Dilip Kumar Health Update - ಬಾಲಿವುಡ್ ನ (Bollywood) ಹಿರಿಯ ದಿಗ್ಗಜ ನಟ ದಿಲೀಪ್ ಕುಮಾರ್ (Veteran Actor Dilip Kumar)ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಭಾನುವಾರ ದಿಲೀಪ್ ಕುಮಾರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಸಾಯಿರಾ ಬಾನು ಅವರ ವತಿಯಿಂದ ಮಾಡಲಾಗಿರುವ ಈ ಟ್ವೀಟ್ ನಲ್ಲಿ ದಿಲೀಪ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿತ್ತು. ಆದರೆ, ಇದೀಗ ದಿಲೀಪ್ ಕುಮಾರ್ ಅವರ ಪುಪ್ಪುಸದಲ್ಲಿ ನೀರು ತುಂಬಿರುವ ವರದಿಗಳು ಪ್ರಕಟಗೊಂಡಿವೆ. 


COMMERCIAL BREAK
SCROLL TO CONTINUE READING

Bilateral Pleural Iffusion ವಿರುದ್ಧ ಹೋರಾಡುತ್ತಿದ್ದಾರೆ ಹಿರಿಯ ನಟ
ಮಾಧ್ಯಮ ವರದಿಗಳ ಪ್ರಕಾರ ದಿಲೀಪ್ ಕುಮಾರ್ ಅವರು Bilateral Pleural Iffusion ವಿರುದ್ಧ ಹೋರಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಅವರ ಪುಪ್ಪುಸದಲ್ಲಿ ನೀರು ತುಂಬಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಹಿಂದುಜಾ ಆಸ್ಪತ್ರೆಯ ವೈದ್ಯರು, "ದಿಲೀಪ್ ಕುಮಾರ್ ಅವರು ಸದ್ಯ ವೆಂಟಿಲೆಟರ್ ಮೇಲಿಲ್ಲ ಹಾಗೂ ಅವರನ್ನು ICUನಲ್ಲಿ ದಾಖಲಿಸಲಾಗಿಲ್ಲ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ವಯಸ್ಸಿನ ಹಿನ್ನೆಲೆ ಪ್ರಸ್ತುತ ಎನ್ನನ್ನೂ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.


5G ನೆಟ್ ವರ್ಕ್ ವಿರೋಧಿಸಿ ಅರ್ಜಿ ಸಲ್ಲಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ.ಗಳ ದಂಡ


ದಿಲೀಪ್ ಕುಮಾರ್ ಅವರ ಸಹೋದರರ ನಿಧನ
ಕೆಲ ಸಮಯದ ಹಿಂದೆ ದಿಲೀಪ್ ಕುಮಾರ್ ಅವರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಂದೂ ಕೂಡ ಅವರಿಗೆ ಉಸಿರಾಟದಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಲಾಗಿತ್ತು. ಬಳಿಕ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದ ಸಾಯರಾ ಬಾನೋ, ನಿಯಮಿತ ಚೆಕ್ ಅಪ್ ಗಾಗಿ  ದಿಲೀಪ್ ಕುಮಾರ (Dilip Kumar) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೆಕ್ ಅಪ್ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ ಎಂದಿದ್ದರು. ಕಳೆದ ವರ್ಷ ಕೊವಿಡ್ (Covid-19) ಹಿನ್ನೆಲೆ ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರು ನಿಧನರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ- ಕನ್ನಡದ ಹಿರಿಯ ನಟಿ ಬಿ.ಜಯಾ ಇನ್ನಿಲ್ಲ, ಕಂಬನಿ ಮಿಡಿದ ಚಿತ್ರರಂಗ


ದಿಲೀಪ್ ಕುಮಾರ್ ಅವರ ಹಿಟ್ ಚಿತ್ರಗಳು ಹಾಗೂ ಪುರಸ್ಕಾರಗಳು
ಬಾಲಿವುಡ್ ನ ದಿಗ್ಗಜ ಸೂಪರ್ ಸ್ಟಾರ್ ಗಳಲ್ಲಿ ಒಂದಾಗಿರುವ ದಿಲೀಪ್ ಕುಮಾರ್ ಅವರ ತಮ್ಮ ಕಾಲದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದರು. ಅವರು ನೀಡಿರುವ ಹಿಟ್ ಚಿತ್ರಗಳಲ್ಲಿ 'ಜ್ವಾರ್ ಭಾಟಾ, ಅಂದಾಜ್, ಆನ್, ಮುಗಲ್-ಎ-ಆಜಮ್, ಗಂಗಾ ಜಮುನಾ, ಕ್ರಾಂತಿ, ದೇವದಾಸ್, ಆಜಾದ್, ಕರ್ಮಾ ಹಾಗೂ ಸೌದಾಗರ್ ಸೇರಿದಂತೆ ಹಲವು ಚಿತ್ರಗಳು ಶಾಮೀಲಾಗಿವೆ. ಓರ್ವ ಅತ್ಯುತ್ತಮ ನಟನಾಗಿ ದಿಲೀಪ್ ಕುಮಾರ್ ಅವರು 8 ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇದಲ್ಲದೆ ಅವರಿಗೆ ದಾದಾಸಾಹೇಬ್ ಫಾಲ್ಕೆ ಹಾಗೂ ಪದ್ಮ ಭೂಷಣ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿದೆ.


ಇದನ್ನೂ ಓದಿ-Happy Birthday Mani Ratnam: ಕನ್ನಡದ ಪಲ್ಲವಿ ಅನುಪಲ್ಲವಿ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ಮಣಿರತ್ನಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ