ ಮೇಲೆ ಹಲ್ಲೆಗೆ ಯತ್ನಿಸಿದ ಸಹ ಸ್ಪರ್ಧಿ: ಬೆಚ್ಚಿಬಿದ್ದ ದೊಡ್ಮನೆ…!


ಕಿರುತೆರೆ ನಟಿ ದೀಪಾ ಕಟ್ಟೆ, 'ಮಿಥುನ ರಾಶಿ', 'ಹಿಟ್ಲರ್ ಕಲ್ಯಾಣ', 'ಧ್ರುವ ನಕ್ಷತ್ರ', 'ಜೀವ ಹೂವಾಗಿದೆ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮಿಥುನ ರಾಶಿ' ಧಾರಾವಾಹಿಯಲ್ಲಿ ಮಿಥುನ್ ಚಿಕ್ಕಪ್ಪನ ಮಗಳು ಭಾವನಾ ಪಾತ್ರದಲ್ಲಿ ಕಾಣಿಸಿಕೊಂಡು, ಬಳಿಕ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಶ್ವೇತಾ ಪಾತ್ರಕ್ಕೆ ಬಣ್ಣ ಹಚ್ಚಿದರು. ಹಾಗೆ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಶಿಲ್ಪಾ ರವಿ ಬದಲು ನಾಯಕಿ ಮಧುಮಿತ ಪಾತ್ರಕ್ಕೆ ಜೀವ ತುಂಬಿ, ಮತ್ತೆ ಧ್ರುವ ನಕ್ಷತ್ರ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಇನ್ನು 'ದಿಯಾ' ಚಿತ್ರದಲ್ಲಿ ನಾಯಕಿ ದಿಯಾ ಸ್ವರೂಪ್ ಚಿಕ್ಕಪ್ಪನ ಮಗಳು ಪಾತ್ರದಲ್ಲೂ ದೀಪಾ ಕಟ್ಟೆ ಮಿಂಚಿದ್ದಾರೆ. 


ಕಳೆದ 5-6 ತಿಂಗಳ ಹಿಂದೆ ಮದುವೆಯಾದ ನಟಿ ದೀಪಾ ಕಟ್ಟೆ , ಹಲವು ವರ್ಷಗಳ ಗೆಳೆಯ ರಕ್ಷಿತ್ ಜೊತೆ ವಿವಾಹವಾಗಿದ್ದಾರೆ. ಮದುವೆಗೆ ಮೊದಲ ಹೆಜ್ಜೆ ಇಟ್ಟಿದ್ದೆ ದೀಪಾಳ ತಂದೆ. ರಕ್ಷಿತ್ ಪರಿಚಯವಿದ್ದ ದೀಪಾ ತಂದೆ ಒಂದು ದಿನ ಇದ್ದಕ್ಕಿದ್ದ ಹಾಗೆ ಮಗಳಿಗೆ ಫೋನ್ ಮಾಡಿದ್ದಾರೆ. ಮಗಳಿಗೆ ರಕ್ಷಿತ್‌ಗೆ ನೀನು ಪ್ರಪೋಸ್ ಮಾಡಬಹುದು. ನಮ್ಮ ಮನೆಗೆ ಒಳ್ಳೆಯ ಸಂಬಂಧ ಎಂದಿದ್ದಾರೆ. ಅಪ್ಪ ಹೇಳಿದಂತೆ ಕೇಳಿದ ದೀಪಾ ಗೆಳೆಯನ ಜೊತೆಗೆ ಸಪ್ತಪದಿ ತುಳಿದು ದಾಂಪತ್ಯ ಬದುಕಿನಲ್ಲಿ ಸುಖವಾಗಿದ್ದಾರೆ. ರಕ್ಷಿತ್ ಮತ್ತು ದೀಪಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು, ಒಂದೇ ಗುಂಪಿನಲ್ಲಿದ್ದವರು. ಅಚನಾಕ್ ಆಗಿ ಇಬ್ಬರೂ ಕೂಡ ಒಂದೇ ಕಂಪನಿಗೆ ಆಯ್ಕೆಯಾದರೂ, ಒಂದೇ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡಿದ್ದರು. ವಿಧಿಯೇ ನಮ್ಮಿಬ್ಬರನ್ನು ಪದೇ ಪದೇ ಒಟ್ಟಿಗೆ ಸೇರಿಸಿತ್ತು. ಕೊನೆಗೆ ನಾವು ಮದುವೆಯಾಗಿದ್ದೇವೆ ಎಂದು ದೀಪಾ ಹೇಳಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ