ಜೈಲಿನಿಂದ ಹೊರ ಬರೋದಕ್ಕೆ ದರ್ಶನ್ ನಾಟಕವಾಡಿದ್ರಾ..? ವೈದ್ಯರ ರಿಪೋರ್ಟ್ ಸುಳ್ಳಾ..? ಇಲ್ಲಿದೆ ಶಾಕಿಂಗ್ ವರದಿ..
Darshan case : ನಟ ದರ್ಶನ್ ಮೆಡಿಕಲ್ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು ಬಿಟ್ರೆ ಯಾವ ಟ್ರೀಟ್ಮೆಂಟ್ ನಡೆಯುತ್ತಿದೆ ಅನ್ನೋದರ ಬಗ್ಗೆ ಎಲ್ಲೂ ಕೂಡ ಬಹಿರಂಗಪಡಿಸಿಲ್ಲ. ಹಾಗಾದ್ರೆ ಬಳ್ಳಾರಿ ಜೈಲಿನಿಂದ ಹೊರಬಂದ ಕೂಡಲೇ ಬೆನ್ನು ನೋವು ವಾಸಿಯಾಯ್ತ..?.. ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Darshan Thoogudeepa health : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ನಟ ದರ್ಶನ್ ಸಧ್ಯ ಅನಾರೋಗ್ಯದ ಕಾರಣ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಅಲ್ಲದೆ, ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೂ ಸಹ ದಾಖಲಾಗಿದ್ದಾರೆ.. ಆದರೆ.. ಇದೀಗ ಹೊಸ ವಿಚಾರವೊಂದು ಚರ್ಚೆಗೆ ಬಂದಿದೆ..
ಹೌದು.. ಜೈಲಿನಲ್ಲಿದ್ದಾಗ ಒಂದು ಬ್ಯಾಗ್ ಹಿಡಿದುಕೊಂಡು ಬರೋದಕ್ಕೂ ಕುಂಟುತ್ತಿದ್ದ ದರ್ಶನ್ ತುರ್ತಾಗಿ ಅಪರೇಷನ್ ಮಾಡ್ಸಿಲೇ ಬೇಕು ಅಂತ 6 ವಾರಗಳ ಮಧ್ಯಂತರ ಜಾಮೀನು ಪಡೆದರು.. ಅಲ್ಲದೆ, ಬೆಂಗಳೂರಿಗೆ ಬಂದು ಬಿಜಿಎಸ್ ಆಸ್ಪತ್ರೆಯನ್ನೂ ಸೇರಿದ್ರು. 48 ಗಂಟೆಗಳಲ್ಲಿ MRI, ಸಿಟಿ ಸ್ಕ್ಯಾನ್ ಬ್ಲಡ್ ರಿಪೋರ್ಟ್ ಬರುತ್ತೆ ನಂತರ ಏನ್ ಮಾಡಬೇಕು ಅಂತ ಡಿಸೈಡ್ ಮಾಡ್ತೇವೆ ಎಂದು ಹೇಳಿದ್ದ ಡಾಕ್ಟರ್ ನವೀನ್ ಇಲ್ಲಿಯವರೆಗೂ ಕೂಡ ಯಾವುದೇ ಅಪ್ಡೇಟ್ ಕೂಡ ಮಾಡಿಲ್ಲ.
ಇಷ್ಟೇ ಅಲ್ಲದೆ, ಮೊದಲ ವಾರದ ಮೆಡಿಕಲ್ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು ಬಿಟ್ರೆ ಯಾವ ಟ್ರೀಟ್ಮೆಂಟ್ ನಡೆಯುತ್ತಿದೆ ಅನ್ನೋದರ ಬಗ್ಗೆ ಎಲ್ಲೂ ಕೂಡ ಬಹಿರಂಗಪಡಿಸಿಲ್ಲ. ಹಾಗಾದ್ರೆ ಬಳ್ಳಾರಿ ಜೈಲಿನಿಂದ ಹೊರಬಂದ ಕೂಡಲೇ ದಾಸನ ಬೆನ್ನು ನೋವು ವಾಸಿಯಾಯ್ತಾ..? ಡಾಕ್ಟರ್ಗಳು ಫೇಕ್ ರಿಪೋರ್ಟ್ ಕೊಟ್ರಾ ಅನ್ನೋ ಅನುಮಾನ ಇದೀಗ ಶುರುವಾಗಿದೆ.
ಇನ್ನೂ ವರದಿ ಬಂದ ಮೇಲೆ ಫಿಸಿಯೋಥೆರಪಿಯೇ ಫೈನಲ್ ಅಲ್ಲ ಅಂತ ಹೇಳಲಾಗಿತ್ತು. ಆದಾದ ಬಳಿಕ ರೋಗಿ ಒಪ್ಪಿಗೆ ಕೊಟ್ರೆ ಅಪರೇಷನ್ ಮಾಡೋದಕ್ಕೆ ಡೇಟ್ ಫಿಕ್ಸ್ ಮಾಡ್ತೇವೆ ಎಂದು ಹೇಳಿದ್ರು. ಆದ್ರೆ ಇದುವರೆಗೂ ಯಾವುದೇ ರೀತಿಯ ಅಪರೆಷನ್ ಮಾಡ್ಸಿಲ್ಲ. ಐದು ವಾರಗಳ ಕಾಲ ಪಿಸಿಯೋಥೆರಪಿ ಮಾಡಿ ಕೊನೆ ವಾರದಲ್ಲಿ ಅಪರೇಷನ್ ಮಾಡಿಸಿ ಇನ್ನೂ ಮೂರ್ನಾಲ್ಕು ತಿಂಗಳು ವಿಶ್ರಾಂತಿ ಬೇಕಾಗಿದೆ ಎಂದು ರಿಪೋರ್ಟ್ ನೀಡಿ ಮತ್ತೆ ಮಧ್ಯಂತರ ಜಾಮೀನು ಅವದಿಯನ್ನು ವಿಸ್ತರಣೆ ಮಾಡೋ ಪ್ಲಾನ್ ಮಾಡಿದ್ದಾರೆ ಅನ್ನೋದು ಮೂಲಗಳಿಂದ ಬಂದ ಮಾಹಿತಿ.
ಇದನ್ನೂ ಓದಿ:ಎನ್ ಗುರು ಈ ನಟಿಗೆ ವಯಸ್ಸೇ ಆಗಲ್ವಾ..! 39ರಲ್ಲೂ 18ರಂತೆ ಕಾಣ್ತಾಳೆ.. ಫೊಟೋಸ್ ನೋಡಿ..
ಒಟ್ಟಾರೆಯಾಗಿ.. ಮಧ್ಯಂತರ ಬೇಲ್ ಮೇಲೆ ಹೊರ ಬಂದಿರುವ ದರ್ಶನ್ ರೆಗ್ಯೂಲರ್ ಬೇಲ್ಗೆ ಅರ್ಜಿ ಹಾಕಿದ್ದು ಒಂದು ವೇಳೆ ಅದು ರಿಜೆಕ್ಟ್ ಆದ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕು.. ಅಲ್ಲಿಯವರೆಗೂ ಕೂಡ ಕಾಯಬೇಕಾಗುತ್ತದೆ. ಇದರ ಮಧ್ಯ ಮಧ್ಯಂತರ ಬೇಲ್ ಅವಧಿ ಮುಗಿದ ಕೂಡಲೇ ಬಳ್ಳಾರಿ ಜೈಲಿಗೆ ಹೋಗಲೇಬೇಕು.
ಇದೆಲ್ಲವನ್ನ ನೋಡಿದ್ರೆ.. ಜೈಲಿಗೆ ಹೋಗುವುದನ್ನು ತಪ್ಪಿಸಲು ದರ್ಶನ್, ಕುಟುಂಬಸ್ಥರು ಹಾಗೂ ಡಾಕ್ಟರ್ಸ್ ಕೊಟ್ಟ ಸ್ಕ್ರಿಪ್ಟ್ ನಲ್ಲಿ ಆಕ್ಟ್ ಮಾಡ್ತಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ.. ಮುಂದೆ ಈ ವಿಚಾರದಲ್ಲಿ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾಯ್ದು ನೋಡಬೇಕಿದೆ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ