Captain Miller teaser : ಇಂದು ಸೂಪರ್‌ಸ್ಟಾರ್ ಧನುಷ್ ಅವರ 40ನೇ ಹುಟ್ಟು ಹಬ್ಬ. ಈ ಪ್ರಯುಕ್ತ ʼಕ್ಯಾಪ್ಟನ್ ಮಿಲ್ಲರ್ʼ ಟೀಸರ್‌ ಬಿಡುಗಡೆ ಮಾಡಲಾಗಿದೆ. ಅದ್ಭುತ ಕಥೆ, ಆ್ಯಕ್ಷನ್ ಪ್ಯಾಕ್ಡ್‌ ಟೀಸರ್‌ ನೋಡಿದ್ರೆ ಪುಷ್ಪ, ಕೆಜಿಎಫ್, ಪಠಾಣ್ ದಾಖಲೆ ಮುರಿಯುವಂತಹ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.. ಧನುಷ್ ಶಿವಣ್ಣ ಲುಕ್‌ ಚಿತ್ರದ ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ.


COMMERCIAL BREAK
SCROLL TO CONTINUE READING

ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಸ್ವಾತಂತ್ರ್ಯದ ಹಿಂದಿನ ಕಥೆಯನ್ನು ತೋರಿಸುತ್ತದೆ. ಕ್ಯಾಪ್ಟನ್ ಮಿಲ್ಲರ್ 1.33 ಸೆಕೆಂಡ್‌ಗಳ ಟೀಸರ್ ನೋಡಲು ಅದ್ಭುತವಾಗಿದೆ. ಟೀಸರ್‌ ನೋಡಿದ್ರೆ ಸಿನಿಮಾ ನೋಡಲೇಬೇಕು ಎನ್ನುವ ಕುತೂಹಲ ಹಿಮ್ಮಡಿಗೊಳಿಸುತ್ತಿದೆ.


ನಟಿಯ ಬೆತ್ತಲೆ ವಿಡಿಯೋ ಶೇರ್ ಮಾಡಿ ಬರ್ತ್ ಡೇ ವಿಶ್ ಮಾಡಿದ ನಟ ರಯಾನ್ ರೆನಾಲ್ಡ್ಸ್..!


ಟೀಸರ್‌ನಲ್ಲಿ ಆರಂಭದಲ್ಲಿ ಧನುಷ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಗಿದೆ. ನಂತರ ಕೆಲವು ವಾಂಟೆಡ್ ಪೋಸ್ಟರ್‌ಗಳು ಕಂಡುಬರುತ್ತವೆ. ಇದರ ನಂತರ, ಧನುಷ್ ಎಂಟ್ರಿ, ಕೈಯಲ್ಲಿ ಗನ್, ಉದ್ದನೆಯ ಕೂದಲು ನೋಡೋಕೆ ಹಂಟರ್‌ ತರ ಕಾಣುತ್ತಾರೆ. ಧನುಷ್ ಕೈಯಲ್ಲಿ ಕೊಡಲಿ ಹಿಡಿದು ಆಕ್ಷನ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


ಇನ್ನು ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರು ಸಹ ಕಾಣಿಸಿಕೊಂಡಿದ್ದಾರೆ. ಕುದುರೆ ಏರಿ ಎಂಟ್ರಿ ಕೊಡುವ ಶಿವಣ್ಣ ಲುಕ್‌ ಸಖತ್ತಾಗಿದೆ. ಅಲ್ಲದೆ, ಟೀಸರ್‌ ಕೊನೆಯಲ್ಲಿ ಧನುಷ್ಯ ಹತ್ತಿರ ಶಿವಣ್ಣ ಇರುವ ಫೋಟೋ ಇರುತ್ತದೆ. ಈ ದೃಶ್ಯ ಬಹಳ ಕುತೂಹಲಕಾರಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.