Prabhutva movie: ರಾಜಕೀಯ,ಮತದಾನ.. ಒಂದು ರೀತಿಯಲ್ಲಿ ಫುಲ್ ಬಿಸಿನೆಸ್ ಆಗಿಬಿಟ್ಟಿದೆ. ಮತದಾನ  ಎಷ್ಟು ಮಹತ್ವ ಅನ್ನೋದನ್ನ ನಾವೆಲ್ಲರೂ ಮರೆತಿದ್ದೇವೆ. ಆ ಮಹತ್ವವನ್ನ ಸಾರೋದಕ್ಕೆ ಇದೀಗ ಪ್ರಭುತ್ವ ಅನ್ನೋ ಅದ್ಭುತ ಸಂದೇಶ ಇರೋ ಸಿನಿಮಾ ನಿಮ್ಮ ಮುಂದೆ ಬರಲು ಸಿದ್ಧವಾಗಿದೆ. ಮತವನ್ನ ಹಣಕ್ಕೆ ಮಾರಿಕೊಳ್ಳಬೇಡಿ. ಮನೆ ಮಗಳನ್ನ ಮಾರಿಕೊಂಡ  ಹಾಗೇ ಅನ್ನೋ ಮೇಸೆಜ್ ಕೊಡೋ ಪ್ರಯತ್ನ ಮಾಡಿದೆ ಚಿತ್ರತಂಡ.ಮತದಾನದ ಮಹತ್ವ ಸಾರುವ 'ಪ್ರಭುತ್ವ' ಟ್ರೇಲರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ. ಚಿತ್ರದ ಮೇಕಿಂಗ್ ವಿಡಿಯೋ ನೋಡಿದ್ರೆ ನಿಜಕ್ಕೂ ನಮ್ಮ ಕನ್ನಡ ಇಂಡಸ್ಟ್ರಿ ಎಷ್ಟು ಬೆಳೆದಿದೆ ಅನ್ನ್ನೋದು ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಪ್ರೂವ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ದೇಶದ ನಾಗರೀಕರಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಆದರೂ ಕೂಡ ಪ್ರತಿ ಬಾರಿ ಚುನಾವಣೆ ಬಂದಾಗಲೂ ಕೂಡ ಒಂದಷ್ಟು ಮತದಾನ ಮಾಡದೇ ತಮಗಿರುವ ಹಕ್ಕನ್ನು ಚಲಾಯಿಸಲು ಮರೆತುಬಿಡುತ್ತಾರೆ.ಯಾಕೆ ಮತದಾನ ಮಾಡಬೇಕು ರಾಜಕಾರಣಿಗಳು ಹೇಗೆ ಇರಬೇಕು ಅನ್ನೋದು ಈ ಸಿನಿಮಾದಿಂದ ತಿಳಿಯುತ್ತೆ.


ಇದನ್ನೂ ಓದಿ : Malavika Avinash:‌ ನಟಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು! ಹೀಗಿದೆ ಆರೋಗ್ಯ ಸ್ಥಿತಿ..


ಈ ಹಾಡನ್ನು ನಿರ್ದೇಶಕ ಹರಿ ಸಂತೋಷ್ ಅವರು ಬರೆದಿದ್ದು, ಕಾರ್ತಿಕ್ ಮತ್ತು ಸುಪ್ರಿಯಾ ರಾಮ್ ಹಾಡಿದ್ದಾರೆ. ಈ ಹಾಡಿನ ಸಂಗೀತ ಸಂಯೋಜನೆ ಎಮಿಲ್ ಅವರದ್ದು. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ. ಛಾಯಾಗ್ರಾಹಕರಾಗಿ ಕೆ. ಎಸ್. ಚಂದ್ರಶೇಖರ್ ಕೆಲಸ ಮಾಡಿದ್ದಾರೆ. ಮೇಘಡಹಳ್ಳಿ ಡಾ. ಶಿವಕುಮಾರ್ ಅರ್ಪಿಸುವ 'ಪ್ರಭುತ್ವ' ಸಿನಿಮಾವನ್ನು ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ.


ಪ್ರೇಮಿಸಂ, ರಾಜಧಾನಿ, ಜಾತ್ರೆ, ಪ್ಲಸ್‌ ಮುಂತಾದ ಸಿನಿಮಾಗಳ ಮೂಲಕ ಗಮನಸೆಳೆದ ನಟ ಚೇತನ್‌ ಚಂದ್ರ ಅವರು ಈಗ 'ಪ್ರಭುತ್ವ' ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದ್ದಾರೆ . ಈ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಪಾವನಾ ಗೌಡ ಕಾಣಿಸಿಕೊಂಡಿದ್ದು, ಏಪ್ರಿಲ್ 21ಕ್ಕೆ ಈ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ..


ಇದನ್ನೂ ಓದಿ : Sa ri ga ma pa19: ಯಾರ ಪಾಲಾಗಲಿದೆ ಜೀ ಕನ್ನಡ ವಾಹಿನಿಯ ಸರಿಗಮಪ' ಸೀಸನ್ 19ರ ಗೆಲುವಿನ ಕೀರಿಟ !


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.