ಮುಂಬಯಿ : ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಆರೋಗ್ಯ (Dilip Kumar Health) ಮತ್ತೆ ಬಿಗಡಾಯಿಸಿದೆ. ಲಭ್ಯ ಮಾಹಿತಿ ಪ್ರಕಾರ ದಿಲೀಪ್ ಕುಮಾರ್ ಅವರನ್ನು ಮುಂಬಯಿಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲೀಪ್ ಕುಮಾರ್ ಆರೋಗ್ಯ ಏರುಪೇರಾಗಿರುವುದನ್ನು (Dilip Kumar Health Update) ಪತ್ನಿ ಸಾಯಿರಾ ಬಾನು ಖಚಿತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ದಿಗ್ಗಜ ನಟನಿಗೆ ಆಗಿದ್ದೇನು..?
ದಿಲೀಪ್ ಕುಮಾರ್ (Dilip Kumar) ಆವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಉಸಿರಾಟಕ್ಕೆ ತೀವ್ರ ಸಮಸ್ಯೆಯಾದ ಹಿನ್ನೆಲೆಯಲ್ಲಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆಯೇ ಅವರಿಗೆ  ಸ್ವಲ್ಪ ಮಟ್ಟಿಗೆ ಉಸಿರಾಟದ ಸಮಸ್ಯೆ ಇತ್ತು. ಇದೀಗ ಅದು ಬಿಗಡಾಯಿಸಿದೆ ಎನ್ನಲಾಗಿದೆ. ದಿಲೀಪ್ ಕುಮಾರ್ ವಯೋಸಹಜವಾಗಿ ದುರ್ಬಲರಾಗಿದ್ದು, ಇಮ್ಯೂನಿಟಿ ಲೆವೆಲ್ (Immunity level) ಕೂಡಾ ಕಡಿಮೆ ಇದೆ. ಕಳೆದ ವರ್ಷ ಕೂಡಾ ಅವರ ಆರೋಗ್ಯ ಬಿಗಡಾಯಿಸಿತ್ತು. ಉಸಿರಾಟದ ಸಮಸ್ಯೆಯಿಂದಾಗಿಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್ ಕುಮಾರ್ ಆರೋಗ್ಯಕ್ಕಾಗಿ (Dilip Kumar Health) ಪ್ರಾರ್ಥಿಸಿ ಎಂದು ಅವರ ಪತ್ನಿ ಸಾಯಿರಾ ಬಾನು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು.


ಇದನ್ನೂ ಓದಿ :  ಅಪ್ರಾಪ್ತೆ ಮೇಲೆ ಅತ್ಯಾಚಾರ ಕಿರುತೆರೆ ನಟ ಪರ್ಲ್ ವಿ ಪುರಿ ಬಂಧನ


ದಿಲೀಪ್ ಕುಮಾರ್ ಆರೋಗ್ಯದ ಬಗ್ಗೆ ನಟಿ ಸಾಯಿರಾ ಬಾನು (Saira Banu) ತುಂಬಾ ನಿಗಾ ಇಡುತ್ತಾರೆ. 12ನೇ ವಯಸ್ಸಿನಲ್ಲೇ ಸಾಯಿರಾ ಬಾನು ಮೇಲೆ ಪ್ರೀತಿ ಬೆಳೆದಿತ್ತು ಎಂದು ದಿಲೀಪ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮುಂಬಯಿಯ ಮೆಹಬೂಬ ಸ್ಟುಡಿಯೋದಲ್ಲಿ (Mehboob studio Mumbai) ಮೊದಲ ಬಾರಿಗೆ ದಿಲೀಪ್ ಕುಮಾರ್ ಸಾಯಿರಾ ಬಾನು ಭೇಟಿಯಾಗಿದ್ದರು.


ಇದನ್ನೂ ಓದಿ : 5G ನೆಟ್ ವರ್ಕ್ ವಿರೋಧಿಸಿ ಅರ್ಜಿ ಸಲ್ಲಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ.ಗಳ ದಂಡ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ