ದರ್ಶನ್ ಜೊತೆ ಈ ಸ್ಟಾರ್ ನಟಿಗೂ ಇತ್ತಾ ಸಂಬಂಧ? ನಿರ್ದೇಶಕ ಓಂ ಪ್ರಕಾಶ್ ರಾವ್ ಬಿಚ್ಚಿಟ್ರು ಆ ಗುಟ್ಟು !
Director Om Prakash Rao: ಕಲಾಸಿಪಾಳ್ಯ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ನಿಖಿತಾ ತುಕ್ರಾಲ್ ಕುರಿತಾದ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
Nikita Thukral Darshan relationship: ದರ್ಶನ್ ಸದ್ಯ ಜೈಲು ಹಕ್ಕಿಯಾಗಿದ್ದಾರೆ. ದರ್ಶನ್ ಸಿನಿಮಾ ಜೀವನದಲ್ಲಿ 2004ರಲ್ಲಿ ರಿಲೀಸ್ ಆದ ಕಲಾಸಿಪಾಳ್ಯ ಚಿತ್ರ ಬಹುದೊಡ್ಡ ಹಿಟ್‌ನೀಡಿತು. ಅಲ್ಲಿಂದ ದರ್ಶನ್ ಅದೃಷ್ಟ ಒಲಿಯಿತು. ಕಲಾಸಿಪಾಳ್ಯ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ದರ್ಶನ್ ಬಂಧನದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ನಟಿ ನಿಖಿತಾ ತುಕ್ರಾಲ್ ಕುರಿತಾದ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
2004 ರಿಂದ 2011ರವರೆಗೂ ದರ್ಶನ್ ಮತ್ತು ಓಂಪ್ರಕಾಶ್ ರಾವ್ ಸ್ನೇಹಿತರಾಗಿದ್ದರು. ಕಲಾಸಿಪಾಳ್ಯ, ಅಣ್ಣಾವ್ರು, ಅಯ್ಯ, ಮಂಡ್ಯ, ಯೋಧ ಹಾಗೂ ಪ್ರಿನ್ಸ್ ಹೀಗೆ ದರ್ಶನ್ ಅನೇಕ ಚಿತ್ರಗಳನ್ನು ಓಂಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ಓಂಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿದ ಯೋಧ ಮತ್ತು ಪ್ರಿನ್ಸ್ ಚಿತ್ರದಲ್ಲಿ ದರ್ಶನ್ ಜೊತೆ ನಟಿ ನಿಖಿತಾ ತುಕ್ರಾಲ್ ನಟಿಸಿದ್ದಾರೆ.
ಇದನ್ನೂ ಓದಿ: ನನಗೂ ಕೆಟ್ಟ ಮೆಸೇಜ್‌ಗಳು ಬಂದಿವೆ.. ಕಾನೂನಿನ ಮೇಲೆ ಜನರ ಭರವಸೆ ಉಳಿಸುತ್ತಾರೆ ಅಂತ ನಂಬಿದ್ದೇನೆ: ನಟಿ ರಮ್ಯಾ ಪೋಸ್ಟ್ ವೈರಲ್
ದರ್ಶನ್ ಬಂಧನದ ಬಗ್ಗೆ ಮಾತನಾಡಿದ ನಿರ್ದೇಶಕ ಓಂಪ್ರಕಾಶ್ ರಾವ್, ಇಂಥ ಕೃತ್ಯ ನಡೆಯಬಾರದಿತ್ತು. ದರ್ಶನ್ ತುಂಬಾ ಒಳ್ಳೆಯ ವ್ಯಕ್ತಿ. ಆತ ಜಂಟಲ್ ಮ್ಯಾನ್. ಯಾವ ವಿಚಾರವನ್ನೂ ಅಷ್ಟು ಬೇಗ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ದರ್ಶನ್ ಜೊತೆ ನಾನು ತುಂಬಾ ಆಪ್ತನಾಗಿದ್ದೆ. ದರ್ಶನ್‌ದು ಏಕ್ ಮಾರ್ ದೋ ತುಕುಡಾ ಅನ್ನೋ ಕ್ಯಾರೆಕ್ಟರ್. ದರ್ಶನ್ ಜೊತೆಗಿನ ನನ್ನ ಸ್ನೇಹ 2011ರಲ್ಲಿಯೇ ಕೊನೆಯಾಯ್ತು ಎಂದಿದ್ದಾರೆ.
ನನ್ನ ಜೊತೆಯಿದ್ದಾಗ ದರ್ಶನ್ ಹೆಚ್ಚು ಕುಡಿಯುತ್ತಿರಲಿಲ್ಲ. ನಾನು ದರ್ಶನ್ ಒಟ್ಟಿಗೆ ಎರಡು ಮೂರು ಬಾರಿ ಕುಡಿದುರಬಹುದೇನೋ ಅಷ್ಟೇ. ದರ್ಶನ್ ಸುತ್ತಿಲಿದ್ದ ವ್ಯಕ್ತಿಗಳು ಅವರನ್ನ ಸರಿ ಮಾಡಬಹುದಿತ್ತು. ನಾನಿದ್ದಿದ್ದರೆ ದರ್ಶನ್ ಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ದರ್ಶನ್ ಜೊತೆ ಫ್ರೆಂಡ್‌ಶಿಪ್ ಬ್ರೇಕ್ ಆಗಲು ಕಾರಣ ಈ ನಟಿ?
ದರ್ಶನ್ ಮತ್ತು ನಾನು ಆತ್ಮೀಯರಾಗಿದ್ದೆವು. ದರ್ಶನ್ ಜೊತೆ ನಟಿ ನಿಖಿತಾ ಉತ್ತಮ ಸ್ನೇಹವಿತ್ತು. ಅದನ್ನು ನಾನು ಹಲವು ಬಾರಿ ವಿರೋಧಿಸಿದ್ದಿದೆ. ಈ ವಿಚಾರದಲ್ಲಿ ಬುದ್ದಿ ಕೂಡ ಹೇಳಿದ್ದೇನೆ. ಆದರೆ ನನ್ನ ಬಗ್ಗೆ ದರ್ಶನ್ ಬಳಿಯೇ ಹೋಗಿ ಕಂಪ್ಲೇಂಟ್ ಹೇಳಿದರು. ಆ ನಂತರ ನನ್ನ ದರ್ಶನ್ ನಡುವಿನ ಸ್ನೇಹ ಹಳಿಸಿತು. ಇದೇ ವಿಷಯದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂಬ ಸಂಗತಿ ನನಗೆ ಗೊತ್ತಾಯ್ತು. ನಿರ್ಮಾಪಕರು, ಇಡೀ ಚಿತ್ರರಂಗ ನಿಖಿತಾ-ದರ್ಶನ್ ಬಗ್ಗೆ ಆ ಕಾಲದಲ್ಲಿ ಮಾತನಾಡಿದ್ದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.