Devil The Hero Shooting Date: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಕಳೆದ ವರ್ಷದ ಕೊನೆಯಲ್ಲಿ ತೆರೆಗೆ ಅಪ್ಪಳಿಸಿ, ಭರ್ಜರಿ ಗೆಲುವನ್ನು ಪಡೆದುಕೊಂಡಿತ್ತು. ಈ ಚಿತ್ರದ  ಯಶಸ್ಸಿನ ಬಳಿಕ ಈ ನಟ  ಡೈರೆಕ್ಟರ್‌ ಮಿಲನಾ ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ ದಿ ಹೀರೋ ಸಿನಿಮಾಗಾಗಿ ತಯಾರಾಗುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈಗಾಗಲೇ ಡೆವಿಲ್ ದಿ ಹೀರೋ ಟೀಸರ್ ರಿಲೀಸ್‌ ಆಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ತಿಂಗಳು ಫೆಬ್ರವರಿಯಲ್ಲಿ ಬಿಡುಗಡೆಯಾದ ಝಲಕ್‌ನಲ್ಲಿ ನಟ ದರ್ಶನ್‌ ಲುಕ್, ಡೈಲಾಗ್ ಡೆಲಿವರಿ ನೋಡಿದ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಆದರಿಂದ ಈ ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.


ಇದನ್ನೂ ಓದಿ: Toxic: ರಾಕಿಂಗ್‌ ಸ್ಟಾರ್‌ ʻಟಾಕ್ಸಿಕ್‌ʼನಲ್ಲಿ ನಟಿಸುವುದರ ಬಗ್ಗೆ ಸ್ಪಷ್ಟನೆ ನೀಡಿದ ಕರೀನಾ ಕಪೂರ್..!!


ನಟ ದರ್ಶನ್‌ ಕೂಡ ಈ ಹಿಂದೆ ಅಕ್ಟೋಬರ್ ನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂಬ ಸುಳಿವು ನೀಡಿದ್ದು, ಆದರೆ ಈ ಚಿತ್ರದ ಶೂಟಿಂಗ್‌ ಇದೇ ಮಾರ್ಚ್ 22 ರಂದು ಆರಂಭಿಸಲು ನಿರ್ದೇಶಕರು ನಿರ್ಧಾರ ಮಾಡಿದ್ದಾರೆ. ದರ್ಶನ್‌ ಹಾಗೂ ಮಿಲನಾ ಪ್ರಕಾಶ್‌ ತಾರಕ್‌ ಸಿನಿಮಾದ ನಂತರ ಎರಡನೇ ಬಾರಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.


ಡೆವಿಲ್ - ದಿ ಹೀರೋ ಮಾಸ್ ಎಂಟರ್‌ಟೈನರ್ ಚಿತ್ರವಾಗಲು ಸಿದ್ಧವಾಗುತ್ತಿದ್ದು, ಇನ್ನೂ ಈ ಸಿನಿಮಾದ ಕಲಾವಿದರ ಪಾತ್ರಗಳ ಬಗ್ಗೆ ಬಹಿರಂಗ ಪಡಿಸಿಲ್ಲ. ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್‌ ಕಂಪೋಸ್‌ ಮಾಡುತ್ತಿದ್ದು,  ಸುಧಾಕರ್ ಎಸ್ ರಾಜ್ ಛಾಯಾಗ್ರಹಣವಿದೆ. ಈ ಸಿನಿಮಾ ವೈಷ್ಣೋ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.