ಖ್ಯಾತ ನಟ ನೆಪೋಲಿಯನ್ ಅವರ ವಿಶೇಷ ಚೇತನ ಪುತ್ರ ಧನೂಷ್ ಅದ್ಧೂರಿ ಮದುವೆ, ಚಿತ್ರರಂಗದ ಗಣ್ಯರು ಬಾಗಿ
ಇಬ್ಬರಲ್ಲಿ ಧನುಶ್ ಎನ್ನುವ ಪುತ್ರನಿಗೆ ಬಾಲ್ಯದಿಂದಲೇ ಅಪರೂಪದ ಕಾಯಿಲೆ ಇದೆ, ಹೀಗಾಗಿ 10 ವರ್ಷ ವಯಸ್ಸು ದಾಟಿದ ನಂತರ ಆತನಿಗೆ ನಡೆಯಲು ಕೂಡ ಸಾಧ್ಯವಿಲ್ಲ. ಇದರಿಂದಾಗಿ ಅವನಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಅಮೇರಿಕಾದಲ್ಲಿ ನೆಲೆಸಿದ್ದರು.
ಚೆನ್ನೈ: ಇತ್ತೀಚಿಗಷ್ಟೇ ತಮಿಳು ಚಿತ್ರರಂಗದ ಖ್ಯಾತ ನಟ ನೆಪೋಲಿಯನ್ ಅವರ ವಿಕಲಚೇತನ ಹೊಂದಿರುವ ಪುತ್ರ ಧನೂಶ್ ಅವರ ಮಾಡುವೆ ನೆರವೇರಿದೆ.ಸದ್ಯ ರಾಜಕೀಯದಲ್ಲಿಯೂ ಸಕ್ರಿಯರಾಗಿರುವ ನಟ ನೆಪೋಲಿಯನ್ ಗೆ ಧನುಶ್ ಮತ್ತು ಗುನಾಲ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.
ಇಬ್ಬರಲ್ಲಿ ಧನುಶ್ ಎನ್ನುವ ಪುತ್ರನಿಗೆ ಬಾಲ್ಯದಿಂದಲೇ ಅಪರೂಪದ ಕಾಯಿಲೆ ಇದೆ, ಹೀಗಾಗಿ 10 ವರ್ಷ ವಯಸ್ಸು ದಾಟಿದ ನಂತರ ಆತನಿಗೆ ನಡೆಯಲು ಕೂಡ ಸಾಧ್ಯವಿಲ್ಲ. ಇದರಿಂದಾಗಿ ಅವನಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಅಮೇರಿಕಾದಲ್ಲಿ ನೆಲೆಸಿದ್ದರು.
ಕೆಲವು ವರ್ಷಗಳ ಹಿಂದೆ ಖ್ಯಾತ ಯೂಟ್ಯೂಬರ್ ಇರ್ಫಾನ್ ನೆಪೋಲಿಯನ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಮಗನಾಗಿರುವ ಧನುಶ್ ನ ಮೇಲೆ ನೆಪೋಲಿಯನ್ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಸಾಬೀತಾಯಿತು.ಈ ವೇಳೆ ತನ್ನ ಪುತ್ರನಿಗಾಗಿ ನಿರ್ಮಿಸಿರುವ ಅಮೇರಿಕಾದ ಮನೆಯನ್ನು ಇರ್ಫಾನ್ ವಿಡಿಯೋ ಮೂೂಲಕ ತೋರಿಸಿದ್ದರು.ಮಗನ ಮದುವೆಯ ಬಗ್ಗೆ ಚಿಂತಿತರಾಗಿದ್ದ ನೆಪೋಲಿಯನ್ ಈಗ ಮಗನ ಮದುವೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈಗ ಅಂತಿಮವಾಗಿ ಅಕ್ಷಯಾ ಎನ್ನುವ ಮಹಿಳೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಪುತ್ರ ಧನುಶ್ ಗೆ ಜಪಾನ್ ಗೆ ಹೋಗಬೇಕೆನ್ನುವುದು ಬಹುದಿನದ ಕನಸಾಗಿತ್ತು. ಹಾಗಾಗಿ ಇದನ್ನು ನನಸಾಗಿಸುವ ಸಲುವಾಗಿ ಅಲ್ಲಿ ವಿವಾಹಕೂಟವನ್ನು ಏರ್ಪಡಿಸಿದ್ದಾರೆ.ಈ ಮದುವೆಯಲ್ಲಿ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರಾದ ಕಾರ್ತಿ, ಶರತ್ ಕುಮಾರ್, ರಾಧಿಕಾ, ಮೀನಾ, ಖುಷ್ಬು, ಸುಹಾಸಿನಿ, ಕಲಾ ಮಾಸ್ಟರ್ ಸೇರಿದಂತೆ ಹಲವಾರು ಸಿನಿ ಜಗತ್ತಿನಗಣ್ಯರು ಪಾಲ್ಗೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.