Honey Singh Divorce : ಸುಮಾರು 13 ವರ್ಷಗಳ ದಾಂಪತ್ಯ ಜೀವನದ ನಂತರ ರ್ಯಾಪರ್ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ವಿಚ್ಛೇದನ ನೀಡಿದೆ. ಪ್ರಕರಣದ ಎರಡನೇ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಪರಮ್‌ಜಿತ್ ಸಿಂಗ್ ಅವರು ಪುರಸ್ಕರಿಸಿದರು. ಸುಮಾರು ಎರಡೂವರೆ ವರ್ಷಗಳ ಕಾನೂನು ಹೋರಾಟ ಇಂದಿಗೆ ಕೊನೆಗೊಂಡಿದೆ.


COMMERCIAL BREAK
SCROLL TO CONTINUE READING

ಹಿಂದೂ ವಿವಾಹ ಕಾಯಿದೆಗೆ ಅನುಸಾರವಾಗಿ, ಆರಂಭಿಕ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ ನಂತರ ಆರರಿಂದ ಹದಿನೆಂಟು ತಿಂಗಳ ನಂತರ ಎರಡನೇ ಮೊಷನ್ ಸಲ್ಲಿಸಲಾಗುತ್ತದೆ. ಆರರಿಂದ ಹದಿನೆಂಟು ತಿಂಗಳ ಅವಧಿಯನ್ನು ಇಂಟರ್ರೆಗ್ನಮ್ ಎಂದು ಗೊತ್ತುಪಡಿಸಲಾಗುತ್ತದೆ. 


ಇದನ್ನೂ ಓದಿ:ವಿನೋದ್‌ ಪ್ರಭಾಕರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ: ʼನೆಲ್ಸನ್‌ಗೆ ನಾಯಕಿ ಯಾರು ಗೊತ್ತೇ?


11 ವರ್ಷಗಳ ವಿವಾಹ ಜೀವನದ ನಂತರ ಹನಿ ಮತ್ತು ಶಾಲಿನಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ ಅನ್ನು ಉಲ್ಲೇಖಿಸಿ ಸೆಪ್ಟೆಂಬರ್ 2022 ರಲ್ಲಿ ಕುಟುಂಬ ನ್ಯಾಯಾಲಯದಲ್ಲಿ ಜಂಟಿಯಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಸ್ವೀಕರಿಸಿದ ನಂತರ ನ್ಯಾಯಾಲಯವು ಆರು ತಿಂಗಳ ಮಧ್ಯಂತರ ಅವಧಿಯನ್ನು ನೀಡಿತ್ತು.


ಆಗಸ್ಟ್ 2021 ರಲ್ಲಿ, ಶಾಲಿನಿ ದೆಹಲಿ ತೀಸ್ ಹಜಾರಿ ನ್ಯಾಯಾಲಯದಲ್ಲಿ ಗಾಯಕ ಹನಿ ಸಿಂಗ್‌ ವಿರುದ್ಧ ಕೌಟುಂಬಿಕ ದೌರ್ಜನ್ಯದ ಮೊಕದ್ದಮೆಯನ್ನು ಹೂಡಿದರು. ಮೊಕದ್ದಮೆಯನ್ನು ಸಲ್ಲಿಸಿದ ಕೆಲವು ದಿನಗಳ ನಂತರ, ಹನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಆರೋಪಗಳನ್ನು "ದುರುದ್ದೇಶಪೂರಿತ," "ಸುಳ್ಳು" ಮತ್ತು "ಅಸಹ್ಯ" ಎಂದು ಖಂಡಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.