Kubera Rashmika mandanna first look : ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಟಾಪ್ ಹೀರೋಯಿನ್. ಬೇರೆ ಯಾವ ಸ್ಟಾರ್ ಹೀರೋಯಿನ್‌ಗೂ ಸಿಗದಂತಹ ಅವಕಾಶಗಳು ಈ ಸುಂದರಿಯನ್ನು ಹುಡುಕಿಕೊಂಡು ಬರುತ್ತಿವೆ.. ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳ ಮೊದಲ ಆಯ್ಕೆಯಾಗಿ ರಶ್ಮಿಕಾ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿಕೊಂಡಿದ್ದಾರೆ. ಸದ್ಯ ಚೆಲುವೆಯ ಕೈಯಲ್ಲಿ ಐದಾರು ಸಿನಿಮಾಗಳಿವೆ. ಅದರಲ್ಲಿ ಧನುಷ್‌ ನಟನೆಯ ಒಬ್ಬರು ಕುಬೇರ ಒಂದು ಸಿನಿಮಾ. 


COMMERCIAL BREAK
SCROLL TO CONTINUE READING

ನಿರ್ದೇಶಕ ಶೇಖರ್ ಕಮ್ಮುಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ಮೊದಲ ಬಾರಿಗೆ ಕಿರಿಕ್‌ ಬೆಡಗಿ ಧನುಷ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಧನುಷ್ ಮತ್ತು ನಾಗಾರ್ಜುನ ಅವರ ಫಸ್ಟ್ ಲುಕ್ ಹೊರಬಿದ್ದಿದೆ. ಇದೀಗ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ರಿಲೀಸ್‌ ಆಗಿದೆ..


ಇದನ್ನೂ ಓದಿ:ಯಶ್‌ ಫ್ಯಾನ್‌ಗೆ ಗುಡ್‌ ನ್ಯೂಸ್‌..! 'ಕೆಜಿಎಫ್-3' ಬಗ್ಗೆ ಪ್ರಶಾಂತ್ ನೀಲ್ ನೀಡಿದ್ರು ಬಿಗ್‌ ಅಪ್‌ಡೇಟ್‌...


ಕುಬೇರ ಗ್ಲಿಂಪ್ಸ್ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ದಟ್ಟ ಕಾಡಿನಲ್ಲಿ ಇರುವುದನ್ನು ಕಾಣಬಹುದು. ನೆಲ ಅಗೆದು ದೊಡ್ಡ ಸೂಟ್ಕೇಸ್ ತುಂಬಾ ತಂದಿದ್ದ ಹಣವನ್ನು ಆ ಗುಂಡಿಯಲ್ಲಿ ಮುಚ್ಚಿಡುವ ದೃಶ್ಯವನ್ನು ಟೀಸರ್‌ನಲ್ಲಿ ಕಾಣಬಹುದು.. ರಶ್ಮಿಕಾ ಪಾತ್ರ ಪರಿಚಯದ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..


ಆರ್ಥಿಕ ಸಂಕಷ್ಟದಲ್ಲಿ ಮಿಲ್ಕಿ ಬ್ಯೂಟಿ..! ಅದಕ್ಕಾಗಿ ತಮನ್ನಾ ಮಾಡಿದ್ದೇನು ಗೊತ್ತೆ..? ಫ್ಯಾನ್ಸ್‌ ಶಾಕ್‌


ಈ ಸಿನಿಮಾದಲ್ಲಿ ಪೌರಾಣಿಕ ಅಂಶಗಳೂ ಇವೆ ಎನ್ನಲಾಗಿದೆ. ಸಧ್ಯ ಈ ಹೈ-ಬಜೆಟ್ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಬ್ಯಾನರ್‌ನಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕುರ್ ರಾಮ್ ಮೋಹನ್ ರಾವ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.