ಧನುಷ್, ವಿಶಾಲ್ ಸೇರಿ ಈ ನಟರು ಸಿನಿರಂಗದಿಂದ ಬ್ಯಾನ್.!
Tamil Heros Banned : ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ನಾಲ್ವರು ಖ್ಯಾತ ನಟರನ್ನು ಬ್ಯಾನ್ ಮಾಡಿದೆ. ಇದು ಸಿನಿಪ್ರಿಯರಿಗೆ ಶಾಕ್ ನೀಡಿದೆ.
Tamil Heros received Red Card: ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ, ಚೆನ್ನೈ ಉದ್ಯಮದ ನಾಲ್ಕು ಪ್ರಮುಖ ನಟರಿಗೆ ರೆಡ್ ಕಾರ್ಡ್ ನೀಡಿದೆ. ಧನುಷ್, ಸಿಂಬು, ವಿಶಾಲ್ ಮತ್ತು ಅಥರ್ವ ಅವರಿಗೆ ರೆಡ್ ಕಾರ್ಡ್ ನೀಡಿದೆ. ರೆಡ್ ಕಾರ್ಡ್ ಅಂದ್ರೆ ಯಾವ ನಿರ್ಮಾಪಕರು ಸಹ ಈ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವಂತಿಲ್ಲ.
ವರದಿಗಳ ಪ್ರಕಾರ, ನಿನ್ನೆ ನಡೆದ ಸದಸ್ಯರ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಡೀ ತಮಿಳು ಚಿತ್ರರಂಗಕ್ಕೆ ಈ ಸುದ್ದಿ ಆಘಾತ ತಂದಿದೆ. ಜೂನ್ 2023 ರಲ್ಲಿ, ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಸಿಂಬು, ವಿಶಾಲ್, ಎಸ್‌ಜೆ ಸೂರ್ಯ, ಅಥರ್ವ ಮತ್ತು ಯೋಗಿ ಬಾಬು ಅವರಂತಹ ನಟರಿಗೆ ಎಚ್ಚರಿಕೆ ನೀಡಿತು ಎಂದು ವರದಿಯಾಗಿದೆ.
ಇದನ್ನೂ ಓದಿ: ಶೋಭಿತಾ ಫೋಟೋಸ್: ಒಂದಿಂಚೂ ಬಟ್ಟೆ ಇಲ್ಲ.. ಬಾತ್ ಟವೆಲ್‌ನಿಂದ ಮೈಮುಚ್ಚಿಕೊಂಡ ಮೋಹನಾಂಗಿ!
ಅವರೆಲ್ಲರೂ ತಮಿಳು ಚಿತ್ರರಂಗದ ಜನಪ್ರಿಯ ನಟರು. ರೆಡ್ ಕಾರ್ಡ್ ಎಂದರೆ ಮುಂದಿನ ಸೂಚನೆ ಬರುವವರೆಗೂ ಅವರು ಕಾಲಿವುಡ್‌ನ ಯಾವುದೇ ನಿರ್ಮಾಪಕರ ಜೊತೆ ಕೆಲಸ ಮಾಡುವಂತಿಲ್ಲ. ಇದಕ್ಕೆ ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಾಲ್ವರು ನಟರು ಯಾವುದೇ ಹೊಸ ಚಲನಚಿತ್ರವನ್ನು ಕೈಗೆತ್ತಿಕೊಳ್ಳುವ ಮೊದಲು ನಿರ್ಮಾಪಕರೊಂದಿಗೆ ತಮ್ಮ ಸಮಸ್ಯೆಗಳನ್ನು/ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ರೆಡ್ ಕಾರ್ಡ್ ಅನ್ನು ಅತ್ಯಂತ ಗಂಭೀರ ಸಮಸ್ಯೆಯಾಗಿ ನೋಡಲಾಗುತ್ತದೆ.
ಈ ಬಗ್ಗೆ ನಾಲ್ವರು ತಾರೆಯರು ಯಾವುದೇ ಹೇಳಿಕೆ ನೀಡಿಲ್ಲ. ವಿಶಾಲ್ ರೆಡ್ಡಿ ಅವರ ಚಿತ್ರ ಮಾರ್ಕ್ ಆಂಟನಿ ಬಿಡುಗಡೆಗೆ ಅಣಿಯಾಗಿದೆ. ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಕೂಡ ಸ್ವಲ್ಪ ಸಮಯದ ನಂತರ ತೆರೆಗೆ ಬರಲು ಸಿದ್ಧವಾಗಿದೆ.
ಇದನ್ನೂ ಓದಿ: ಸೈಮಾ 2023 ರ ಅತ್ಯುತ್ತಮ ಕನ್ನಡ ನಟ ಇವರೇ, ಇಲ್ಲಿದೆ ವಿಜೇತರ ಕಂಪ್ಲೀಟ್ ಲಿಸ್ಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.