Salar Trailer: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಇನ್ನು ಸ್ವಲ್ಪ ದಿನ ಕಾಯ್ದರೆ ಬೆಳ್ಳಿತೆರೆ ಮೇಲೆ ಪ್ರಭಾಸ್ ವಿಶ್ವರೂಪ ನೋಡಬಹುದು. ಹೌದು ಹಲವು ಬಾರಿ ಮುಂದೂಡಲ್ಪಟ್ಟಿದ್ದ ಸಲಾರ್ ಚಿತ್ರ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.  


COMMERCIAL BREAK
SCROLL TO CONTINUE READING

ಇದೀಗ ಈ ಬಹುನಿರೀಕ್ಷಿತ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಸದ್ಯ ಅಭಿಮಾನಿಗಳು ಈ ಸಿನಿಮಾಗೂ ಹಾಗೂ ಕೆಜಿಎಫ್ ಚಿತ್ರಕ್ಕೂ ಹಲವು ಲಿಂಕ್ ಗಳಿವೆ ಎನ್ನಲಾಗುತ್ತಿದೆ.. ಹಾಗಾದರೆ ಫ್ಯಾನ್ಸ್‌ ಹೀಗೆ ಹೇಳುತ್ತಿರುವುದು ಯಾಕೆ ಅಂತೀರಾ ಇಲ್ಲಿದೆ ಉತ್ತರ.. 


ಇದನ್ನೂ ಓದಿ-Animal review : ಹೇಗಿದೆ ರಣಬೀರ್‌, ರಶ್ಮಿಕಾ ʼಅನಿಮಲ್‌ʼ ಸಿನಿಮಾ..! ಬಹುನಿರೀಕ್ಷಿತ ಚಿತ್ರದ ಪಕ್ಕಾ ವಿಮರ್ಶೆ ಇಲ್ಲಿದೆ


ಕೆಜಿಎಫ್‌ನಂತೆಯೇ ಇಲ್ಲಿಯೂ ಕುರ್ಚಿಗಾಗಿ ಕುತಂತ್ರಗಳು ಮತ್ತು ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಕುರಿತಾಗಿ ಟ್ರೇಲರ್‌ನಲ್ಲಿ ಒಂದು ಡೈಲಾಗ್ ಕೂಡ ಇದೆ... ಹೀಗಾಗಿ ಕೆಜಿಎಫ್ ಚಿತ್ರಕ್ಕೂ ಸಲಾರ್‌ಗೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.. ಅಲ್ಲದೇ ಕೆಜಿಎಫ್‌ನಲ್ಲಿ, ರಾಖಿ ಭಾಯ್ ಮೊದಲು ಯಾರ ತಂಟೆಗೂ ಹೋಗುವುದಿಲ್ಲ.. ಆದರೆ ಹೋದ ನಂತರ, ಅವನು ತಡೆಯಲಾಗದ ಶಕ್ತಿಯಾಗುತ್ತಾನೆ. ಹಾಗೆಯೇ ಈ ಸಲಾರ್‌ನಲ್ಲಿಯೂ ಪ್ರಭಾಸ್ ತನ್ನ ಸ್ನೇಹಿತನಿಗಾಗಿ ಹೋರಾಡುತ್ತಾನೆ.. 


ಟ್ರೇಲರ್ ನಲ್ಲಿ ಅಡಗಿರುವ ದೊಡ್ಡ ಮ್ಯಾಟರ್ ಏನಪ್ಪಾ ಅಂದ್ರೆ.. ಅಸಲಿಗೆ ಸಲಾರ್ ಚಿತ್ರ ನಡೆದ ಸೆಟ್‌ ಎಲ್ಲಿದೆ? ಬಹುಶಃ ಇದೇ ಸಿನಿಮಾದ ದೊಡ್ಡ ಟ್ವಿಸ್ಟ್. ಟ್ರೇಲರ್‌ನಲ್ಲಿ ತೋರಿಸಿರುವ ಸೆಟ್‌ಗಳು ಕೆಜಿಎಫ್ ಚಿತ್ರವನ್ನು ನೆನಪಿಸುತ್ತವೆ. ಇನ್ನು ಪ್ರಭಾಸ್ ಗೆ ಕೊಟ್ಟಿರುವ ಎಲಿವೇಶನ್ ಚೆನ್ನಾಗಿದೆ ಆದರೆ ಡೈಲಾಗ್ ಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಕಾಮೆಂಟ್ ಗಳು ಕೇಳಿ ಬರುತ್ತಿವೆ. 


ಇದನ್ನೂ ಓದಿ-Shah Rukh Khan : ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ತಪಾಸಣೆ ನಡೆಸಿದ ಭದ್ರತಾ ಪಡೆ..! ವಿಡಿಯೋ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.