ನಿಖಿಲ್ ಕುಮಾರಸ್ವಾಮಿ - ಧ್ರುವ ಸರ್ಜಾ ಭೇಟಿಗೆ ಕಾರಣವೇನು?
Nikhil Kumaraswamy Dhruva Sarja : ನಿಖಿಲ್ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಡದೇ ಇದ್ದರೂ ಎಂಪಿ ಚುನಾವಣೆಗೆ ಬೇಕಿರೋ ಸದೃಢವಾದ ವೇದಿಕೆಯನ್ನ ಪಕ್ಷದ ಪರವಾಗಿ ತಾವೇ ಸಜ್ಜು ಮಾಡಬೇಕಿದೆ.
Dhruva Sarja Nikhil Kumaraswamy : ನಿಖಿಲ್ ಕುಮಾರಸ್ವಾಮಿ ಸದ್ಯ ಸಖತ್ ಬ್ಯುಸಿ ಆಗಿದ್ದಾರೆ. ಅತ್ತ ರಾಜಕೀಯ ವಿಚಾರದಲ್ಲಿ ಓಡಾಟ, ಗಣ್ಯರ ಭೇಟಿ, ದೆಹಲಿ ಪ್ರವಾಸ ಹೀಗೆ ಒಂದಲ್ಲ ಒಂದು ಕೆಲಸ ಆಗಿದ್ರೆ, ಮತ್ತೊಂದು ಕಡೆ ಈಗಾಗಲೇ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡಿರೋ ಸಿನಿಮಾ ಕಂಪ್ಲೀಟ್ ಮಾಡಬೇಕಿದೆ. ನಿಖಿಲ್ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಡದೇ ಇದ್ದರೂ ಎಂಪಿ ಚುನಾವಣೆಗೆ ಬೇಕಿರೋ ಸದೃಢವಾದ ವೇದಿಕೆಯನ್ನ ಪಕ್ಷದ ಪರವಾಗಿ ತಾವೇ ಸಜ್ಜು ಮಾಡಬೇಕಿದೆ. ಹಾಗಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಫುಲ್ ಬ್ಯುಸಿ ಆಗಿದ್ದಾರೆ .
ಇದನ್ನೂ ಓದಿ : ರಜನಿ ನಟನೆಯೆ ಬಹುನಿರೀಕ್ಷಿತ ಚಿತ್ರ ʼಲಾಲ್ ಸಲಾಮ್ʼ ರಿಲೀಸ್ ಡೇಟ್ ಫಿಕ್ಸ್..! ಯಾವಾಗ..?
ಸದ್ಯ ಲೈಕಾ ಸಂಸ್ಥೆ ನಿರ್ಮಾಣದ, ಲಕ್ಷ್ಮಣ್ ನಿರ್ದೇಶನದ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದು ಚಿತ್ರದ ಸೆಕೆಂಡ್ ಶೆಡ್ಯೂಲ್ ಸ್ಟಾರ್ಟ್ ಆಗಿದೆ. ಐದು ತಿಂಗಳಲ್ಲಿ ಸಿನಿಮಾ ಕಂಪ್ಲೀಟ್ ಮಾಡಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿರುವ ಟೀಂ ಬಿರುಸಿನಲ್ಲಿ ಶೂಟಿಂಗ್ ಮಾಡುತ್ತಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.
ನಿಖಿಲ್ ಹಾಗೂ ಧ್ರುವ ಸರ್ಜಾ ಒಟ್ಟಿಗೆ ಕಾಣಿಸಿಕೊಂಡಿದ್ದು ತೀರ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಬಗ್ಗೆ ಹಾಗೂ ಧ್ರುವ ಅವರ ಮಾರ್ಟಿನ್ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ. ಇದಷ್ಟೇ ಅಲ್ಲದೇ ಇಬ್ಬರೂ ಒಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದಾರೆ. ಅಪರೂಪಕ್ಕೆ ಸೆಟ್ ಗೆ ಬಂದ ಧ್ರುವ ಅವರನ್ನು ಕಂಡು ನಿಖಿಲ್ ಕೂಡ ಸರ್ಪ್ರೈಸ್ ಆಗಿದ್ದು ಅಪರೂಪದ ಗೆಳೆಯನನ್ನ ಪ್ರೀತಿಯಿಂದ ಬರಮಾಡಿಕೊಂಡು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಒಟ್ಟಾರೆ ಈ ಇಬ್ಬರು ಸ್ಟಾರ್ ನಟರ ಭೇಟಿ ಅಭಿಮಾನಿಗಳಿಗೆ ಖುಷಿ ಕೊಡುವುದರ ಜೊತೆಗೆ ಕುತೂಹಲವನ್ನೂ ಹುಟ್ಟುಹಾಕಿದೆ.
ಇದನ್ನೂ ಓದಿ : ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ ಡಿಸಿಪಿ ಹೇಳಿದ್ದೇನು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.