Martin trailer 1: ಧ್ರುವ ಸರಾಜಾ ಅಭಿನಾಯದ ಮಾರ್ಟಿನ್‌ ಚಿತ್ರ ಅನೌಂನ್ಸ್‌ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸುದೀರ್ಘ ಕಾಯುವಿಕೆಯ ನಂತರ ಮಾರ್ಟಿನ್‌ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಆಗಸ್ಟ್‌ 05 ರಂದು ಚಿತ್ರತಂಡ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದು, ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಎ.ಪಿ. ಅರ್ಜುನ್‌ ನಿರ್ದೇಶನದ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಆಗಸ್ಟ್‌ 05ರಂದು ಚಿತ್ರತಂಡ ಮುಂಬೈನಲ್ಲಿ ಟ್ರೇಲರ್‌ ಲಾಂಚ್‌ ಈವೆಂಟ್‌ ಅನ್ನು ಆಯೋಜಿಸಿದ್ದು. ರಿಲೀಸ್‌ ಆಗಿರುವ ಟ್ರೇಲರ್‌ ಸದ್ಯಕ್ಕೆ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಟ್ರೇಲರ್‌ನಲ್ಲಿ ನೆಚ್ಚಿನ ನಟನ ಖದರ್‌ ಕಂಡ ಅಭಿಮಾನಿಗಳಂತೂ ಹುಚ್ಚೆದ್ದು ಸಂಭ್ರಮಿಸುತ್ತಿದ್ದಾರೆ. 


ಇದನ್ನೂ ಓದಿ: ದಪ್ಪಗಿದ್ದ ಕಾರಣಕ್ಕೆ ಈಕೆಯನ್ನು ಹೀಯಾಳಿಸಿದ ಜನರ ಬಾಯಲ್ಲಿಯೇ..ಸ್ಟಾರ್‌ ಅಂದ್ರೆ ಹೀಗಿರಬೇಕಪ್ಪಾ ಎನಿಸಿಕೊಂಡ ನಟಿ ಈಕೆ..!ಯಾರು ಗೊತ್ತಾ..?


ಅಷ್ಟಕ್ಕೂ ರಿಲೀಸ್‌ ಆಗಿರುವ ಟ್ರೇಲರ್‌ ಮೊದಲ ಭಾಗ ಇದಕ್ಕೆ ಮುಂದುವರೆದ ಭಾಗದಂತೆ ಮತ್ತೊಂದು ಟ್ರೇಲರ್‌ ಬರಲಿದೆ ಎನ್ನುವ ರೀತಿಯಲ್ಲಿ ಮೊದಲ ಟ್ರೇಲರ್‌ ಅನ್ನು ಚಿತ್ರತಂಡ ರಿಲೀಸ್‌ ಮಾಡಿದೆ. ಆಕ್ಷನ್‌ ಪ್ರಿನ್ಸ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿನ ಡೈಲಾಗ್ಸ್‌ ಹಾಗೂ ಆಕ್ಷನ್‌ ಸನ್ನಿವೇಶಗಳ ತುಣುಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಟ್ರೇಲರ್‌ನಲ್ಲಿ ಧ್ರುವ ಎಂಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.


ಟ್ರೇಲರ್‌ನ ಆರಂಭದಲ್ಲಿ ಮಾರ್ಟಿನ್(ಧ್ರುವ ಸರ್ಜ) ಅವರನ್ನು ಪಾಕಿಸ್ತಾನಿ ಸೈನಿಕಾರು ಎಳೆದು ತರುತ್ತಾರೆ. ಸೇನಾ ಅಧಿಕಾರಿ ಮಾರ್ಟಿನ್‌ನನ್ನು ನೋಡಿ ಪಾಕಿಸ್ತಾನಕ್ಕೆ ಬಂದು ಈತ ತಪ್ಪು ಮಾಡಿದ್ದಾನೆ, ಈತ ಪಾಕಿಸ್ತಾನಕ್ಕೆ ಬಂದಿರುವುದೇ ಮೊದಲಿಗೆ ದೊಡ್ಡ ಕ್ರೈಂ ಅವನನ್ನು ಮುಗಿಸಿಬಿಡಿ ಎಂದು ಸೈನಿಕರಿಗೆ ಆದೇಶ ನೀಡುತ್ತಾನೆ. ನಂತರ ಆಕ್ಷನ್‌ ಸೀನ್‌ಗೆ ಕಟ್‌ ಆಗಿ  ಮಾರ್ಟಿನ್‌ ಎದುರಾಳಿಗಳನ್ನು ನೋಡಿ ಜೋರಾಗಿ ನಗುತ್ತಾನೆ. ಈ ಸೀನ್‌ ಕಟ್‌ ಆಗಿ ಮಾರ್ಟಿನ್‌ ಗನ್‌ನೊಂದಿಗೆ ಕಾಣಿಸಿಕೊಳ್ಳುತ್ತಾನೆ, ಈ ಸಂದರ್ಭದಲ್ಲಿ ಒಂದು ಮಾಸ್‌ ಡೈಲಾಗ್‌ ಕೂಡ ಕಂಡುಬಂದಿದ್ದು. ಚಿತ್ರದ ಅಂಶಗಳನ್ನು ಅಷ್ಟೇನು ಬಿಚ್ಚಿಡದೆ ಟ್ರೇಲರ್‌ ಸಿಂಪಲ್‌ ಆಗಿ ಪೂರ್ಣ ಗೊಳ್ಳುತ್ತದೆ. ಇನ್ನೂ ಈ ಟ್ರೇಲರ್‌ ಅನ್ನು ಚಿತ್ರತಂಡ 12 ಭಾಷೆಗಳಲ್ಲಿ ರಿಲೀಸ್‌ ಮಾಡಿದೆ.


ಇದನ್ನೂ ಓದಿ: ಜನ್ಮ ಕೊಟ್ಟ ತಂದೆಯನ್ನು "ನೀನು ಸತ್ತುಹೋಗು" ಎಂದ ಸ್ಟಾರ್‌ ನಟ..ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆ
 
240 ದಿನಗಳ ಕಾಲ ಸಿನಿಮಾದ ಶೂಟಿಂಗ್‌ ನಡೆದಿದ್ದು. ಸದ್ಯ ಸುದೀರ್ಘ ಕಾಯುವಿಕೆಯ ನಂತರ ಟ್ರೇಲರ್‌ ಕಂಡು ಧ್ರುವ ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ಅಳಿಯ ಧ್ರುವ ಸರ್ಜಾರ ಮಾರ್ಟಿನ್‌ ಸಿನಿಮಾಗೆ ಅರ್ಜುನ್‌ ಸರ್ಜಾ ಚಿತ್ರಕಥೆ ಬರೆದಿದ್ದಾರೆ. ಸತ್ಯಾ ಹೆಗಡೆ ಉದಯ್ ಕೆ ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸತ್ಯಾ ಹೆಗಡೆ ಛಾಯಗ್ರಹಣ, ರವಿ ಬಸ್ರೂರು ಅವರ ಸಂಗೀತ ಈ ಚಿತ್ರಕ್ಕಿದೆ.


ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ನಿಕಿತಿನ್‌ ಧೀರ್‌, ಅನ್ವೇಶಿ ಜೈನ್‌, ಜಾರ್ಜಿಯಾ ಆಂಡ್ರಿಯಾನ, ಮಾಳವಿಕ ಅವಿನಾಶ್‌ ಸೇರಿ ದೊಡ್ಡ ತಾರಾಗಣ ಸಿನಿಮಾದಲ್ಲಿದೆ. ಅಕ್ಟೋಬರ್‌ 11ಕ್ಕೆ ಮಾರ್ಟಿನ್‌ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದ್ದು, ಸಿನಿಮಾಗೆ ರೆಸ್ಪಾನ್ಸ್‌ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.