30 ಕೆಜಿ ಲೆಹಂಗಾ, 20 ಕೆಜಿ ಆಭರಣ ತೊಟ್ಟು ಸ್ಟಾರ್ ನಟಿಯ ಅದ್ಭುತ ಡ್ಯಾನ್ಸ್! 1 ಹಾಡಿಗೆ ಖರ್ಚಾಯ್ತು 12 ಕೋಟಿ!
Deepika Padukone, Padmavat Movie: ಊಹೆಗೂ ಮೀರಿದ ಸೆಟ್, ಡ್ರೆಸ್ ಸೂಟ್’ಗಳು ಕಣ್ಮನ ಸೆಳೆದಿತ್ತು. ಹಾಡುಗಳಲ್ಲಿಯೂ ಸಹ ಯಶಸ್ಸು ಕಂಡಿದ್ದ ಚಿತ್ರ, ಅದರ ವಸ್ತ್ರ ವಿನ್ಯಾಸದಿಂದ ಮತ್ತಷ್ಟು ಜನರ ಆಕರ್ಷಣೆಗೊಳಗಾಯಿತು.
Deepika Padukone most expensive song costume: ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರರಲ್ಲಿ ಸಂಜಯ್ ಲೀಲಾ ಬನ್ಸಾಲಿ ಕೂಡ ಒಬ್ಬರು. ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾ ನಿರ್ದೇಶನ ಮಾಡುವಲ್ಲಿ ಬನ್ಸಾಲಿ ಎತ್ತಿದ ಕೈ. ಇವರ ಕೈಚಳಕದಲ್ಲಿ ಮೂಡಿಬಂದ ‘ಪದ್ಮಾವತ್’ ಸಿನಿಮಾ ಸಖತ್ ಹಿಟ್ ಕಂಡಿತ್ತು.
ಇದನ್ನೂ ಓದಿ: ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ, ಆದರೆ ರೆಡ್ ವೈನ್ ಅಲ್ಲ..! ಹೇಗೆ ಗೊತ್ತಾ..?
ಊಹೆಗೂ ಮೀರಿದ ಸೆಟ್, ಡ್ರೆಸ್ ಸೂಟ್’ಗಳು ಕಣ್ಮನ ಸೆಳೆದಿತ್ತು. ಹಾಡುಗಳಲ್ಲಿಯೂ ಸಹ ಯಶಸ್ಸು ಕಂಡಿದ್ದ ಚಿತ್ರ, ಅದರ ವಸ್ತ್ರ ವಿನ್ಯಾಸದಿಂದ ಮತ್ತಷ್ಟು ಜನರ ಆಕರ್ಷಣೆಗೊಳಗಾಯಿತು. ಇನ್ನು ಈ ವಸ್ತ್ರ ವಿನ್ಯಾಸ ಮಾಡಿದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಅವರು ಈ ಬಟ್ಟೆಯ ಬಗ್ಗೆ, ಆ ಪೋಷಾಕು ತಯಾರು ಮಾಡಿದ ಬಗ್ಗೆ ಮಾತನಾಡಿದ್ದಾರೆ.
2018 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ ಪದ್ಮಾವತ್ ತೆರೆಕಂಡು ದೊಡ್ಡ ಮಟ್ಟದ ಹಿಟ್ ಕಂಡಿತ್ತು. ಈ ಚಿತ್ರದ ನಂತರ ದೀಪಿಕಾ ಪಡುಕೋಣೆ ಟಾಪ್ ನಟಿ ಎನಿಸಿಕೊಂಡಿದ್ದಲ್ಲದೆ, ರಣವೀರ್ ಸಿಂಗ್ ತಮ್ಮ ನಟನೆ ಮೂಲಕ ಇತಿಹಾಸವನ್ನೇ ಸೃಷ್ಟಿಸಿದರು. ಜೊತೆಗೆ ಶಾಹಿದ್ ಕಪೂರ್ ಅದೃಷ್ಟವೇ ಬದಲಾಯಿತು.
ಇನ್ನು ಈ ಸಿನಿಮಾದಲ್ಲಿರುವ ‘ಘೂಮರ್’ ಹಾಡಿಗೆ ಬರೋಬ್ಬರಿ 12 ಕೋಟಿ ಖರ್ಚು ಮಾಡಲಾಗಿದೆಯಂತೆ. ಶ್ರೇಯಾ ಘೋಷಾಲ್ ಕಂಠದಲ್ಲಿ ಮೂಡಿದ ಈ ಹಾಡಿಗೆ ಅದ್ಭುತವಾಗಿ ದೀಪಿಕಾ ಹೆಜ್ಜೆಹಾಕಿದ್ದರು.
ಘೂಮರ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ, ಸುಮಾರು 20 ಕೆಜಿ ತೂಕದ ಆಭರಣ, 30 ಕೆಜಿ ತೂಕದ ಲೆಹೆಂಗಾ ತೊಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಯಾವುದೇ ಹಿಟ್ ಸಿನಿಮಾ ಮಾಡದೇ ಸ್ಟಾರ್ ಗಿರಿ ಪಡೆದ ನಟರ ಮಕ್ಕಳಿವರು..! ಫೋಟೋಸ್ ನೋಡಿ
ಇನ್ನು ಪದ್ಮಾವತ್ ಸಿನಿಮಾ ರಿಲೀಸ್ ಗೂ ಮುನ್ನ ಸಖತ್ ವಿವಾದ ಸೃಷ್ಟಿಸಿತ್ತು. ಆದರೆ ಬಿಡುಗಡೆಯಾದ ಬಳಿಕ ನಿರೀಕ್ಷೆಗೂ ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದುಮಾಡಿದೆ, ಪದ್ಮಾವತಿಯಾಗಿ ದೀಪಿಕಾ, ಖಿಲ್ಜಿಯಾಗಿ ರಣವೀರ್ ಸಿಂಗ್ ಮತ್ತು ರಾಜಾ ರಾವಲ್ ಸಿಂಗ್ ಆಗಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ