ಬೆಂಗಳೂರು: ‘ಪೊಗರು’ ಸಿನಿಮಾ ಮೂಲಕ ಸದ್ದು ಮಾಡಿದ್ದ ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಸಖತ್ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರದ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ನಟನ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ DS5 ಎಂದು ಶೀರ್ಷಿಕೆ ಇಡಲಾಗಿದೆ.  ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ನಿರ್ಮಾಪಕ ಉದಯ್ ಮೆಹ್ತಾ DS 5 ಹೆಸರಿನ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇನ್ನುಳಿದಂತೆ ಈ ಚಿತ್ರದ ಅಪ್‌ಡೇಟ್ ಸಿಕ್ಕಿರಲಿಲ್ಲ. ಆದರೆ ಇದೇ ಧ್ರುವ ಅವರ 5ನೇ ಸಿನಿಮಾ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಪ್ರಸ್ತತ ಪ್ರಿಪ್ರೊಡಕ್ಷನ್ ಹಂತದಲ್ಲಿರುವ DS5 ಚಿತ್ರದ ಶೀರ್ಷಿಕೆಯನ್ನು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಹಿರಂಗಪಡಿಸಲು ನಿರ್ಧರಿಸಿದೆ. ಸುಮಾರು 8 ವರ್ಷಗಳ ನಂತರ ‘ಅದ್ಧೂರಿ’ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ. ಈ ಚಿತ್ರಕ್ಕೆ ಎಪಿ ಅರ್ಜುನ್(AP Arjun) ಆಕ್ಷನ್ ಕಟ್ ಹೇಳಲಿದ್ದಾರೆ. ನಿರ್ಮಾಪಕ ಉದಯ್ ಮೆಹ್ತಾ ಬಂಡವಾಳ ಹೂಡಲಿದ್ದಾರೆ.  


ಇದನ್ನೂ ಓದಿ: Honey Singh : ಬಾಲಿವುಡ್ ಸಿಂಗರ್ ಹನಿ ಸಿಂಗ್‌ಗೆ 'ದೆಹಲಿ ಕೋರ್ಟ್ ನಿಂದ ನೋಟಿಸ್'!


ಅದ್ಧೂರಿ(Addhuri) ಸೂಪರ್ ಹಿಟ್ ಆದ ಬಳಿಕ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ(Dhruva Sarja) ಮತ್ತೆ ಒಟ್ಟಾಗುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಸುತ್ತ ಸಾಕಷ್ಟು ಕುತೂಹಲ ಮೂಡಿದೆ. ಅಭಿಮಾನಿಗಳು ಕೂಡ ಧ್ರುವ ಅವರ ಮುಂದಿನ ಸಿನಿಮಾ ವೀಕ್ಷಿಸಲು ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಆಷಾಢ ಮಾಸಕ್ಕೂ ಮುನ್ನ ಚಿತ್ರದ ಕೆಲಸ ಆರಂಭಿಸಲು ಚಿತ್ರತಂಡ ನಿರ್ಧರಿಸಿತ್ತು. ಹೀಗಾಗಿ ಜುಲೈ ಮೊದಲ ವಾರದಲ್ಲಿಯೇ ಚಿತ್ರದ ಸ್ಕ್ರಿಪ್ಟ್ ಗೆ ಪೂಜೆಯನ್ನು ನೆರವೇರಿಸಲಾಗಿತ್ತು. ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಅವರ ಮುಂದಿನ ಚಿತ್ರದ ಅಪ್‌ಡೇಟ್ ಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.    


‘ಇದೊಂದು ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾವಾಗಿದೆ. ಬಹುವರ್ಷಗಳ ಬಳಿಕ ಒಂದಾಗುತ್ತಿರುವ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಅವರಿಂದ ಅಭಿಮಾನಿಗಳು ಏನನ್ನು ನಿರೀಕ್ಷಿಸುತ್ತಾರೋ ಅದನ್ನು ನೀಡಲು ಚಿತ್ರತಂಡ ಸಜ್ಜಾಗಿದೆ. ನಿರ್ದೇಶಕ ಅರ್ಜುನ್ ಅವರು ಈಗಾಗಲೇ ವಿರಾಟ್ ಮತ್ತು ಸಂಜನಾ ಆನಂದ್ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ ‘ಅದ್ದೂರಿ ಲವರ್’(Dhruva Sarja) ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.


ಇದನ್ನೂ ಓದಿ: Viral Video: ಬೀದಿ ನಾಯಿಗಳ ಜೊತೆ ಫ್ರೆಂಡ್​ಶಿಪ್​ ಡೇ ಆಚರಿಸಿದ ನಟಿ..!


ಧ್ರುವ ಸರ್ಜಾ(Dhruva Sarja ) ಈಗಾಗಲೇ 4 ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಎಂಟರ್‌ಟೈನರ್‌ಗಳಾದ ಅದ್ಧೂರಿ, ಬಹದ್ದೂರ್, ಭರ್ಜರಿ ಮತ್ತು ಪೊಗರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸಿನಿಮಾ ಮಾಡಲು ಅವರು ತೆಗೆದುಕೊಳ್ಳುವ ಸಮಯ ಮತ್ತು ತಾಳ್ಮೆ ಮೆಚ್ಚುವಂತಹದ್ದು. ಹೀಗಾಗಿಯೇ ಅವರ ಪ್ರತಿ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಶೀಘ್ರವೇ ಚಿತ್ರತಂಡ ಶೀರ್ಷಿಕೆ ಬಹಿರಂಗಪಡಿಸಲಿದೆ ಮತ್ತು ಚಿತ್ರದ ಬಗೆಗಿನ ಹೆಚ್ಚಿನ ವಿವರಗಳನ್ನು ಅಭಿಮಾನಿಗಳಿಗೆ ತಿಳಿಸಲಿದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ