ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರ ನಡೆಯುತ್ತಿದ್ದಂತೆ, ಹೊಸದಾಗಿ ಕ್ರೌರ್ಯದ  ಸಾಕ್ಷಿಯೊಂದು ಹೊರಬಿದ್ದಿದೆ. 


COMMERCIAL BREAK
SCROLL TO CONTINUE READING

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತಲೇ ಇವೆ. ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. ಸತ್ಯಕ್ಕೆ ಹೊಸತೊಂದು ಮಾಹಿತಿ ದೊರೆತಿದ್ದು, ಈ ಕೊಲೆ ಪ್ರಕರಣಕ್ಕೂ ಮುನ್ನ ನಟ ದರ್ಶನ್ ಆಸ್ತಿಯ ವಿಚಾರಕ್ಕೆ ಇನ್ನೊಂದು ಕ್ರೌರ್ಯವೊಂದು ಹೊರಹಾಕಿದೆ. 


ಇದನ್ನು ಓದಿ : ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಜೂನ್ 22ರಂದು ಆರಂಭ


ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಇದಕ್ಕೂ ಮುಂಚೆ ಇನ್ನೊಂದು ಕ್ರೌರ್ಯವೊಂದನ್ನು ಎಸಗಿದ್ದರು.ಆ ಕುರಿತಂತೆ ಈಗೊಂದು ಸಾಕ್ಷಿ ಹೊರ ಬಿದ್ದಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಂತರ ಒಂದೊಂದಾಗಿ ವಿಷಯಗಳು ಹೊರಬರುತ್ತಲೇ ಇವೆ. ಇದೀಗ ನಟ ದರ್ಶನ್ ಇದಕ್ಕೂ ಮುಂಚೆ ಆಸ್ತಿ ವಿಚಾರಕ್ಕೋಸ್ಕರ ತನ್ನ ಸೋದರ ಮಾವಂದಿರನ್ನು ಮನೆಯಿಂದ ಹೊರ ಹಾಕಿದ್ದಾರಂತೆ. 


ಆಸ್ತಿ ವಿಚಾರಕ್ಕೋಸ್ಕರ ತಾನು ಹುಟ್ಟಿದ ತಾಯಿಯ ತವರು ಮನೆಯಿಂದ ತಮ್ಮ ಸೋದರ ಮಾವಂದಿರನ್ನು ಬೀದಿ ಕಟ್ಟಿದ್ದರು ಇದು ಇದಕ್ಕೂ ಮುಂಚೆ ಕೊಡಗಿನಲ್ಲಿ ನಡೆದಂತ ಒಂದು ಘಟನೆ. ಈ ಕುರಿತಂತೆ ದರ್ಶನ್ ಸೋದರ ಮಾವ ಮಾಹಿತಿ ನೀಡಿದ್ದಾರೆ. 


ಇದನ್ನು ಓದಿ : ಸ್ಯಾಂಡಲ್ ವುಡ್ ಗೆ ಮಂದಿಗೆ ದರ್ಶನ್ ಅಂದ್ರೆ ಭಯ, ಯಾಕೆ ಗೊತ್ತಾ ?


ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನ ದರ್ಶನ್ ಮೇಲೆ 15ಕ್ಕೂ ಅಧಿಕ ಕೇಸ್ ಗಳು ದಾಖಲಾಗಿದ್ದು ಪತ್ತೆಯಾಗಿದೆ. ಹಲವಾರು ಪ್ರಕರಣಗಳು ದರ್ಶನವರ ಮೇಲೆ ಕೇಸ್ ಆಗಿದ್ದು, ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಇದಕ್ಕೆ ಸೇರ್ಪಡೆಯಾಗಿದೆ.  ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ವಿರುದ್ಧ ಸ್ವತಃ ಅವರ ಸೋದರ ಮಾವ ಟಿಎಲ್ ಶ್ರೀನಿವಾಸ್ ಮಾತನಾಡಿ ಈ ಕುರಿತಂತೆ ಆಕ್ರೋಶ ಹೊರ ಹಾಕಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ದರ್ಶನ್ ಸೋದರ ಮಾವ ಇದಕ್ಕೂ ಮುಂಚೆ ಆಸ್ತಿ ವಿಚಾರಕ್ಕೋಸ್ಕರ ಜಗಳ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕಿದ್ದರು ಎಂದು ತಿಳಿಸಿದ್ದಾರೆ. 


ದರ್ಶನ್ ತಮ್ಮ ಹೆಂಡತಿ ವಿಜಯಲಕ್ಷ್ಮಿಯ ಮೇಲೆ ಹಲ್ಲೆ ನಡೆಸಿದಾಗ ಅವರು ರಾಜಾಜಿನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು ಆ ಸಮಯದಲ್ಲಿ ನಾವಿಬ್ಬರು ಹೋಗಿ ಈ ಕುರಿತಂತೆ ಪಂಚಾಯಿತಿ ಮಾಡಿ ಬಂದಿದ್ದೆವು ಅದಾದ ಬಳಿಕ ನಾವು ಮತ್ತೆ ಅವರ ಬಳಿ ಹೋಗಿರಲಿಲ್ಲ ಎಂದು ದರ್ಶನ್ ಸೋದರ ಮಾವ ತಿಳಿಸಿದ್ದು, ರೇಣುಕಾ ಸ್ವಾಮಿಯವರನ್ನ ಕೊಲೆ ಮಾಡಿ ಜೈಲು ಸೇರಿರುವುದು ನಮಗೆ ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.