Dhruva Sarja Welcome baby boy : ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ತಮ್ಮ ಎರಡನೇ ಮಗುವನ್ನು ಗಣೇಶ ಚತುರ್ಥಿಯ ದಿನದಂದು ಸ್ವಾಗತಿಸಿದ್ದಾರೆ. ಗಂಡು ಮಗುವಿಗೆ ಪ್ರೇರಣಾ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಒಳ್ಳೆಯ ಸುದ್ದಿಯಿಂದ ಸಂತಸಗೊಂಡಿದ್ದಾರೆ. ವರಮಹಾಲಕ್ಷ್ಮಿ ಪೂಜೆಯ ಶುಭ ಸಂದರ್ಭದಲ್ಲಿ ವಿಡಿಯೋದೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಎಲ್ಲರಿಗೂ ತಿಳಿಸಿದ್ದರು.


COMMERCIAL BREAK
SCROLL TO CONTINUE READING

ಗಂಡು ಮಗುವಿನ ಆಗಮನದಿಂದ ಸರ್ಜಾ ಕುಟುಂದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಮಗು ಜನಿಸಿರುವುದು ತುಂಬಾ ವಿಶೇಷವಾಗಿದೆ. ಧ್ರುವ ಸರ್ಜಾ ಮಗನನ್ನು ನೋಡಲು ಮೇಘನಾ ರಾಜ್ ಮತ್ತು ಸುಂದರ್​ ರಾಜ್​, ಪ್ರಮೀಳಾ ಜೋಶಾಯ್​ ಆಗಮಿಸಿದ್ದರು.


ಇದನ್ನೂ ಓದಿ: 49 ರಲ್ಲೂ 20ರ ಕಾಂತಿ..! ಮಲೈಕಾ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ..


ಈ ವೇಳೆ ಮಾತನಾಡಿದ ಸುಂದರ್​ ರಾಜ್, ಗೌರಿ ಈಗಾಗಲೇ ಮನೆಗೆ ಬಂದಿದ್ದಳು. ಈಗ ಗಣೇಶ ಬಂದ. ಈ ಮಗು ಗಜಕೇಸರಿ ಯೋಗದಲ್ಲಿ ಜನಿಸಿದೆ. ಇದರಿಂದ ಕುಟುಂಬದಲ್ಲಿ ಸಂತಸ ಮೂಡಿದೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.


ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಬಾಲ್ಯದ ಸ್ನೇಹಿತರು. ಈ ಸ್ನೇಹ ಬಳಿಕ ದಾಂಪತ್ಯವಾಗಿ ಬದಲಾಯಿತು. ಡಿಸೆಂಬರ್ 9, 2018 ರಂದು ನಿಶ್ಚಿತಾರ್ಥ ಮಾಡಿಕೊಂಡ ಧ್ರುವ - ಪ್ರೇರಣಾ, ನವೆಂಬರ್ 2019 ರಲ್ಲಿ ಸಪ್ತಪದಿ ತುಳಿದರು. ಇಬ್ಬರೂ ತಮ್ಮ ಮೊದಲ ಮಗಳನ್ನು ಅಕ್ಟೋಬರ್ 2022 ರಲ್ಲಿ ಸ್ವಾಗತಿಸಿದರು.


ಧ್ರುವ ಸರ್ಜಾ ಮುಂದಿನ ಸಿನಿಮಾ 'ಮಾರ್ಟಿನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಎಪಿ ಅರ್ಜುನ್ ಅವರು ಹೆಲ್ಮ್ ಮಾಡಿದ್ದಾರೆ, ಆದರೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಚಿತ್ರದ ಬಜೆಟ್ ಸುಮಾರು 3.5 ಕೋಟಿ ರೂಪಾಯಿಗಳಾಗಿದ್ದು, ಅಕ್ಟೋಬರ್ 10 ರ ವೇಳೆಗೆ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.


ಇದನ್ನೂ ಓದಿ: ಪರಿಸರ ಸ್ನೇಹಿ ಗಣಪತಿ ತಯಾರಿಸಿದ ಅಲ್ಲು ಅರ್ಜುನ್ ಮಗಳು 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.