ನವದೆಹಲಿ: ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಮತ್ತು ಹಾಲಿವುಡ್ ನಟ ಜಾನ್ ಸೆನಾ ಬಾಲಿವುಡ್ ನ ರಣವೀರ್ ಸಿಂಗ್ ಪೋಟೋ ಶೇರ್ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮಾರ್ಚ್ ನಲ್ಲಿ ರಣವೀರ್ ಅವರು ಜೊಂಬಿಯಂತೆ ಕಾಣುವ ಪೋಟೋವನ್ನು ಹಂಚಿಕೊಂಡಿದ್ದರು.ಸೆನಾ ಈಗ ಆ ಚಿತ್ರವನ್ನು ಆರಿಸಿಕೊಂಡಿದ್ದಾರೆ ಮತ್ತು ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡು ಅದನ್ನು ಸ್ಟೋನ್ ಕೋಲ್ಡ್ ಸಿಂಗ್ ಎಂದು ಶೀರ್ಷಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಣವೀರ್ ಸಿಂಗ್ : "ಹಾಹಾಹಾಹಾ".ಎಂದು ಪ್ರತಿಕ್ರಿಯಿಸಿದ್ದಾರೆ.



ಬಾಲಿವುಡ್ ವ್ಯಕ್ತಿಗಳ ಪೋಟೋವನ್ನು ಸೆನಾ ತಮ್ಮ ಪ್ರೊಫೈಲ್‌ನಲ್ಲಿ ಹಂಚಿಕೊಳ್ಳುವುದು ಇದೇ ಮೊದಲಲ್ಲ. ಅವರು ಈ ಹಿಂದೆ ಇರ್ಫಾನ್ ಖಾನ್, ರಿಷಿ ಕಪೂರ್ ಮತ್ತು "ಬಿಗ್ ಬಾಸ್ 13" ಸ್ಪರ್ಧಿ ಅಸಿಮ್ ರಿಯಾಜ್ ಅವರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.ರಣವೀರ್ ಮುಂದಿನ ಚಿತ್ರ  ಕಬೀರ್ ಖಾನ್ ನಿರ್ದೇಶನದ "83" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ.