ಮುಂಬೈ: ಯಾವಾಗಲು ತನ್ನ ಒಂದಿಲ್ಲ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುವ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಂದೇಲ್, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಟ್ವೀಟ್ ವೊಂದನ್ನು ಮಾಡಿರುವ ರಂಗೋಲಿ ಸಂಜಯ್ ಲೀಲಾ ಭನ್ಸಾಲಿ ಹಾಗೂ ದೀಪಿಕಾ ಪಡುಕೋಣೆ ಅವರ 'ಪದ್ಮಾವತ್' ಚಿತ್ರವನ್ನು 'ಇತಿಹಾಸದ ಸಾಫ್ಟ್ ಪೋರ್ನ್' ಚಿತ್ರ ಎಂದು ಕರೆದಿದ್ದಾಳೆ. ಅಷ್ಟೇ ಅಲ್ಲ ಅಜಯ್ ದೇವಗನ್ ಅಭಿನಯದ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಚಿತ್ರಕ್ಕೆ ಬೆಂಬಲ ನೀಡಲು ಕರೆ ನೀಡಿದ್ದಾಳೆ. ಈ ಟ್ವೀಟ್ ನಲ್ಲಿ ರಂಗೋಲಿ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ 'ಸಂಜು' ಬಗ್ಗೆಯೂ ಕೂಡ ವಿವಾದಾತ್ಮಕ ಟಿಪ್ಪಣಿ ಮಾಡಿದ್ದಾಳೆ.


COMMERCIAL BREAK
SCROLL TO CONTINUE READING

ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರಂಗೋಲಿ, "ಸದ್ಯ ಚಿತ್ರರಂಗ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ಕ್ರಿಮಿನಲ್ ವೈಟ್ ವಾಶಿಂಗ್ ನಡೆಸುವ 'ಸಂಜು' ಅಥವಾ ಇತಿಹಾಸದ ಸಾಫ್ಟ್ ಪೋರ್ನ್ ಆಗಿರುವ 'ಪದ್ಮಾವತ್' ಚಿತ್ರಗಳಿಗೆ ನೀಡಿದಷ್ಟೇ ಪ್ರೀತಿ 'ತಾನಾಜಿ' ಚಿತ್ರಕ್ಕೂ ನೀಡಲಿದ್ದೇವೆಯೇ ಎಂದು ಪ್ರಶ್ನಿಸಿದ್ದಾಳೆ. ಚಪ್ಪಾಳೆ ತಟ್ಟಲು ಎರಡೂ ಕೈಗಳು ಬೇಕು. ಹಸ್ತ ಚಾಚಿ ದೇಶ ಉಳಿಸಿ" ಎಂದು ಹೇಳಿದ್ದಾಳೆ.



ಮತ್ತೊಂದು ಟ್ವೀಟ್ ಮಾಡಿರುವ ರಂಗೋಲಿ ಮನಿಕರ್ಣಿಕಾ, ತಾನಾಜಿ, ಪೃಥ್ವಿರಾಜ್ ಚೌಹಾನ್ ಗಳಂತಹ ಚಿತ್ರಗಳಿಂದ ಈ ದೇಶದ ಯುವಕರಲ್ಲಿ ಹೆಪ್ಪುಗಟ್ಟಿದ ರಕ್ತ ಸ್ವಲ್ಪವಾದರೂ ಬಿಸಿಯಾಗಲಿದೆ. ಓರ್ವ ಹುತಾತ್ಮನಿಗೆ ದಕ್ಕಬೇಕಾದ ಗೌರವ ಸಲ್ಲಿಸಿದ್ದಕ್ಕೆ ಅಜಯ್ ಸರ್.. ನಿಮಗೆ ನನ್ನ ಧನ್ಯವಾದಗಳು. ಈ ಚಿತ್ರವನ್ನು ಯಶಸ್ವಿಗೊಳಿಸುವುದು ಇದೀಗ ನಮ್ಮ ಜವಾಬ್ದಾರಿ" ಎಂದು ಬರೆದಿದ್ದಾಳೆ.



ಇದಕ್ಕೂ ಮೊದಲು ವಿಡಿಯೋ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದ ರಂಗೋಲಿ, ದೀಪಿಕಾ ಅವರ ಚಿತ್ರದ ಕುರಿತು ಕಂಗನಾ ಆಡಿರುವ ಹೊಗಳಿಕೆಯ ಮಾತುಗಳಿಗೆ ಸಪೋರ್ಟ್ ನೀಡಿ. ಆಸಿಡ್ ದಾಳಿಗೆ ತುತ್ತಾದ ಓರ್ವ ಯುವತಿಯ ಜೀವನವನ್ನಾಧರಿಸಿ ನಿರ್ಮಾಣಗೊಂಡ 'ಛಪಾಕ್' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ದೇಶದ ಇತಿಹಾಸವನ್ನಾಧರಿಸಿ ನಿರ್ಮಾಣಗೊಂಡ 'ಪದ್ಮಾವತ್' ಚಿತ್ರವನ್ನು 'ಸಾಫ್ಟ್ ಪೋರ್ನ್' ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾಳೆ.