Devil New Glimpse Out: ಸ್ಯಾಂಡಲ್‌ವುಡ್‌ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಭಿನಯದ ಬಹು ನಿರೀಕ್ಷಿತ ಡೆವಿಲ್  ಚಿತ್ರದ ಮೇಕಿಂಗ್‌ ವಿಡಿಯೋ ರಿಲೀಸ್‌ ಆಗಿದೆ. ಅಕ್ಷಯ ತೃತೀಯದಂದು ಚಿತ್ರತಂಡ ಮೇಕಿಂಗ್‌ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ದರ್ಶನ್ ಪಾತ್ರದ ಖದರ್ ಹೇಗೆದೆ ಎಂಬುದನ್ನು ತಿಳಿಯಬಹುದು. ಈ ಚಿತ್ರದ ಮೇಕಿಂಗ್‌ ಗ್ಲಿಂಪ್ಸ್ ನೋಡಿದರೇ ಸಾಕು, ಸಿನಿಮಾದ ಫಸ್ಟ್ ಲುಕ್ ಹೇಗೆ ತಯಾರಾಗಿದೆ ಅನ್ನೋದು ಗೊತ್ತಾಗುತ್ತದೆ.


COMMERCIAL BREAK
SCROLL TO CONTINUE READING

ಡೆವಿಲ್‌ ಮೇಕಿಂಗ್‌ ಗ್ಲಿಪ್ಸ್‌ ವಿಡಿಯೋದಲ್ಲಿ  ಕ್ಯಾಮರಾಮನ್, ಡೈರೆಕ್ಟರ್, ದರ್ಶನ್ ಮತ್ತು ತಂಡದ ಇತರ ಸದಸ್ಯರೆಲ್ಲರೂ ಕೂಡ ಇದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇದ್ದು, ಇಷ್ಟು ದಿನ ನಟ ದರ್ಶನ್‌ ಅವರನ್ನು ಹೀರೋ ಆಗಿ ನೋಡುತ್ತಿದ್ದ ಪ್ರೇಕ್ಷಕರು, ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೀರ್ಷಿಕೆಯಂತೆ  ದರ್ಶನ್‌ ಮಾಡುತ್ತಿರುವ ರೋಲ್‌  ವಿಲನ್‌ ಆಗಿದ್ದು, ಹಾಗೆಯೇ ಹೀರೋ ಅನ್ನೋ ಫೀಲ್ ಕೂಡ ತರಲಿದ್ದಾರೆ.


Rajanikanth: ಸುಸೈಡ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್‌ ಸ್ಟಾರ್‌ ಲೈಫ್‌!!


ಡೈರೆಕ್ಟರ್ ಮಿಲನ ಪ್ರಕಾಶ್ ಸಿನಿಮಾದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲೇ ಅಷ್ಟಾಗಿ ಏನೋ ಹೇಳಿಕೊಂಡಿಲ್ಲ. ಆದರೆ ಈ ಡೆವಿಲ್‌ ಮೇಕಿಂಗ್‌ ಗ್ಲಿಪ್ಸ್‌ ವಿಡಿಯೋದಲ್ಲಿ ನಿರ್ದೇಶಕ ಮಿಲನ ಪ್ರಕಾಶ್, ಕ್ಯಾಮರಾಮ್ಯಾನ್‌ ಸುಧಾಕರ್  ಹಾಗೂ ನಟ ದರ್ಶನ್‌ ಕ್ಯಾಮರಾ ಫೇಸ್ ಮಾಡುತ್ತಿರುವುದೆಲ್ಲಾ ಹೆಚ್ಚು ಹೈಲೈಟ್‌ ಆಗಿದೆ. ಇದಕ್ಕೂ ಮುಂಚೆ ಡಿಬಾಸ್‌ ಹುಟ್ಟುಹಬ್ಬ ಫೆಬ್ರವರಿ 16 ರಂದು ಈ ಚಿತ್ರದ ಫಸ್ಟ್ ಗ್ಲಿಂಪ್ಸ್ರಿವೀಲ್‌ ಆಗಿತ್ತು. 


ನಟ ದರ್ಶನ್‌ಗೆ ಇತ್ತೀಚೆಗೆ ಶೂಟಿಂಗ್ ಟೈಮ್‌ನಲ್ಲಿ ಎಡಗೈಗೆ ಪೆಟ್ಟು ಆಗಿದ್ದರೂ ಕೂಡ, ಆ್ಯಕ್ಷನ್ ಸೀನ್‌ ಚಿತ್ರೀಕರಣ ಮುಗಿದ ಮೇಲೆ ಎಡಗೈ ಶಸ್ತ್ರ ಚಿಕಿತ್ಸೆ ಮಾಡಿಸಿದರು. ಆದರೆ ಈ ನಟ ಡೆವಿಲ್ ಸಿನಿಮಾ ಅಕ್ಟೋಬರ್ ನಲ್ಲಿಯೇ ತೆರೆಕಾಣಬೇಕಿತ್ತು. ಕೈಗೆ ಪೆಟ್ಟು ಬೀಳದೇ ಇದ್ದರೇ,  ಇಷ್ಟೊತ್ತಿಗಾಗಲೇ  ಶೇಕಡ 70 ರಷ್ಟು ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಆದರೆ ಇದೀಗ ತಡವಾಗಿದೆಂದು ಹೇಳಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.