ಬೆಂಗಳೂರು: ಪ್ರತಿ ಶನಿವಾರ ಮತ್ತು ಭಾನುವಾರ ಬಂತು ಅಂದ್ರೆ ಜನಕ್ಕೆ ಇತ್ತೀಚಿಗೆ ಫುಲ್ ಖುಷ್.ಯಾಕಂದ್ರೆ ಸಾಧಕರ ಜೀವನವನ್ನ ಟಿವಿ ಮುಂದೆ ಕುಳಿತು ನೋಡೋ ಭಾಗ್ಯವನ್ನ ಜೀ ಕನ್ನಡ ವಾಹಿನಿ ಕಲ್ಪಿಸಿದೆ.


COMMERCIAL BREAK
SCROLL TO CONTINUE READING

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನ ಪ್ರತಿಯೊಬ್ಬರೂ ಇಷ್ಟಪಟ್ಟು ಕಾದು ನೋಡುತ್ತಾರೆ.ಯಾಕಂದ್ರೆ ಒಳ್ಳೆ ಜೀವನ ಸಂದೇಶ ಸಿಗುತ್ತೆ ಅನ್ನೋ ಕಾರಣಕ್ಕೆ.ಯೆಸ್ ಪ್ರತಿವಾರ ಕೂಡ ಯಾರಪ್ಪ ಈ ಎಪಿಸೋಡ್ ನ ಸಾಧಕ ಅಥವಾ ಸಾಧಕಿ ಅಂತ ಕಾದು ಜನ ನೋಡ್ತಾರೆ. ಹಾಗಾದ್ರೆ ಈ ವಾರ ಯಾರು ಅಥಿತಿ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಇದನ್ನೂ ಓದಿ: Actress Leelavati: ಹಿರಿಯ ನಟಿ ಲೀಲಾವತಿ ನಟನೆ ಅನುಕರಣೆ ಮಾಡಿದ ನಟ ಶ್ರೀಧರ್ !


ಯೆಸ್


ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರು ಸೇರಿದಂತೆ ಕೆಲ ರಾಜಕೀಯ ವ್ಯಕ್ತಿಗಳು ಸಾಧಕರ ಕುರ್ಚಿಯಲ್ಲಿ ಕುಳಿತಿದ್ದರು.


ಈ ಬಾರಿ ಕರ್ನಾಟಕ ರಾಜಕೀಯದಲ್ಲಿ ಟ್ರಬಲ್ ಶೂಟರ್, ಕನಕಪುರ ಬಂಡೇ ಎಂದೇ ಖ್ಯಾತಿ ಪಡೆದಿರುವ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದು, ಅವರ ಬಾಲ್ಯ, ರಾಜಕೀಯ, ಶಿಕ್ಷಣ, ಹೋರಾಟ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಈಗಾಗಲೇ ಡಿ.ಕೆ.ಶಿವಕುಮಾರ್ ಎಪಿಸೋಡ್‌ನ ಚಿತ್ರೀಕರಣ ಮುಗಿದಿದ್ದು, ಈ ಶನಿವಾರ ಮತ್ತು ಭಾನುವಾರ ಅವರ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ: ಬಂಗಾರದಿಂದ ಬಣ್ಣಾನ ತಂದ ..ಸಾರಂಗದಿಂದ ನಯನಾನ ತಂದ ಕೇಜ್ರಿಸ್ಟಾರ್ : ಈಗ ಯಾಕೆ ಈ ಸಾಂಗ್ ಅಂತೀರಾ...


ವಿಧನಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಜಯಭೇರಿ ಬಳಿಕ ರಾಷ್ಟ್ರ ರಾಜಕೀಯದಲ್ಲೂ ಡಿಕೆಶಿ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗಿದ್ದಾರೆ.  ಇದೇ ಸಮಯದಲ್ಲೇ ಡಿಕೆಶಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ವರ್ಣರಂಜಿತ ರಾಜಕೀಯ ಅನುಭವವಿರುವ ಡಿ.ಕೆ.ಶಿವಕುಮಾರ್ ಅವರ ಎಪಿಸೋಡ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಪ್ರತಿಬಾರಿ ವೀಕೆಂಡ್ ವಿತ್ ರಮೇಶ್‌ಗೆ ಬರುವ ಗೆಸ್ಟ್‌ಗಳ ಬಗ್ಗೆ ವೀಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ.


ಆದರೆ, ಈ ಬಾರಿಯ ಅತಿಥಿ ಯಾರೆಂದೂ ಜೀ ಕನ್ನಡ ವಾಹಿನಿ ಇನ್ನೂ ಬಹಿರಂಗಗೊಳಿಸಿಲ್ಲ. ಸಾಮಾನ್ಯವಾಗಿ ಮಂಗಳವಾರರಂದು ಮುಂದಿನ ವಾರದ ಅತಿಥಿ ಯಾರೆಂದು ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ, ಈ ಬಾರಿ ವಾಹಿನಿ ಯಾವುದೇ ಪೋಟೋ ಹಾಗೂ ಪ್ರೋಮೋವನ್ನು ಹಂಚಿಕೊಂಡಿಲ್ಲ.


ಹಿಂದಿನ ವಾರ  ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದ ಅತಿಥಿಯಾಗಿ  ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಮತ್ತು ನಿರ್ದೇಶಕ ಜೈ ಜಗದೀಶ್ ಹಾಗೂ  ಕನ್ನಡ ಕವಿ, ಸಾಹಿತಿ, ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಯಾದ ದೊಡ್ಡರಂಗೇಗೌಡರು  ಆಗಮಿಸಿದ್ದರು. ಇವರಿಬ್ಬರ ಎಪಿಸೋಡ್‌ಗಳು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದವು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ