ಬೆಂಗಳೂರು : ಕನ್ನಡ ಸಿನಿಮಾ ಹಿಟ್ ಮೇಲೆ ಹಿಟ್ ಆಗ್ತಿವೆ. ಭಾರತೀಯ ಚಿತ್ರರಂಗ ಕನ್ನಡದತ್ತ ನೋಡುವಂತೆ ನಮ್ಮ ಸ್ಯಾಂಡಲ್ ವುಡ್ ಸಿನಿಮಾಗಳು  ಮೂಡಿಬರುತ್ತಿವೆ. ಸಧ್ಯ ಇದೆ ಸಾಲಿಗೆ ಡಾರ್ಲಿಂಗ್  ಕೃಷ್ಣ  ನಟನೆಯ ದಿಲ್ ಪಸಂದ್ ಸೇರುವದರಲ್ಲಿ ಡೌಟೇ ಇಲ್ಲ. 


COMMERCIAL BREAK
SCROLL TO CONTINUE READING

ಹೌದು. ನಿರ್ದೇಶಕ ಶಿವತೇಜಸ್‌ ಆಕ್ಷನ್ ಕಟ್ ಹೇಳಿರುವ ದಿಲ್ ಪಸಂದ್ ಬಿಡುಗಡೆಯಾಗಿದೆ. ಅದ್ಬುತ ಲವ್ ಸ್ಟೋರಿ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಪ್ರೇಮ ಪಾಠದ ಜೊತೆಗೆ ತಂದೆ ತಾಯಿಯ ಮೌಲ್ಯವನ್ನು ಅಚ್ಚು ಕಟ್ಟಾಗಿ ತೋರಿಸಲಾಗಿದೆ.ಸಖತ್ ಹಾಟ್ ಅವತಾರದಲ್ಲಿ ಕೃಷ್ಣನಿಗೆ ಕಾಡಿರುವ ನಿಶ್ವಿಕಾ ನಾಯ್ಡು ತುಂಟಾಟ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತ್ತೆ. ಅಷ್ಟೇ ಅಲ್ಲ ಅವರ ನಗುವಿನ ಹಿಂದಿನ ನೋವಿನ ಕಥೆಯೇ ಕೃಷ್ಣನ ದಿಲ್ ಪಸಂದ್ ಗೆ ಬಿಗ್ ಟ್ವಿಸ್ಟ್..


ಇದನ್ನೂ ಓದಿ : 7th Pay Commission: ದಿನ ಒಂದು ಗಂಟೆ ಹೆಚ್ಚು ಕೆಲಸ ಮಾಡುವಂತೆ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಕರೆ


ಸಂಪ್ರದಾಯದ ಕುಟುಂಬ ಹುಡುಗಿಯ ಪಾತ್ರದಲ್ಲಿ ಮೇಘಾ ಶೆಟ್ಟಿ ತುಂಬಾ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯರ ನಟ ರಂಗಾಯಣ ಆವರ ಅದ್ಬುತ ನಟನೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳತ್ತದೆ. ಕೃಷ್ಣನ ಅಪ್ಪನಾಗಿ ನೋಡುಗರಿಗೆ ಪೋಷಕರ ಮಹತ್ವವನ್ನು ಅರ್ಥಪೂರ್ಣವಾಗಿ ಹೇಳುತ್ತಾರೆ.ಇನ್ನೂ ಹಾಸ್ಯ ನಟ ಸಾಧು ಕೋಕಿಲ,ತಬಲಾ ನಾಣಿ, ಗಿರಿಯವರ ಕಾಮಿಡಿ ಕಚಗುಳಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವುದರಲ್ಲಿ ಡೌಟೆ ಇಲ್ಲ. ಅಜಯ್‌ ರಾವ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರು ಸಹ. ಅವರ ಆಕ್ಟಿಂಗ್ ಗೆ ಪುಲ್ ಮಾರ್ಕ್ ಕೊಡಲೆಬೇಕು. ಇನ್ನು ಛಾಯಾಗ್ರಹಣ, ಸಂಗೀತ, ಆಕ್ಷನ್ ಸೂಪರ್ ಆಗಿವೆ.


ಇದನ್ನೂ ಓದಿ : "ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚನೆ; ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಮನವಿ


ಇದೊಂದು ಪಕ್ಕಾ ಪೈಸಾ ವಸೂಲ್ ಸಿನಿಮಾ ಇದಾಗಿದ್ದು, ಪ್ರೇಕ್ಷಕನಿಗೆ ಒಂಚೂರು ಬೋರ್ ಹೊಡೆಸಲ್ಲ. ಮಿಸ್ ಮಾಡದೇ ಕುಟುಂಬ ಸಮೇತ ನೋಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.