ತನಿಖೆಯಲ್ಲಿ ರೋಚಕ ಟ್ವಿಸ್ಟ್ .. ಕೊಲೆ ಕೇಸ್ನಿಂದ ಬಚಾವಾಗಲು ಹಣ ನೀಡಿದ್ದಾರಾ ದರ್ಶನ್ & ʻಡಿʼ ಗ್ಯಾಂಗ್?!
Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಯಲ್ಲಿ ರೋಚಕ ಟ್ವಿಸ್ಟ್ ಗಳು ಸಿಗುತ್ತಿವೆ. ದರ್ಶನ್ & ಗ್ಯಾಂಗ್ ವಿರುದ್ಧ ಹಲವಾರು ಸಾಕ್ಷಿಗಳು ಬಯಲಾಗುತ್ತಿದ್ದು, ಕೊಲೆ ಕೇಸ್ ಮುಚ್ಚಿಹಾಕಲು ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.
Darshan Arrest Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ರೇಣುಕಾಸ್ವಾಮಿ ಕೊಲೆಯನ್ನು ನಾವೇ ಮಾಡಿದ್ದೇವೆ ಎಂದು ಶರಣಾಗಿದ್ದ ಆರೋಪಿಗಳು ಹಲ್ಲೆ ಹಾಗೂ ಅಪಹರಣ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ ಎಂಬುದು ಗೊತ್ತಾಗಿದೆ. ಕೊಲೆ ಬಳಿಕ ದರ್ಶನ್ ಅಂಡ್ ಗ್ಯಾಂಗ್ ಅವರನ್ನ ಕರೆಸಿ ಹಣದ ಆಮಿಷ ಹಾಗೂ ದರ್ಶನ್‌ಗಾಗಿ ಕೃತ್ಯವನ್ನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಅಥವಾ ಅಪಹರಣ ಮಾಡುವಾಗ ನಿಖಿಲ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಅವರ ಪಾತ್ರವೇ ಇರಲಿಲ್ಲ. ಅಲ್ಲದೇ ಶೆಡ್ ಒಳಗೆ ಹಾಗೂ ಒಳಗೆ ಆರೋಪಿಗಳು ಇರಲಿಲ್ಲ. ಕೊಲೆಯಾದ ಆತಂಕದಲ್ಲಿದ್ದ ದರ್ಶನ್ ಗ್ಯಾಂಗ್, ರೇಣುಕಾಸ್ವಾಮಿಯನ್ನ ಕಾರಿನಲ್ಲಿ ನಗರಕ್ಕೆ ಕರೆತಂದಿದ್ದ ಜಗದೀಶ್, ರವಿ, ಅನುಕುಮಾರ್‌ನನ್ನ ಕೊಲೆ ಕೃತ್ಯವನ್ನ ಒಪ್ಪಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಇದನ್ನು ಒಪ್ಪಿಕೊಳ್ಳದೆ ಅವರು ಚಿತ್ರದುರ್ಗಕ್ಕೆ ತೆರಳಿದ್ದರು. ಅನಂತರ ಕಾರ್ತಿಕ್ ಅಂಡ್ ಟೀಮ್‌ನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡು 30 ಲಕ್ಷಕ್ಕೆ ಡೀಲ್ ಮಾಡಿ ಪುನೀತ್ ಎಂಬಾತನ ಸ್ಕಾಪಿರ್ಯೋ ಕಾರಿನಲ್ಲಿ ಶವ ಸಾಗಿಸಿ ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ಶರಣಾಗಿದ್ದರು.
ಇನ್ನೂ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಪ್ರಕರಣದಲ್ಲಿ 17 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ನಾವು ಮಾಡುತ್ತೇವೆ ಹಾಗೂ ಯಾವ ಒತ್ತಡಕ್ಕೂ ಮಣಿಯುವದಿಲ್ಲ ಎಂದರು.
ಇದನ್ನೂ ಓದಿ-ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ್ರೆ ನಟ ದರ್ಶನ್’ಗೆ ಸಿಗುತ್ತೆ ಈ ಕಠಿಣ ಶಿಕ್ಷೆ!!
ರೇಣುಕಾಸ್ವಾಮಿ ಕೊಲೆ ಪ್ರಕರಣ ದ ಆರೋಪಿಗಳಿಗೆ ವಿಚಾರಣೆ ಮುಂದುವರೆದಿದೆ. ಆರ್ ಆರ್ ನಗರದಲ್ಲಿ ರುವ ನಟ ದರ್ಶನ್ ಮನೆಗೆ ಇಂದು ಧನರಾಜ್ ತೆರಳಲಿದ್ದು, ನಂದಿಶ್, ಪವನ್ ಕರೆದುಕೊಂಡು ಹೋಗಿ ಸ್ಪಾಟ್ ಮಹಜರು ಮಾಡಲಾಗಿದೆ. ಕೃತ್ಯ ನಡೆದ ಸಂದರ್ಭದಲ್ಲಿ ಆರೋಪಿಗಳು ಓಡಿಸಿದ್ದ ಮೂರು ಬೈಕ್‌ಗಳನ್ನ ಸೀಜ್ ಮಾಡಿಕೊಂಡು ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಬರಲಾಗಿದೆ. ಇದ್ರಲ್ಲಿ Honda activa KA02 EL 8538 ಮರಿಯಪ್ಪ ಸಿ ಎಂಬುವವರ ಹೆಸರಿನಲ್ಲಿ, TVs Jupiter ರಾಮ ಕೃಷ್ಣ ಎಂಬುವವರ ಹೆಸರಿನಲ್ಲಿ ಹಾಗೂ Honda shine KA11 EL0268 ಆರೋಪಿ ನಂದೀಶ್ ಹೆಸರಿನಲ್ಲಿ ರಿಜಿಸ್ಟ್ರೇಷೆನ್ ಆಗಿರೋದು ಗೊತ್ತಾಗಿದೆ. ಹತ್ಯೆಗೂ ಮುಂಚೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ದರ್ಶನ್ ಜೊತೆ ನಟ ಯಶಸ್ ಸೂರ್ಯ ಕೂಡ ಇದ್ರು ಅನ್ನೋ ವಿಷಯ ತಿಳಿದ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿವರೆಗೆ 27 ಜನರ ವಿಚಾರಣೆ ನಡೆಸಲಾಗಿದ್ದು, 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. 10 ಜನರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದ್ದು, ಸಂಚು, ಕಿಡ್ನಾಪ್, ಹಲ್ಲೆ , ಕೊಲೆ ಹಾಗೂ ಸಾಕ್ಷಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ-ಅಮೃತಧಾರೆ ಸಿರೀಯಲ್ ನಟಿ ವನಿತಾ ವಾಸು ನಿಜವಾದ ಪತಿ ಯಾರು ಗೊತ್ತಾ? ಮಗ ಅಂತೂ ಹಿರೋನೆ!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.