ಅಂತರ್ಜಾಲದಲ್ಲಿ ಸುದ್ದಿಯಾಗಿದೆ ಸ್ನೇಹಿತನೊಂದಿಗಿರುವ ದೀಪಿಕಾ ಪಡುಕೋಣೆ ಬಾಲ್ಯದ ಚಿತ್ರ!
ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಬಹುನಿರೀಕ್ಷಿತ 'ಪದ್ಮಾವತಿ' ಸಿನಿಮಾ ಬಿಡುಗಡೆಗಾಗಿ ಸಿಬಿಎಫ್ಸಿ ಅನುಮತಿ ನೀಡಬೇಕಾದ ಹಿನ್ನೆಲೆಯಲ್ಲಿ ನೂತನ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ.
ಚಲನಚಿತ್ರದ ಬಿಡುಗಡೆಯ ಕುರಿತು ಬಹಳಷ್ಟು ಪ್ರತಿಭಟನೆಗಳು ಮತ್ತು ಪ್ರತಿ-ಹೇಳಿಕೆಗಳ ಮಧ್ಯೆ, ದೀಪಿಕಾ ಪಡುಕೋಣೆ ತಮ್ಮ ಬಾಲ್ಯದ ಸ್ನೇಹಿತರನ್ನು ನೆನಪಿಸಿಕೊಳ್ಳುವ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಪೋಟೋ ನೋಡುತ್ತಿದ್ದರೆ ಮಾತನಾಡಲು ಪದಗಳೇ ಬರುವುದಿಲ್ಲ ಎಂಬಂತೆ ಅಷ್ಟೊಂದು ಸುಂದರವಾಗಿದೆ.
ದೀಪಿಕಾ ತನ್ನ ಬಾಲ್ಯದ ಗೆಳೆಯ ಆದಿತ್ಯ ನಾರಾಯಣ್ ಅವರನ್ನು ಟ್ಯಾಗ್ ಮಾಡುವುದರೊಂದಿಗೆ ದೊಡ್ಡವರಾದ ಮೇಲೂ ಅವರ ಸ್ನೇಹ ಹಾಗೇ ಎಂಬುದಕ್ಕೆ ಸಾಕ್ಷಿಯಾಗಿ ಇಬ್ಬರೂ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅವರ ಸ್ನೇಹಿತ ಇತ್ತೀಚೆಗೆ ವಿವಾಹವಾಗಿದ್ದು, ಅವರ ಪಕ್ಕದಲ್ಲಿ ದೀಪಿಕಾ ನಿಂತಿರುವ ಚಿತ್ರವನ್ನು ಹಾಕಿದ್ದಾರೆ. ರೇಷ್ಮೆ ಸೀರೆ ತೊಟ್ಟು, ಚಿನ್ನದ ನೆಕ್ಲೇಸ್ ಹಾಗೂ ದೊಡ್ಡ ಕಿವಿಯೋಲೆಗಳನ್ನು ಧರಿಸಿರುವ ದೀಪಿಕಾ ಭಾವಚಿತ್ರ ಎಂಥವರನ್ನು ಸೆಳೆಯುತ್ತದೆ.
ಕೆಲವು ದಿನಗಳ ಹಿಂದೆ, ಅನುಷ್ಕಾ ಶರ್ಮಾ ಮತ್ತು ಎಂ.ಎಸ್.ಧೋನಿ ಅವರ ಪತ್ನಿ ಸಾಕ್ಷಿಯ ಅಪರೂಪದ ಚಿತ್ರಗಳು ಕೂಡಾ ವೈರಲ್ ಆಗಿದ್ದವು. ಆದರೆ ವಿರಾಟ್ ಕೊಹ್ಲಿಯವರ ಗೆಳತಿ ಮತ್ತು ಧೋನಿಯವರ ಪತ್ನಿ ಇಬ್ಬರೂ ಬಾಲ್ಯದ ಗೆಳೆಯರಾಗಿದ್ದರೂ ಜನರು ವದಂತಿಗಳನ್ನು ನಿಲ್ಲಿಸಿರಲಿಲ್ಲ ಎಂಬುದೀಗ ಹಳೆಯ ವಿಚಾರ.