ನವದೆಹಲಿ/ಮುಂಬೈ: ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲಿಯೇ 'ಛಪಾಕ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ, ಆಸಿಡ್ ದಾಳಿಯಿಂದ ಬದುಕುಳಿದ ಸಂತ್ರಸ್ತೆ ಲಕ್ಷ್ಮಿ ಅಗರವಾಲ್ ಅವರ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ದೀಪಿಕಾ ಈ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹಲವಾರು ರಿಯಾಲಿಟಿ ಷೋಗಳಿಗೂ ಕೂಡ ಭೇಟಿ ನೀಡುತ್ತಿದ್ದಾರೆ. ಆದರೆ, ಇತ್ತೀಚೆಗೆ 'ಛಪಾಕ್' ಚಿತ್ರದ ಮೀಡಿಯಾ ಇಂಟರ್ವೆನಶನ್ ವೇಳೆ ಓರ್ವ ಪತ್ರಕರ್ತ ದೀಪಿಕಾ ಅವರನ್ನು ಅವರ ಪ್ರೆಗ್ನೆನ್ಸಿ ಕುರಿತು ವಿಚಾರಿಸಿದ್ದಾರೆ. ಇದಕ್ಕೆ ದೀಪಿಕಾ ತುಂಬಾ ಸ್ವಾರಸ್ಯಕರವಾದ ಹಾಗೂ ಜಬರ್ದಸ್ತ್ ಉತ್ತರ ನೀಡಿದ್ದಾರೆ. ಅವರ ಉತ್ತರ ಕೇಳಿರುವ ದೀಪಿಕಾ ಅಭಿಮಾನಿಗಳು ನಿಬ್ಬೆರಗಾಗಿದ್ದು, ಸದ್ಯ ಭಾರಿ ಹೆಡ್ಲೈನ್ ಸೃಷ್ಟಿಸುತ್ತಿದೆ. ಪತ್ರಕರ್ತನಿಗೆ ಉತ್ತರ ನೀಡಿರುವ ದೀಪಿಕಾ ನಾನು ಗರ್ಭಿಣಿಯಾಗಿ ಕಾಣಿಸುತ್ತಿದ್ದೇನೆಯೇ? ಎಂದು ಮರುಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಗರ್ಭಿಯಾಗುವ ಕುರಿತು ಪತ್ರಕರ್ತ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ, "ನಾನು ಗರ್ಭಿಣಿಯಂತೆ ಕಾಣಿಸುತ್ತಿದ್ದೇನೆಯೇ? ನಾನು ಫ್ಯಾಮಿಲಿ ಪ್ಲಾನಿಂಗ್ ಮಾಡುವಾಗ ನಿಮ್ಮನ್ನು ವಿಚಾರಿಸುವೆ. ಒಂದುವೇಳೆ ನೀವು ನನಗೆ ಅನುಮತಿ ನೀಡಿದರೆ, ನಾನು ಖಂಡಿತವಾಗಿಯೂ ಅದರ ಕುರಿತು ಪ್ಲಾನಿಂಗ್ ಮಾಡುವೆ. ಒಂದು ವೇಳೆ ನಾನು ಗರ್ಭಿಣಿಯಾದರೆ, ಒಂಬತ್ತು ತಿಂಗಳ ಅವಧಿಯಲ್ಲಿ ಅದು ನಿಮಗೆ ತಿಳಿಯಲಿದೆ" ಎಂದು ಉತ್ತರಿಸಿದ್ದಾರೆ. ಇದಕ್ಕೂ ಮೊದಲು ಹಿಂದುಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರೆಗ್ನೆನ್ಸಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ದೀಪಿಕಾ, "ನಮ್ಮಿಬ್ಬರಿಗೂ ಮಕ್ಕಳೆಂದರೆ ತುಂಬಾ ಇಷ್ಟ, ನಾವು ಫ್ಯಾಮಿಲಿ ಪ್ಲಾನಿಂಗ್  ನಿಶ್ಚಿತವಾಗಿ ಮಾಡಲಿದ್ದೇವೆ. ಆದರೆ, ಸದ್ಯ ಅಂತಹ ಯಾವುದೇ ಯೋಚನೆ ಇಲ್ಲ" ಎಂದಿದ್ದರು .


ದೀಪಿಕಾ ಅಭಿನಯಿಸಿರುವ 'ಛಪಾಕ್' ಚಿತ್ರ ಇದೇ ತಿಂಗಳ ೧೦ನೇ ತಾರೀಖಿಗೆ ಬಿಡುಗಡೆಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಚಿತ್ರ ಬಿಡುಗಡೆಗೆ ಜಾಸ್ತಿ ಸಮಯ ಉಳಿದಿಲ್ಲ. ಮೇಘನಾ ಗುಲ್ಜಾರ್ ನಿರ್ಮಿಸಿರುವ ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಹಾಗೂ ಮೇಘನಾ ಗುಲ್ಜಾರ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಜೊತೆ ವಿಕ್ರಾಂತ್ ಮೆಸ್ಸಿ ಹಾಗೂ ಅಂಕಿತ್ ಭಿಸ್ಟ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಶೀಘ್ರದಲ್ಲಿಯೇ ದೀಪಿಕಾ '೮೩' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಕಪೂರ್ ಅವರ ಜೊತೆ ಅವರ ಪತ್ನಿಯ ಪಾತ್ರವನ್ನು ದೀಪಿಕಾ ನಿಭಾಯಿಸುತ್ತಿದ್ದಾರೆ.