ತಾಯಿಯ ಪತ್ರಕ್ಕೆ ಕಣ್ಣೀರಿಟ್ಟ ದೀಪಿಕಾಗೆ ಕಣ್ಣೊರೆಸಿದ ಕಿಂಗ್ ಖಾನ್
ಇಲ್ಲಿ ನಡೆದ `ಬಾತೆ ವಿಥ್ ಬಾದಷಾ` ಕಾರ್ಯಕ್ರಮದಲ್ಲಿ ದೀಪಿಕಾಳ ತಾಯಿ ಉಜ್ಜಲಾ ಪಡುಕೋಣೆ ಬರೆದ ಪತ್ರವನ್ನು ಓದುತ್ತಿದ್ದಾಗ ದೀಪಿಕಾ ಕಣ್ಣಾವಲಿಗಳು ಕಣ್ಣಿರಿನಿಂದ ತುಂಬಿಹೋಗಿದ್ದವು.
ಮುಂಬೈ:ಇಲ್ಲಿ ನಡೆದ 'ಬಾತೆ ವಿಥ್ ಬಾದಷಾ' ಕಾರ್ಯಕ್ರಮದಲ್ಲಿ ದೀಪಿಕಾಳ ತಾಯಿ ಉಜ್ಜಲಾ ಪಡುಕೋಣೆ ಬರೆದ ಪತ್ರವನ್ನು ಓದುತ್ತಿದ್ದಾಗ ದೀಪಿಕಾ ಕಣ್ಣಾವಲಿಗಳು ಕಣ್ಣಿರಿನಿಂದ ತುಂಬಿಹೋಗಿದ್ದವು.
ದೀಪಿಕಾಳ ಸಾಧನೆಯ ಬಗ್ಗೆ ತಾಯಿ ಅಭಿಮಾನದಿಂದ ಬರೆದದ ಪತ್ರದಲ್ಲಿ ಅವಳ ವೃತ್ತಿ ಬದುಕಿನಲ್ಲಿ ಮಾಡಿರುವ ಸಾಧನೆಗೆ ಧನ್ಯವಾದಗಳನ್ನು ಅರ್ಪಿಸಿರುವ ಉಜ್ಜಲಾ ಅವರು ದೀಪಿಕಾ ತನ್ನ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕನ್ನು ನಿರ್ವಹಿಸಿರುವ ಬಗೆಯನ್ನು ಸಹಿತ ಕೊಂಡಾಡಿದ್ದಾರೆ, ಶಾರುಕ್ ಖಾನ್ ಪತ್ರ ಓದುತ್ತಿದ್ದ ಈ ಸಂಧರ್ಭದಲ್ಲಿ ದೀಪಿಕಾ ಪಡುಕೋಣೆ ಕಣ್ಣಿರಿಡುತ್ತಿರುವುದನ್ನು ಗಮನಿಸಿದ ಬಾಲಿವುಡ್ ಬಾದಷಾ ದೀಪಿಕಾಳ ಕಣ್ಣಿರನ್ನು ಒರೆಸಿದ್ದಾರೆ.
ದೀಪಿಕಾ ತನ್ನ ಬಾಲಿವುಡ್ ವೃತ್ತಿ ಜೀವನವನ್ನು ಕಿಂಗ ಖಾನ್ ಅಭಿನಯದ ಓಂ ಶಾಂತಿ ಓಂ ಮೂಲಕ 2007 ರಲ್ಲಿ ಪ್ರಾರಂಭಿಸಿದ ನಂತರ ಮೊ ಅಂದಿನಿಂದ ಬಾಲಿವುಡ್ ನಲ್ಲಿ ತಮ್ಮದೇ ಚಾಪುನ್ನು ಮೂಡಿಸಿದ್ದಾರೆ.