Mannara chopra : ಎ.ಎಸ್.ರವಿಕುಮಾರ್ ಚೌಧರಿ ನಿರ್ದೇಶನದಲ್ಲಿ ರಾಜ್ ತರುಣ್ ನಾಯಕನಾಗಿ ನಟಿಸಿರುವ ಚಿತ್ರ ‘ತಿರಗಬಡರ ಸಾಮಿ’. ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚಿಗೆ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಎ.ಎಸ್.ರವಿಕುಮಾರ್ ನಾಯಕಿ ಮನ್ನಾರ ಚೋಪ್ರಾ ಅವರಿಗೆ ಮುತ್ತಿಟ್ಟಿದ್ದರು, ಇದು ಚರ್ಚೆಗೆ ಕಾರಣವಾಯಿತು. ಅಲ್ಲದೆ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.


COMMERCIAL BREAK
SCROLL TO CONTINUE READING

ಹೌದು.. ಚಿತ್ರತಂಡ ಫೋಟೋಗೆ ಪೋಸ್ ಕೊಡುತ್ತಿದ್ದಾಗ ಎಲ್ಲರೂ ನೋಡುತ್ತಿರುವಾಗಲೇ ನಿರ್ದೇಶಕರು ನಾಯಕಿಗೆ ಮುತ್ತು ಕೊಟ್ಟಿದ್ದಾರೆ. ಮನ್ನಾರ ನಿರ್ದೇಶಕರ ವರ್ತನೆ ನೋಡಿ ಬೆಚ್ಚಿಬಿದ್ದರು. ಅಲ್ಲದೆ, ಮುಜುಗರ ಅನುಭವಿಸುತ್ತಿದ್ದರೂ, ಸಹ ನಗುತ್ತಾ ಎಲ್ಲವನ್ನು ಸರಿಪಡಿಸಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.


ರಾಖಿ ಕಟ್ಟಿದ ಕೈಗಳಿಂದಲೇ ತಾಳಿ ಕಟ್ಟಿಸಿಕೊಂಡಿದ್ದ ನಟಿ...ಶ್ರೀದೇವಿ ಬೋನಿ ಕಪೂರ್‌ ಲವ್‌ ಸ್ಟೋರಿ!


ಸಿನಿಮಾ ಇಂಡಸ್ಟ್ರಿಯಲ್ಲಿ ಇದೆಲ್ಲಾ ಮಾಮೂಲು ಅಂತ ಕೆಲವರು ಹೇಳಿದ್ರೆ, ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ದೇಶಕರಿಗೆ ನಾಯಕಿಯ ಮೇಲೆ ಸೆಳೆತ ಸಾಮಾನ್ಯ. ಆದರೆ, ಮಾಧ್ಯಮಗಳ ಮುಂದೆ ಎಲ್ಲರೂ ನೋಡುತ್ತಿರುವಾಗಲೇ ಈ ರೀತಿ ವರ್ತನೆ ಮಾಡಿದ್ದು ಅತ್ಯಂತ ಕೆಟ್ಟ ವಿಷಯ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.


ಇನ್ನು ರವಿಕುಮಾರ್ ಕಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ, ಮನ್ನಾರನ್ನು ಪ್ರೀತಿಯಿಂದ ಮುದ್ದಾಡಿದೆ. ಕೆಟ್ಟ ಉದ್ದೇಶದಿಂದ ಆ ರೀತಿ ಮಾಡಿಲ್ಲ. ನಟಿ ಮನ್ನಾರಾ ಚೋಪ್ರಾಗೆ ಈ ಕುರಿತು ಸಮಸ್ಯೆ ಇಲ್ಲದಿರುವಾಗ ಜನ ಯಾಕೆ ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ಮಗಳಿಗೂ ಹೀಗೆ ಮುತ್ತು ಕೊಡುತ್ತೇನೆ. ಇದರಲ್ಲಿ ಏನೂ ತಪ್ಪಿಲ್ಲ. ಈ ವಿವಾದದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.