ನವದೆಹಲಿ: ಇತ್ತೀಚಿಗೆ ಬಾಲಿವುಡ್ ಬೆಡಗಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ  ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ 2017 ನಲ್ಲಿ ಬಂಗಾರದ ಬಣ್ಣದ ಧಿರಿಸನ್ನು ಧರಿಸಿದ್ದಕ್ಕೆ  ಸಾಮಾಜಿಕ ಜಾಲತಾಣದಲ್ಲಿ ಅದನ್ನು ಕ್ಯಾಡ್ ಬರಿ ಚಾಕಲೇಟ್ ಮೇಲಿರುವ ಹೊದಿಕೆ ಎಂದು ವ್ಯಂಗ ಮಾಡಲಾಗಿದೆ.



COMMERCIAL BREAK
SCROLL TO CONTINUE READING

 ದೀಪಿಕಾ ಪಡುಕೋಣೆ ಇನ್ಸ್ತಾಗ್ರಂ ನಲ್ಲಿ ಈ ಫೋಟೋ ಶೇರ್ ಮಾಡಿದಾಗ ಅವಳ ಹಲವಾರು ಇನ್ಸ್ತಾಗ್ರಾಂ ಹಿಂಬಾಲಕರು   ಅವಳನ್ನು ಟ್ರೋಲ್ ಮೂಲಕ ಕಾಲೆಳದಿದ್ದಾರೆ. ಕೆಲವರು ದೀಪಿಕಾಳ ಮುಖಚರ್ಯಕ್ಕೆ ಈ ಧಿರಿಸು ಹೊಂದುವುದಿಲ್ಲ  ಎಂದು ಹೇಳಿರುವುದಲ್ಲದೆ ಇದರಲ್ಲಿ ಹೆಚ್ಚು ಚಿನ್ನ ಹೆಚ್ಚು ಫ್ರಾಬ್ರಿಕ್ ಇದೆ ಎಂದು ಅಣಕವಾಡಿದ್ದಾರೆ.


ಆದರೆ ಬಟ್ಟೆಯ ಧಿರಿಸಿನ ವಿಚಾರವಾಗಿ ಬಾಲಿವುಡ್ ನಟಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುತ್ತಿರುವುದು ಇದೆ ಮೊದಲೇನಲ್ಲ, ಈ ಹಿಂದೆಯೂ ಕೂಡ  ಪ್ರಿಯಾಂಕ ಚೋಪ್ರಾ, ಇಶಾ ಗುಪ್ತಾ, ಅಮೀಷಾ ಪಟೇಲ್, ಸನಾ ಫಾತಿಮಾ ಶೇಕ್ ಮುಂತಾದವರು ಈ ಹಿಂದೆ ಟ್ರೋಲ್ ಗೆ ಒಳಪಟ್ಟಿದ್ದರು.