Bigg Boss Priyanka: ಮೌನರಾಗಂ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಪ್ರಿಯಾಂಕಾ ಜೈನ್. ತನ್ನ ಸೌಂದರ್ಯ ಮತ್ತು ನಟನೆಯಿಂದ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಬಹಳಷ್ಟು ಹತ್ತಿರವಾಗಿದ್ದವರು. ಅದೇ ಕ್ರಮದಲ್ಲಿ ಬಿಗ್ ಬಾಸ್ ತೆಲುಗು ಸೀಸನ್-7 ಪ್ರವೇಶಿಸಿದ್ದರು ಪ್ರಿಯಾಂಕ. ಅಲ್ಲಿಯೂ ಸಹ ತಮ್ಮ ಆಟದ ಶೈಲಿ ಮತ್ತು ಮಾತಿನ ಶೈಲಿಯಿಂದ ಜನಪ್ರಿಯತೆ ಗಳಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಟಲಿಯ ಮಿಲನ್‌ನಲ್ಲಿ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ! ರೊಮ್ಯಾಂಟಿಕ್ ಫೋಟೋಸ್ ವೈರಲ್


ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಪ್ರಿಯಾಂಕಾ ಜೈನ್, ತಮ್ಮ ಪ್ರಿಯಕರ, ಕಿರುತೆರೆ ನಟ ಶಿವಕುಮಾರ್ ಅವರನ್ನು ಎಲ್ಲರಿಗೂ ಪರಿಚಯಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ನಿಜ ಜೀವನದಲ್ಲಿ ತುಂಬಾ ಖುಷಿಯಾಗಿರುವ ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಆಗಾಗ್ಗೆ ತನ್ನ ಪ್ರೇಮಿಯೊಂದಿಗೆ ಫ್ರಾಂಕ್ ವೀಡಿಯೊಗಳನ್ನು ಮಾಡುತ್ತಿರುತ್ತಾರೆ.


ಅಂತೆಯೇ ಪ್ರಿಯಾಂಕಾ ಇತ್ತೀಚೆಗೆ ತನ್ನ ಗೆಳೆಯನೊಂದಿಗೆ ತಿರುಪತಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಲವ್ ಬರ್ಡ್ಸ್ ಮಾಡಿದ ಫ್ರಾಂಕ್ ವಿಡಿಯೋ ಭಾರೀ ವೈರಲ್‌ ಆಗಿದೆ. ತಿರುಮಲದ ಮೆಟ್ಟಿಲುಗಳಲ್ಲಿ ಚಿರತೆ ಓಡಾಡುವ ಏಳನೇ ಮೈಲಿಗಲ್ಲು ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಮಧ್ಯದಲ್ಲಿ ಪ್ರಿಯಾಂಕಾ ಪ್ರಾಂಕ್‌ ವಿಡಿಯೋ ಮಾಡಿದ್ದಾರೆ. ನಕಲಿ ಆಡಿಯೋ ಹಾಕಿ ಚಿರತೆ ಹುಲಿ ಬಂದಿದೆ ಎಂದು ಅಲ್ಲಿಂದ ಓಡಿ ಹೋಗುವಂತೆ ಮಾಡಿದ್ದಾರೆ. ಬಳಿಕ, 'ತಿರುಪತಿಗೆ ಹೋಗುವ ದಾರಿಯಲ್ಲಿ ನಮ್ಮ ಮೇಲೆ ಚಿರತೆ ದಾಳಿ? ಎನ್ನುತ್ತಾ ಶಾಕಿಂಗ್‌ ಫೋಟೋಗಳಿರುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ 'ಕೊನೆಗೆ ಚಿರತೆ ಇಲ್ಲ.. ಫ್ರಾಂಕ್ ಅಷ್ಟೆ' ಎಂದು ಹೇಳಿ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದರು ಪ್ರಿಯಾಂಕಾ.


ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದವರೆಲ್ಲ ರೊಚ್ಚಿಗೆದ್ದಿದ್ದಾರೆ. ಪುಣ್ಯ ಪಥದಲ್ಲಿ ಈ ರೀತಿಯ ವಿಡಿಯೋ ಮಾಡಿರುವ ಪ್ರಿಯಾಂಕಾ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ವೀಕ್ಷಣೆಗಾಗಿ, ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಟೆಸ್ಟ್, ODI, T20... ಎಲ್ಲಾ 3 ಸ್ವರೂಪಗಳಲ್ಲಿಯೂ ಶತಕ ಬಾರಿಸಿದ ಟೀಂ ಇಂಡಿಯಾದ ಮೊದಲ ಕ್ರಿಕೆಟಗ ಯಾರು ಗೊತ್ತೇ? ಈ ದಿಗ್ಗಜ ಪ್ರೀತಿಸಿ ಮದುವೆಯಾಗಿದ್ದು ತನ್ನ ಕೋಚ್‌ನ ಮಗಳನ್ನೇ...


ಪ್ರಿಯಾಂಕಾ ಜೈನ್ ತನ್ನ ವೀಡಿಯೊಗೆ ಬಹಳಷ್ಟು ನೆಗೆಟಿವ್‌ ಕಮೆಂಟ್‌ಗಳನ್ನು ಪಡೆಯುತ್ತಿದ್ದಂತೆ, ತನ್ನ ಯೂಟ್ಯೂಬ್ ಚಾನೆಲ್‌ನಿಂದ ವೀಡಿಯೊವನ್ನು ತೆಗೆದುಹಾಕಿದ್ದಾರೆ. ಇನ್ನೊಂದೆಡೆ ಈ ವಿವಾದ ಟಿಟಿಡಿ ಗಮನಕ್ಕೆ ಬರುತ್ತಿದ್ದಂತೆ ಟಿಟಿಡಿ ಆಡಳಿತ ಮಂಡಳಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. "ಪವಿತ್ರ ದೇವಸ್ಥಾನದಲ್ಲಿ ಇಂತಹ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಹುಚ್ಚುತನ ಮಾಡಿರುವ ಪ್ರಿಯಾಂಕಾ ಜೈನ್ ಮತ್ತು ಆಕೆಯ ಗೆಳೆಯ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು" ಎಂದು ಒತ್ತಾಯಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ