M S Dhoni : ಕ್ರಿಕೆಟರ್‌ ಎಂ.ಎಸ್.‌ ಧೋನಿ ಅವರಿಗೆ ಚಿತ್ರರಂಗದ ಮೇಲೆ ಆಸಕ್ತಿ ಇದೆ. ಇದೀಗ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭ ಮಾಡುವುದರ ಮೂಲಕ ತಮಿಳು ಸಿನಿಮಾವೊಂದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ (ಜುಲೈ 11) ಚೆನ್ನೈನಲ್ಲಿ ಚಿತ್ರದ ಹಾಗೂ ಟ್ರೈಲರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು. 


COMMERCIAL BREAK
SCROLL TO CONTINUE READING

ಧೋನಿ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿಯಲ್ಲಿ, ಸಾಕ್ಷಿಸಿಂಗ್‌ ನಿರ್ಮಾಣದಲ್ಲಿ ಈ ತಮಿಳು ಸಿನಿಮಾ ಮೂಡಿಬರಲಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಹರೀಶ್‌ ಕಲ್ಯಾಣ್‌ ಹಾಗೂ ನಾಯಕಿಯಾಗಿ ಇವಾನಾ ನಟಿಸಿದ್ದು, ಈ ಚಿತ್ರದ ಟ್ರೆಲರ್‌ ಲಾಂಚ್‌ ಮಾಡಲು ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಆಗಮಿಸಿದ್ದರು. 


ಇನ್ನು ಇದೇ ಸಂದರ್ಭದಲ್ಲಿ ಹಲವಾರು ಎಂ.ಎಸ್.‌ ಧೋನಿ ಅಭಿಮಾನಿಗಳು ಅವರ ಜೊತೆ ಪೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಸಂತಸದಿಂದ ಜರುಗಿದ ಲೆಟ್ಸ್‌ ಗೆಟ್‌ ಮ್ಯಾರೀಡ್‌ ಚಿತ್ರದ ಹಾಡು ಮತ್ತು ಟ್ರೆಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಟಯನತಾರಾ ಹಾಗೂ ಪತಿ ವಿಘ್ನೇಶ ಶಿವನ್‌ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಧೋನಿ ಅವರಿಂದ ನಿರ್ದೇಶಕ ವಿಘ್ನೇಶ್‌ ತಮ್ಮ ಟೀ ಶರ್ಟ್‌ ಮೇಲೆ ಆಟೋಗ್ರಾಫ್‌ ಹಾಕಿಸಿಕೊಂಡಿದ್ದಾರೆ.


ಇದನ್ನೂ ಓದಿ-ʼನಾನಿʼ 30ನೇ ಸಿನಿಮಾಗೆ ಟೈಟಲ್ ಫಿಕ್ಸ್...! ಅಪ್ಪ-ಮಗಳ ಎಮೋಷನ್ ಜರ್ನಿಗೆ ಮೃಣಾಲ್ ನಾಯಕಿ 


ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಇದನ್ನು ವಿಘ್ನೇಶ್‌ ಶಿವನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಕೆಳಗೆ "ನನ್ನ ಹಿರೋ ಜೊತೆಗಿನ ಪೋಟೋ..ನನ್ನ ಕ್ಯಾಪ್ಟನ್‌..ನನ್ನ ರೋಲ್‌ ಮಾಡೆಲ್..!‌ ಈ ಶುದ್ದಧ ಆತ್ಮದ ಪಕ್ಕದಲ್ಲಿರುವುದು ಭಾವನಾತ್ಮಕವಾಗಿದೆ. ನಾನು ತುಂಬಾ ಪ್ರೀತಿಸುವ ವ್ಯಕ್ತಿ ಧೋನಿ..ಅವರನ್ನು ನೋಡಿದಾಗಲೆಲ್ಲ ನನ್ನ ಮುಖದಲ್ಲಿ ಮೂಡುವ ಸಂತೋಷವನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಅವರು ತಮಿಳು ಇಂಡಸ್ಟ್ರಿಯಲ್ಲಿ ಸಿನಿಮಾ ಮಾಡುತ್ತಿರುವುದು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದೆ. ಜೊತೆಗೆ ಇದು ನನಗೆ ಹೆಮ್ಮೆಯ ವಿಷಯ.. @dhoni.entertainmentನಿಂದ ಬಿಡುಗಡೆಯಾಗುವ ಎಲ್ಲ ಚಲನಚಿತ್ರಗಳನ್ನು ಥೀಯೇಟರ್‌ನಲ್ಲಿ ವಿಕೀಸುವ ಮೂಲಕ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಸಾಕ್ಷಿ ಸಿಂಗ್‌ ಧೋನಿ ಮೇಡಂ ನಿಮಗೂ ಧನ್ಯವಾದಗಳು..ನಿಮಗೆ ತಮಿಳು ಸಿನಿಮಾಗೆ ಸ್ವಾಗತ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.


ಈ ಲೆಟ್ಸ್‌ ಗೆಟ್‌ ಮ್ಯಾರೀಡ್‌ ಚಿತ್ರದಲ್ಲಿ ನಡಿಯಾ, ಯೋಗಿ ಬಾಬು, ಆರ್‌ಜೆ ಮಿರ್ಚಿ ವಿಜಯ್‌ ನಟಿಸಿದ್ದು, ಸದ್ಯ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. 


ಇದನ್ನೂ ಓದಿ-ʼಖುಷಿʼ ಸಿನಿಮಾದ ಎರಡನೇ ಹಾಡು ರಿಲೀಸ್..! ವಿಜಯ್-ಸಮಂತಾ ಜೋಡಿಯ ಪ್ರೇಮಗೀತೆ ಹೇಗಿದೆ..?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.