ನವದೆಹಲಿ:  ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಪ್ರೂಫ್ ಕೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.



COMMERCIAL BREAK
SCROLL TO CONTINUE READING

ದೀಪಿಕಾ ಪಡುಕೋಣೆ ಹಾಗೂ ತಂದೆ ಪ್ರಕಾಶ್ ಪಡುಕೋಣೆ ಮುಂಬೈ ನಿಂದ ಬೆಂಗಳೂರಿಗೆ ಹೋಗುತ್ತಿದ್ದರು.ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ಐಡಿ ಪ್ರೂಫ್ ಕೇಳಿದ್ದಾರೆ. ಇದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿ ನಂತರ ಚಾಹಿಯೇ ? ಎಂದು ಹಿಂದಿಯಲ್ಲಿ ಕೇಳಿದ್ದಾರೆ. ನಂತರ ಅವರು ಮುಂದೆ ಹೋಗಿ ಸೆಕ್ಯುರಿಟಿ ಮ್ಯಾನ್ ಗೆ ತನ್ನ ಐಡಿಯನ್ನು ತೋರಿಸಿದ್ದಾರೆ. ಐಡಿ ಪರಿಶೀಲಿಸಿದ ನಂತರ ಗಾರ್ಡ್ ದೀಪಿಕಾಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ನೀಡಿದರು.


ಈ ವಿಡಿಯೋದಲ್ಲಿ ನಿಜ ಹೇಳಬೇಕೆಂದರೆ ದೀಪಿಕಾ ಪಡುಕೋಣೆ ಸಹ ತಾನು ವಿಐಪಿ ಎನ್ನುವ ಯಾವುದೇ ಗತ್ತು ತೋರಿಸದೆ ಸಾಮಾನ್ಯ ನಾಗರಿಕಳಂತೆ ವರ್ತಿಸಿ ಭದ್ರತಾ ನಿಯಮವನ್ನು ಅನುಸರಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.